
Achievements of students of Hirenagappa College of Commerce, Gunjahalli at the Abhivrudhdi-2026 Management Fest held at BITM College, Bellary


ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿ ನಡೆದ ಅಭಿವೃಧ್ದಿ -2026 ಮ್ಯಾನೇಜಮೆಂಟ್ ಫೆಸ್ಟ್ ನಲ್ಲಿ
ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಗಂಗಾವತಿ: ಗುಂಜಹಳ್ಳಿ ಹಿರೇನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಏಪ್ರಿಲ್-27 ರಂದು ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿ ನಡೆದ ಅಭಿವೃಧ್ದಿ -2026 ಮ್ಯಾನೇಜಮೆಂಟ್ ಫೆಸ್ಟ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸ್ಟಾರ್ಟ್ ಅಪ್ (Startup) ವಿಭಾಗದಲ್ಲಿ ಕು. ಅನನ್ಯ ಮತ್ತು ಕು. ಅಪೂರ್ವ ಪ್ರಥಮ ಸ್ಥಾನವನ್ನು ಪಡೆದರು ಮತ್ತು ಎಐ (AI) ವಿಭಾಗದಲ್ಲಿ ಕು. ಮಹೇಶ್ ಮತ್ತು ಕು. ಸರ್ಫರಾಜ್ ದ್ವೀತಿಯ ಸ್ಥಾನ ಪಡೆದರು ಹಾಗೂ ಒಟ್ಟು 22 ಸದಸ್ಯರ ತಂಡವು ಫೆಸ್ಟ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ “ಬೆಸ್ಟ್ ಪರ್ಫಾರ್ಮೆನ್ಸ್” ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈ ಸಾಧನೆಗೆ ತಂಡದ ಮಾರ್ಗದರ್ಶಕರಾದ ಶ್ರೀಮತಿ ಜಯಲಕ್ಷ್ಮಿ ಹಾಗೂ ಶ್ರೀ ದಾದಾಖಲಂದರ್ ಅವರ ಮಾರ್ಗದರ್ಶನವೂ ಪ್ರಮುಖವಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಯು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳತ್ತ ಅವರು ಮುನ್ನಡೆಯಲೆಂದು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹಾರೈಸಿದ್ದಾರೆ.
