
"Preserving the Devanga tradition is our duty": Neelakanthappa Nagashetti“ದೇವಾಂಗ ಪರಂಪರೆ ಪಾಲನೆ ನಮ್ಮ ಕರ್ತವ್ಯ: ನೀಲಕಂಠಪ್ಪ ನಾಗಶೆಟ್ಟಿ

ಗಂಗಾವತಿ: ದೇವಾಂಗ ಸಮುದಾಯದ ಪರಂಪರೆ, ಆಚಾರ-ವಿಚಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಉಪನ್ಯಾಸಕ ನೀಲಕಂಠಪ್ಪ ನಾಗಶೆಟ್ಟಿ ಹೇಳಿದರು.
ನಗರದ ಶ್ರೀ ವೀರಭದ್ರಪ್ಪ ಹೆಬ್ಬಾಳ ಅವರ ಮನೆಯಲ್ಲಿ ಗಂಗಾವತಿ ತಾಲೂಕು ದೇವಾಂಗ ನೌಕರರ ಸಂಘದಿಂದ ಆಯೋಜಿಸಿದ್ದ ‘ಮನೆ ಮನೆಗೆ ದೇವಲ ಸ್ಫೂರ್ತಿ’ ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಜೀವನಶೈಲಿಯ ಪ್ರಭಾವದಿಂದ ಸಾಂಸ್ಕೃತಿಕ ಬೇರುಗಳಿಂದ ದೂರವಾಗದೆ, ಪೂರ್ವಜರು ರೂಪಿಸಿಕೊಟ್ಟ ಸಂಪ್ರದಾಯ ಮತ್ತು ಜೀವನಮೌಲ್ಯಗಳನ್ನು ಪಾಲಿಸಬೇಕು ಎಂದರು. ಸುನಂದ ನಾರಾಯಣಪ್ಪ ಗಾರ್ಘಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜೀವನ ಹಾಗೂ ವಚನಗಳ ಮಹತ್ವ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿವಾನಂದ ತಿಮ್ಮಾಪೂರ ಅವರು ಸಮಾಜದ ಹಿರಿಯರ ಸೇವೆ ಮತ್ತು ಆದರ್ಶಗಳನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಪ್ರಜ್ವಲ್ ಶ್ರೀನಿವಾಸ ವೀರಾಪುರ ಹಾಗೂ ಅಮರಮ್ಮ ಕೋಚಿ ಅವರನ್ನು ಸನ್ಮಾನಿಸಲಾಯಿತು. ದೇವಾಂಗ ಸಮಾಜದ ಅಧ್ಯಕ್ಷ ಈರಣ್ಣ ಬೆಟಿಗೇರಿ, ಕಾರ್ಯದರ್ಶಿ ವಸಂತಗೌಡ ಕೊಪ್ಪರದ, ಶಿವಪ್ರಸಾದ ಬೆನ್ನೂರ, ಹೆಬ್ಬಾಳ ಕುಟುಂಬದ ಸದಸ್ಯರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.”




