
Oath-taking ceremony of the National Women's and Youth Sections of the All India Veerashaiva-Lingayat Mahasabha

ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ:

ಬೆಂಗಳೂರು: ಟೌನ್ ಹಾಲ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಕಾರ್ಯಕ್ರಮ
ದಿವ್ಯಸಾನ್ನಿಧ್ಯವನ್ನ
ಪಟ್ಟದ ಶ್ರೀ ಡಾ॥ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು,
ಡಾ| ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಸ್ವಾಮಿಗಳು, ಸಂಸದರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರರವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ.) ಅಧ್ಯಕ್ಷರು, ಸಚಿವರಾದ ಈಶ್ವರ್ ಬಿ.ಖಂಡ್ರೆರವರು, ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರುಗಳಾದ ಲಕ್ಷ್ಮೀ ಹೆಬ್ಬಾಳಕರ್, ಶರಣ ಪ್ರಕಾಶ ಪಾಟೀಲ್, ಶರಣ ಬಸಪ್ಪ ದರ್ಶನಪುರ, ಶಾಸಕರುಗಳಾದ ವಿಜಯಾನಂದ್ ಕಾಶಪ್ಪನವರ, ಶಿವಗಂಗಾ ಬಸವರಾಜ್, ಕರ್ನಾಟಕ ರಾಜ್ಯ ಘಟಕದ ರಾಜ್ಯಾಧ್ಯಕ್ಷರಾದ ಶಂಕರ ಬಿದರಿರವರು, ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ, ಹಾನಗಲ್ ಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿದರು.
*ಪಟ್ಟದ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿರವರು* ಮಾತನಾಡಿ ಸಮಾಜವನ್ನು ಕಟ್ಟುವುದು ಮಹಿಳೆ ಮತ್ತು ಯುವಕರಿಂದ ಸಾಧ್ಯ. ಪ್ರತಿ ಮನೆಯಲ್ಲಿ ಒಬ್ಬ ಸಮಾಜ ಸೇವಕ ಇದ್ದರೆ ಸಮಾಜ ಅಭಿವೃದ್ದಿ ಸಾಧ್ಯ.
ವೀರಶೈವ-ಲಿಂಗಾಯಿತ ಸಮಾಜ ಹೆಸರು ತರುವಂತ ಕೆಲಸ ಮಠ, ಸ್ವಾಮೀಜಿಗಳಿಂದ ಮಾತ್ರವಲ್ಲ ಪ್ರತಿಯೊಬ್ಬ ನಮ್ಮ ಸಮಾಜದ ವ್ಯಕ್ತಿಗಳು ಶ್ರಮಿಸಬೇಕು.
ಕಾಯಕ ಸಮಾಜ, ದಾಸೋಹ ಸಮಾಜ ನಮ್ಮದು
ಅಚಾರ, ವಿಚಾರವಂತ ಸಂಸ್ಕಾರವಂತ ಧರ್ಮ ವೀರಶೈವ ಲಿಂಗಾಯಿತ ಧರ್ಮ. ಎರಡು ಜಾತಿ ಅಚಾರ ಇದ್ದವನು, ಆಚಾರ ಇಲ್ಲದವನು . ಕಟ್ಟಿಗಳನ್ನು ಸುಟ್ಟರೆ ಬೂದಿ ಯಾಗತ್ತದೆ. ಶಿವಭಕ್ತನಿಗೆ ಜಾತಿ ಇಲ್ಲ.ಧರ್ಮ ಉಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.
*ಡಾ||ಶ್ರೀ ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು* ಕೋಗಿಲೆ ಹಾಡಬೇಕು ಯಾರು ನೋಡಿ ಹಾಡುವುದಿಲ್ಲ, ನವಿಲು ಕುಣಿಯುವ ಯಾರನ್ನ ನೋಡಿ ಕುಣಿಯುವುದಿಲ್ಲ. ಸ್ವಾಮೀಜಿಗಳಾದ ನಾವು ಯಾರು ನೋಡಲಿ ಎಂದು ಸಮಾಜ ಅಭಿವೃದ್ದಿ ಮಾಡುವುದಿಲ್ಲ.
