
The results of the welfare campaign: District ಹ Collector's action on the water problem in Islampur 16th ward
ಕಲ್ಯಾಣ ಸಿರಿ ವರದಿಯ ಫಲಶೃತಿ: ಇಸ್ಲಾಂಪುರ 16ನೇ ವಾರ್ಡಿನ ನೀರಿನ ಸಮಸ್ಯೆಗೆ ಜಿಲ್ಲಾಧಿಕಾರಿಗಳ ಕ್ರಮ

ವರದಿ: ಎಮ್.ಡಿ.ಗೌಸ್
ಗಂಗಾವತಿ ನಗರದ ಇಸ್ಲಾಂಪುರ 16ನೇ ವಾರ್ಡಿನಲ್ಲಿ ನೀರಿನ ಪೈಪ್ ಒಡೆದು ರಸ್ತೆ ಮೇಲೆ ನಿರಂತರವಾಗಿ ನೀರು ಹರಿಯುತ್ತಿರುವ ಕುರಿತು ಸಾರ್ವಜನಿಕರ ತೊಂದರೆ ಮತ್ತು ಸ್ಥಳೀಯ ಮಹಿಳೆಯರ ಆಕ್ರೋಶದ ಬಗ್ಗೆ ಏಪ್ರಿಲ್ 24 ರಂದು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ತಕ್ಷಣವೇ ಸಮಸ್ಯೆಯನ್ನು ಸರಿಪಡಿಸುವಂತೆ ಕಠಿಣ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಒಡೆದಿರುವ ನೀರಿನ ಪೈಪ್ ದುರಸ್ತಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕರ ಸಮಸ್ಯೆಯನ್ನು ಹೊರತಂದ ಮಾಧ್ಯಮದ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ ವರದಿಯ ಫಲಶೃತಿ ಎಂದು ಹೇಳಬಹುದು.
