230ಅಂಗವಿಕಲಫಲಾನುಭವಿಗಳಿಗೆ ಸರ್ಕಾರದಿಂದಲೇ ನೀಡಿದ್ದ ನಿವೇಶನಗಳನ್ನು,ಸರ್ಕಾರವೇ ನೋಟಿಸ್‌ ಮೂಲಕ ಖಾಲಿ ಮಾಡಿಸುತ್ತಿರುವ ಕ್ರಮ ಖಂಡನೀಯ: ಅಶೋಕ ಗುಡಿಕೋಟಿ.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
The government's action of vacating the plots given to 230 disabled beneficiaries by issuing notices is condemnable: Ashok Gudikoti.




230 ಅಂಗವಿಕಲ ಫಲಾನುಭವಿಗಳಿಗೆ ಸರ್ಕಾರದಿಂದಲೇ ನೀಡಿದ್ದ ನಿವೇಶನಗಳನ್ನು,
ಸರ್ಕಾರವೇ ನೋಟಿಸ್‌ ಮೂಲಕ ಖಾಲಿ ಮಾಡಿಸುತ್ತಿರುವ ಕ್ರಮ ಖಂಡನೀಯ: ಅಶೋಕ ಗುಡಿಕೋಟಿ.

ಜಾಹೀರಾತು

ಗಂಗಾವತಿ: ಬೆಂಗಳೂರಿನ ಕೆಂಗೇರಿ ಹೋಬಳಿಯ ಚಲ್ಲಘಟ್ಟ ಗ್ರಾಮದ ಸರ್ವೆ ನಂ: 13 ರಲ್ಲಿ 2024 ರಲ್ಲಿ ಸರ್ಕಾರದಿಂದ 20X30 ಅಳತೆಯ ನಿವೇಶನಗಳನ್ನು ರಚಿಸಿ, 230 ಅಂಗವಿಕಲ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿ, ಪ್ರತಿ ಫಲಾನುಭವಿಗೆ ಖಾತಾ ನೋಂದಣಿ ಮಾಡಿದಾಗ್ಯೂ, ಈಗ ಏಕಾಏಕಿ ಇದೀಗ ಬಿಡಿಎ ನೋಟಿಸ್ ನೀಡಿ, 2010 ಫೆಬ್ರವರಿ 18 ರಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಗೆಂದು ಈ ಜಮೀನು ಅಂತಿಮ ಅಧಿಸೂಚನೆಗೆ ಒಳಪಟ್ಟಿತ್ತು. ಆದ್ದರಿಂದ ಜಮೀನು ಖಾಲಿ ಮಾಡುವಂತೆ ನೋಟಿಸ್ ನೀಡಿರುವುದು ತೀವ್ರ ಖಂಡನೀಯ ಎಂದು ಕರವೇ ಪ್ರವೀಣಕುಮಾರ ಅಂಗವಿಕಲರ ಬಣದ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಸರ್ಕಾರದ ವಿರುದ್ಧ ಕಿಡಿಕಾರಿದ್ಧಾರೆ.
ಈ ಹಿಂದೆ ಚಲ್ಲಘಟ್ಟದ ಸರ್ವೆ ನಂ: 13 ರಲ್ಲಿ 5-00 ಎಕರೆ ಜಮೀನನ್ನು ಶ್ರೀ ಮಾರುತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದವರಿಗೆ ನಿವೇಶನದ ಉದ್ದೇಶಕ್ಕಾಗಿ ನೀಡುವಂತೆ ವಿಶೇಷ ಜಿಲ್ಲಾಧಿಕಾರಿಯವರು 2010 ಜನವರಿ 6 ರಂದು ಆದೇಶಿಸಿ ಕಾಯ್ದಿರಿಸಿದ್ದರು. ಆ ನಂತರ ಎಲ್ಲ ಪ್ರಕ್ರಿಯೆ ನಡೆಸಿ ಜಮೀನಿನಲ್ಲಿ 20X30 ರ ವಿಸ್ತೀರ್ಣದಂತೆ ಒಟ್ಟು 230 ನಿವೇಶಗಳನ್ನು ವಿಗಂಡಿಸಿ ರಾಜೀವ ಗಾಂಧಿ ವಸತಿ ನಿಗಮದ ಮೂಲಕ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿತ್ತು. 2024 ರಲ್ಲಿ ಅಂಗವಿಕಲ ಫಲಾನುಭವಿಗಳಿಗೆ ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್ ಅವರ ಸಮ್ಮುಖದಲ್ಲೇ ಹಕ್ಕುಪತ್ರಗಳನ್ನು ಕೂಡ ವಿತರಿಸಲಾಗಿದ್ದು, ಇ-ಖಾತಾ, ನೋಂದಣಿ, ಕಂದಾಯ ಪಾವತಿಯು ಕೂಡಾ ಆಗಿರುತ್ತದೆ. ಅಂಗವಿಕಲ ಫಲಾನುಭವಿಗಳಿಗೆ ವಿತರಿಸಲಾದ 230 ನಿವೇಶನಗಳನ್ನು ವಾಪಸ್ಸು ಪಡೆಯುತ್ತಿರುವ ಸರ್ಕಾರದ ನಡೆಯು ವಿಕಲಚೇತನರ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯತನವನ್ನು ಎದ್ದು ತೋರಿಸುತ್ತದೆ. ಕೂಡಲೇ ಸರ್ಕಾರ ಈ ನಿವೇಶನ ಹಿಂಪಡೆಯುವ ಪ್ರಕ್ರಿಯೆಯನ್ನು ಕೈಬಿಟ್ಟು, ಅಂಗವಿಕಲ ಫಲಾನುಭವಿಗಳಿಗೆ ನ್ಯಾಯದೊರಕಿಸಿಕೊಡಬೇಕೆಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಅಂಗವಿಕಲರ ಘಟಕ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ತೋರಿದಲ್ಲಿ ಎಲ್ಲಾ ಫಲಾನುಭವಿಗಳೂಂದಿಗೆ ಸೇರಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಾಕ್ಸ್‌: ಕಾನೂನುಬದ್ದವಾಗಿ ನಮಗೆ ಫಲಾನುಭವಿಗಳಿಗೆ ನಿವೇಶನಗಳನ್ನು ಕೊಡಲಾಗಿದೆ. 2006 ರಿಂದಲೂ ಅದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದು, ಅಂಗವಿಕಲರಿಗಾಗಿ ಮಂಜೂರಾದ ಜಮೀನು ಇದಾಗಿದೆ. ಈ ನಿವೇಶನಗಳಿಗೆ ಹಕ್ಕುಪತ್ರ ಪಡೆದಿರುವವರೆ ಕಾನೂನುಬದ್ದ ಮಾಲೀಕರು. ಅದರ ಹೊರತು ಬೇರೆ ಯಾರಿಗೂ ಹಕ್ಕಾಗಲೀ ಹಿತಾಸಕ್ತಿಯಾಗಲೀ ಇರುವುದಿಲ್ಲ:

  • ಅಶೋಕ ಗುಡಿಕೋಟಿ, ತಾಲೂಕ ಅಧ್ಯಕ್ಷರು, ಕರವೇ (ಪ್ರವೀಣಕುಮಾರ ಬಣ) ಅಂಗವಿಕಲರ ಘಟಕ. ಗಂಗಾವತಿ
Total Views: 0
Share This Article