ವೀರಶೈವ-ಲಿಂಗಾಯಿತ ಧರ್ಮ ಅನ್ನ ಕೊಡುವ ಸಂಕೇತವಾಗಿದೆ. ಎದೆ ಮೇಲೆ ಕಟ್ಟಿಕೊಂಡು ಹೋಗುವ ಧರ್ಮ ನಮ್ಮದು.
ಲಿಂಗ ಇದ್ದವನು ಲಿಂಗವಂತ. ಅಪ್ಪ, ಅಮ್ಮ ಕೊಟ್ಟ ಆಸ್ತಿ ಬರುವುದಿಲ್ಲ, ಸತ್ತ ಮೇಲೆ ಗುರು ಕೊಟ್ಟ ಲಿಂಗ ಮಾತ್ರ ಬರುತ್ತದೆ.
ವೀರಶೈವ ಹುಟ್ಟಿದ ಮೇಲೆ ಲಿಂಗ ಧರಿಸಿರಬೇಕು. ನಮಗೆ ಮೈಲಿಗೆ ಇರುವುದಿಲ್ಲ. ಜಂಗಮ, ಗುರು ಲಿಂಗ ಎಲ್ಲವು ಒಂದೇ.
*ಈಶ್ವರ್ ಖಂಡ್ರೆರವರು* ಮಾತನಾಡಿ ಎಲ್ಲರು ಸಕ್ರಿಯವಾಗಿ ಸಂಘಟನೆ ಮಾಡಬೇಕು. ಮಹಾಸಭೆ ನಡೆದು ಬಂದ ಹಾದಿ 123ವರ್ಷಗಳ ಇತಿಹಾಸವಿದೆ.
ಹರಿದು ಹಂಚಿ ಹೋಗಿದ್ದ ಸಮುದಾಯ ಒಟ್ಟು ಮಾಡುವುದು ಉದ್ದೇಶವಾಗಿತ್ತು.
ಅಖಿಲ ಭಾರತ ವೀರಶೈವ ಮಹಾಸಭಾ ವಿಶ್ವದ ಎಲ್ಲ ಕಡೆಗಳಲ್ಲಿ ಇರುವ ಸಮಾಜದವರನ್ನ ಸಂಘಟಿಸಲಾಗುತ್ತಿದೆ. ಸ್ವಾಮೀಜಿಗಳು, ಗಣ್ಯರು ನಮ್ಮ ಸಮಾಜದ ಏಳಿಗೆಗಾಗಿ, ಸಂಘಟನೆ ಶ್ರಮಿಸಿದ್ದಾರೆ.
ವೈಜ್ವಾನಿಕವಾಗಿ ಇಷ್ಟಲಿಂಗ ಪೂಜೆ ತರಭೇತಿ ಆರಂಭಿಸಲಾಗುವುದು.
ವ್ಯಸನ ಮುಕ್ತ ಸಮಾಜವಾಗಬೇಕು, ಸಮ ಸಮಾಜ ನಿರ್ಮಾಣವಾಗಬೇಕು.ಬಸವ ಕಲ್ಯಾಣದಲ್ಲಿ 650ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ 480ಕೋಟಿ ಅನುದಾನ ನೀಡಲಾಗಿದೆ ಜಗತ್ತಿಗೆ ಮಾದರಿಯಾಗಿದೆ. ಮುಂದಿನ ಬಸವ ಜಯಂತಿಯಂದು ಅನುಭವ ಮಂಟಪ ಉದ್ಘಾಟನೆಮಾಡಲಾಗುವುದು.
*ಜಗದೀಶ್ ಶೆಟ್ಟರರವರು* ಮಾತನಾಡಿ ವೀರಶೈವ-ಲಿಂಗಾಯಿತ ಮಹಾಸಭಾ ಎಲ್ಲರನ್ನು ಒಗ್ಗೂಡಿಸಿಕೊಂಡು ಉದ್ದೇಶ ಇಟ್ಟುಕೊಂಡಿದೆ. ಭೀಮಣ್ಣ ಖಂಡ್ರೆರವರು ಅಧ್ಯಕ್ಷರಾಗಿ ಉತ್ತಮ ಸೇವೆ ಮಾಡಿದ್ದಾರೆ ಪ್ರತಿ ಜಿಲ್ಲೆಗಳಿಗೆ ತೆರಳಿ ಸಭೆ, ಸಂಘಟನೆ ಮಾಡಿದ ಕಾರಣದಿಂದ ನಮ್ಮ ಸಮಾಜದಲ್ಲಿ ಅತಿ ಹೆಚ್ಚು ಶಾಸಕರು ಆಯ್ಕೆಯಾದರು.
