
Koppal University's third foundation day celebration in Yelaburga
ಯಲಬುರ್ಗಾದಲ್ಲಿಂದು ಕೊಪ್ಪಳ ವಿಶ್ವವಿದ್ಯಾಲಯದ ತೃತೀಯ ಸಂಸ್ಥಾಪನಾ ದಿನಾಚರಣೆ

ಕೊಪ್ಪಳ ಏಪ್ರಿಲ್ 15 (ಕರ್ನಾಟಕ ವಾರ್ತೆ): ಕೊಪ್ಪಳ ವಿಶ್ವವಿದ್ಯಾಲಯದಿಂದ “ತೃತೀಯ ಸಂಸ್ಥಾಪನಾ ದಿನಾಚರಣೆ” ಕಾರ್ಯಕ್ರಮವನ್ನು ಏಪ್ರಿಲ್ 16ರ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ವಿವಿ.ಯ ಸ್ನಾತಕೋತ್ತರ ಕೇಂದ್ರ ಯಲಬುರ್ಗಾದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಎ.ಎಂ. ಮದರಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾದ ಸಾವಿತ್ರಿ ಮುಜಮದಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಸ್ತಿ ಪುರಸ್ಕೃತರಾದ ಮಂಜುನಾಥ ಮಹಾಲಿಂಗಪುರ, ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಜೀವನಸಾಬ ಬಿನ್ನಾಳ ಅವರು ಪಾಲ್ಗೊಳ್ಳುವರು. ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಎಸ್.ವಿ. ಡಾಣಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಕೊಪ್ಪಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪುರುಷೋತ್ತಮ ಜೋಷಿ, ರಶ್ಮಿ ರಜೀವ್ ಭಂಡಾರಿ, ವಿನೋದ ಹೂಲಿ, ಡಾ. ಕೆ.ಸಿ. ಕುಲಕರ್ಣಿ ಮತ್ತು ಕೆ.ಹೆಚ್. ಛತ್ರದ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಗೌರವ ಉಪಸ್ಥತಿಯಾಗಿ ಕೊಪ್ಪಳ ವಿಶ್ವವಿದ್ಯಾಲಯದ (ಮೌಲ್ಯಮಾಪನ) ಕುಲಸಚಿವರಾದ ಪ್ರೊ. ರಮೇಶ ಕೆ., ವಿವಿ.ಯ ಹಣಕಾಸು ಅಧಿಕಾರಿಗಳಾದ ಆಮೀನಸಾಬ ಅತ್ತಾರ, ವಿವಿ.ಯ ಮುಖ್ಯ ಆವರಣದ ಆಡಳಿತಾಧಿಕಾರಿಗಳಾದ ತಿಮ್ಮಾರೆಡ್ಡಿ ಮೇಟಿ ಮತ್ತು ಗಂಗಾವತಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಶಿವರಾಜ ಗುರಿಕಾರ ಅವರು ಭಾಗವಹಿಸಲಿದ್ದಾರೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
