
India will give answer to NDA's masala - Jyoti Gondabala

ಎನ್.ಡಿ.ಎ. ಮಸಲತ್ತಿಗೆ ಇಂಡಿಯಾ ಉತ್ತರ ಕೊಡುತ್ತದೆ – ಜ್ಯೋತಿ ಗೊಂಡಬಾಳ

ಕೊಪ್ಪಳ: ಮಹಿಳೆ ಹೆಸರಲ್ಲಿ ಡಿಲಿಮಿಟೇಶನ್ ಜಾರಿ ಮಾಡಲು ಹೋಗಿ ಜಾರಿ ಬಿದ್ದ ಬಿಜೆಪಿ ಮತ್ತು ಎನ್.ಡಿ.ಎ ಕೂಟ ಮಹಿಳೆಯರನ್ನು ಎತ್ತಿಕಟ್ಟಲು ಕಥೆ ಹೆಣೆಯಲು ಹೊರಟಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಎನ್.ಡಿ.ಎ ಜೊತೆಗೆ ಸೇರಿರುವ ಜೆಡಿಎಸ್ ಸೇರಿದಂತೆ ಎಲ್ಲಾ ಎನ್.ಡಿ.ಎ. ಕೂಟದ ಪಕ್ಷಗಳಿಗೆ ಕೇವಲ ಮುಂದಿನ ಚುನಾವಣೆ ಚಿಂತೆಯಾಗಿದ್ದು, ಸೋಲುವ ಭೀತಿಯಲ್ಲಿ ಮಹಿಳೆಯರ ಹೆಸರಲ್ಲಿ ರಾಜಕೀಯ ತಂತ್ರಗಾರಿಕೆ ಹೆಣದಿತ್ತು,ಇಂಡಿಯಾ ಒಂದಾಗಿ ಅದನ್ನು ವಿಫಲಗೊಳಿಸಿದೆ.
ಮಹಿಳಾ ಮೀಸಲಾತಿ ತಿದ್ದುಪಡಿ ವಿರುದ್ಧ ಪ್ರತಿಭಟಿಸಿದ್ದ ಡಿಎಂಕೆ ಪಕ್ಷಕ್ಕೆ ಮತ್ತು ತಮಿಳಿಗರಿಗೆ ‘ಕಾಲಾ ಟಿಕಾ’ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಸಣ್ಣ ಸಾಕ್ಷಿ. ಮಹಿಳಾ ಮೀಸಲಾತಿ ಬಿಲ್ ಸೆಪ್ಟೆಂಬರ್ ೨೦೨೩ರಲ್ಲಿಯೇ ಲೋಕಸಭೆಯಲ್ಲಿ ಅಂಗೀಕಾರ ಆಗಿದೆ, ಆದರೆ ಈಗ ಅಂಗೀಕಾರವಾಗದ ಬಿಲ್ ಡಿಲಿಮಿಟೇಷನ್ ಮಾಡಿ ಮಹಿಳಾ ಮೀಸಲಾತಿ ಜಾರಿಗೊಳಿಸುವ ಬಿಲ್ ಆಗಿದ್ದು, ಡಿಲಿಮಿಟೇಶನ್ ಬಿಲ್ ವಿರೋಧ ಮಾಡಿದ್ದನ್ನು ಮಹಿಳಾ ಮೀಸಲು ವಿರೋಧಿ ಎಂಬ ಪುಕಾರು ಎಬ್ಬಿಸಿ ಅದರ ಲಾಭ ಪಡೆಯಲು ಮಾಡಿರುವ ಸಂಚಾಗಿರುವದರಿAದ ನಾಡಿನ ಜನತೆ ಅತ್ಯಂತ ಜಾಗೃತರಾಗದಿದ್ದಲ್ಲಿ ಇಡೀ ದಕ್ಷಿಣ ಭಾರತನ್ನು ಮುಗಿಸುತ್ತಾರೆ ಎಂದು ಟೀಕಿಸಿದ್ದಾರೆ.
ಇನ್ನು ರಾಜ್ಯದ ಬಿಜೆಪಿ ಜೆಡಿಎಸ್ ಮುಖಂಡರುಗಳು ಸಾಲು ಸಾಲಾಗಿ ಸುಳ್ಳು ಹೇಳುತ್ತಿದ್ದಾರೆ, ಹತ್ತು ಸಲ ಅದನ್ನೇ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ, ಆದರೆ ಸತ್ಯ ಎಂದು ನಂಬಿಸಬಹುದೇ ಹೊರತು ಸತ್ಯ ಆಗಲ್ಲ. ಮಹಿಳಾ ಮೀಸಲಾತಿ ಕುರಿತು ಸರಿಯಾದ ಮಾಹಿತಿ ನೀಡದೇ ಜನರಿಗೆ ಮೋಸ ಮಾಡಲಾಗುತ್ತಿದೆ, ವಾಸ್ತವವಾಗಿ ಒಂದು ಹೊಸ ಆಲೋಚನೆಯೇ ಅಲ್ಲ, ೧೯೯೬ ರಲ್ಲಿ ಹೆಚ್.ಡಿ. ದೇವೇಗೌಡರು, ನಂತರ ವಾಜಪೇಯಿ ಸರಕಾರದಲ್ಲಿ, ೨೦೧೦ ರಲ್ಲಿ ಮನಮೋಹನ್ ಸಿಂಗ್ ಅವರು ಈ ತಿದ್ದುಪಡಿ ಮಾಡಲು ಪ್ರಯತ್ನ ಮಾಡಿದರು ಸಫಲವಾಗಿಲ್ಲ, ಈಗ ಇರುವಷ್ಟು ಸಂಖ್ಯೆಯಲ್ಲಿಯೇ ಮಹಿಳಾ ಮೀಸಲು ತಿದ್ದುಪಡಿ ಮಾಡಿದ್ದರೆ ಇಂಡಿಯಾ ಒಕ್ಕೂಟ ಬೆಂಬಲ ಕೊಡುತ್ತಿತ್ತು, ಈ ಬಿಲ್ ಅಂಗೀಕಾರವಾಗುವದಿಲ್ಲ ಎಂಬ ಅರಿವು ಮೊದಲೇ ಇದ್ದರೂ ಪ್ರಚಾರಕ್ಕಾಗಿ ಮಾತ್ರ ಇದನ್ನು ಪ್ರಯೋಗಿಸಲಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.