ಹಾನಗಲ್ ಕುಮಾರಸ್ವಾಮಿರವರ ದೂರದೃಷ್ಟಿ ಕಾರಣದಿಂದ ಶಿವಯೋಗಿ ಮಂದಿರ ನಿರ್ಮಾಣ ಮಾಡಿ ಧಾರ್ಮಿಕ ಪರಂಪರೆ ಮುಂದುವರೆಸಿಕೊಂಡು ಬಂದರು.
ಎಲ್ಲರನ್ನ ನಮ್ಮವರು ಎಂಬುದು ಮತ್ತು ಸಮಾನತೆಯ ತತ್ವವನ್ನು ಬಸವಣ್ಣರವರು ನೀಡಿದರು. ವೀರಶೈವ-ಲಿಂಗಾಯಿತ ಒಡೆಯಬೇಡಿ, ಹಿಂದುಳಿದ ವರ್ಗಕ್ಕೆ ಸೇರಿಸಲು ಹೋರಾಟ ಮಾಡೋಣ, ನಮ್ಮಲ್ಲಿ ಕಚ್ಚಾಟಬೇಡ ಎಂದು ಹೇಳಿದರು.
*ಬಸವರಾಜ್ ಹೊರಟ್ಟಿ* ಹಾನಗಲ್ ಕುಮಾರಸ್ವಾಮಿರವರು 1904ರಲ್ಲಿ ವೀರಶೈವ ಮಹಾಸಭಾ ಕಟ್ಟಿದರು.ವೀರಶೈವ-ಲಿಂಗಾಯಿತ ಸಮಾಜ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದರು. ಈ ಹಿಂದೆ 91ಮಂದಿ ಶಾಸಕರು ಆಯ್ಕೆಯಾಗಿದ್ದರು.
ಸ್ವಾಮೀಜಿರವರು ಸಮಾಜವನ್ನು ಬೆಳಸಬೇಕು, ರಾಜಕಾರಣಿಗಳ ಮಾತಿಗೆ ತಲೆ ತೂಗಬಾರದು. ಒಳಪಗಂಡ ಕಚ್ಚಾಟ ನಿಲ್ಲಿಸಿ.
ಬಸವಣ್ಣರವರು ಜಾತಿ, ಧರ್ಮ ನೋಡಲ್ಲಿಲ ಎಲ್ಲರು ಒಟ್ಟಾಗಿ ಕರೆದುಕೊಂಡು ಹೋದರು.
ಸಾಂಸ್ಕೃತಿಕ ನಾಯಕ ಬಸವಣ್ಣರವರು ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಪೋಟೋ ಹಾಕುವಂತೆ ಸರ್ಕಾರ ಆದೇಶ ನೀಡಿದೆ. ಬಸವಣ್ಣರವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಿ ಎಂದು ಹೇಳಿದರು.
*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರವರು* ಮಾತನಾಡಿ ನನ್ನ ಸಮಾಜದ ಕಾರ್ಯಕ್ರಮ ಅಭಿಮಾನದಿಂದ ಬಂದ್ದೀದೇನೆ. ರಾಜ್ಯದಲ್ಲಿ ವೀರಶೈವ-ಲಿಂಗಾಯಿತ ಸಮಾಜದವರು ಪ್ರತಿ ಜಿಲ್ಲೆ, ಹಳ್ಳಿಗಳಲ್ಲಿ ಇದ್ದಾರೆ. ನಮ್ಮ ಸಮಾಜದ ಹುಡುಗ-ಹುಡುಗಿಯರು ವಿದ್ಯಾವಂತರು ಅದರೆ ಐ.ಎ.ಎಸ್. ಮತ್ತು ಉನ್ನತ ಹುದ್ದೆಗಳಲ್ಲಿ ನಮ್ಮ ಸಮಾಜದವರು ಕಡಿಮೆ ಇದ್ದಾರೆ.
*ಸಚಿವರಾದ ಶರಣ ಪ್ರಕಾಶ ಪಾಟೀಲ್* ರವರು ಮಾತನಾಡಿ ಲಿಂಗಪೂಜೆ ಮತ್ತು ಆಚಾರ, ವಿಚಾರಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕು, ಎಲ್ಲರು ಲಿಂಗವನ್ನು ಕಟ್ಚಬೇಕು. 12ಶತಮಾನದ ವಚನದಲ್ಲಿ ಶಕ್ತಿ ಇದೆ.ವಚನ ಸಾಹಿತ್ಯ ಎಲ್ಲರು ಓದಬೇಕು ವಚನ ಓದಿವುದರಿಂದ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ. ನಮ್ಮ ನಡವಳಿಕೆಯಲ್ಲಿ ಬಲವಿದೆ ಮತ್ತು ಸಮಾಜದ ಎಲ್ಲರನ್ನ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇದೆ. ಎಲ್ಲ ಜಾತಿಯವರು ನಮ್ಮನ್ನ ನಂಬತ್ತಾರೆ. ಅಧಿಕಾರ, ಹಣ ಶಾಶ್ವತವಲ್ಲ, ಕಾಯಕ ಕಟ್ಟಿಕೊಂಡು ಹೋಗಬೇಕು ಎಂದು ಹೇಳಿದರು.
*ಶಂಕರ ಮಹದೇವ್ ಬಿದರಿ* ರವರು ಮಾತನಾಡಿ ಸಮಾಜ ಅಭಿವೃದ್ದಿಯಾಗಲು ಭೀಮಣ್ಣ ಖಂಡ್ರೆರವರು ಕಾರಣ. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯಿತ ಜನಾಂಗದವರು ಹೆಚ್ಚಿನಲ್ಲಿ ಇದ್ದಾರೆ.
ನಮ್ಮ ಸಮಾಜದ ಪ್ರತಿಯೊಬ್ಬರು ತಾವು ದುಡಿದ ಹಣದಲ್ಲಿ ಶೇಕಡ 2ರಷ್ಟು ಸಮಾಜದ ಅಭಿವೃದ್ದಿಗೆ ನೀಡಬೇಕು. ಸ್ವಾಮೀಜಿಗಳ ಸಮಾಜಕ್ಕೆ ಕೆಟ್ಟ ಹೆಸರು ತರುವಂತೆ ಮಾಡಬೇಡಿ, ಗ್ರಹಸ್ಥ ಆಶ್ರಮ ತೆರಳಬೇಕು ಎಂದರೆ ಪೀಠತ್ಯಾಗ ಮಾಡಿ ಎಂದು ಹೇಳಿದರು.
*ಶ್ರೀಮತಿ ವೀಣಾ ಕಾಶಪ್ಪನವರ* ಮಾತನಾಡಿ ಶಾಮನೂರು ಶಿವಶಂಕರಪ್ಪರವರ ಆಶೀರ್ವಾದದಿಂದ ರಾಷ್ಟ್ರೀಯ ಅಧ್ಯಕ್ಷೆಯಾಗಿ ಮಹಿಳಾ ಸಬಲೀಕರಣ, ಸಮಾಜ ಸಂಘಟನೆ.ಸಂಸ್ಕಾರ ಉಳಿಸಲು
ವೀರಶೈವ-ಲಿಂಗಾಯಿತ ಒಂದೇ, ಒಳಪಂಗಡದ ಸಹೋದರನ್ನ ಒಗ್ಗೂಡಿಸಿಕೊಂಡು ಹೋಗುತ್ತೇನೆ.
ನಮ್ಮಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ, ನಾವೆಲ್ಲರು ಒಂದೇ.
ಕರ್ನಾಟಕದಲ್ಲಿ 2ಕೋಟಿ, ಮಹಾರಾಷ್ಟ್ರ 1ಕೋಟಿ 50ಲಕ್ಷ ವೀರಶೈವ-ಲಿಂಗಾಯಿತ ಸಮಾಜದವರು ಇದ್ದಾರೆ ನಮ್ಮ ಸಮಾಜ ಎಂಬ ಅಭಿಮಾನ ಬೆಳಸಿಕೊಳ್ಳಿ ಎಂದು ಹೇಳಿದರು.
*ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರು, ರಾಷ್ಟ್ರೀಯ ಯುವ ಘಟಕ ರಾಷ್ಟ್ರೀಯ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್ ಪದಗ್ರಹಣ ಸಮಾರಂಭ ನೇರವೆರಿತು*
