BGM film launched in Bellary
This plot that emphasizes the importance of marriage is the hero: Ramesh

ಬಿಜಿಎಂ ಚಲನ ಚಿತ್ರಕ್ಕೆ ಬಳ್ಳಾರಿಯಲ್ಲಿ ಚಾಲನೆ
ಮದುವೆ ಮಹತ್ವ ಸಾರುವ ಈ ಕಥಾವಸ್ತುವೆ ಹೀರೋ: ರಮೇಶ್
ಬಳ್ಳಾರಿ: ರಾಮಾಯಣ ಕಾಲ ಘಟ್ಟಗಳ ಕೆಲ ಅಂಶಗಳೊಂದಿಗೆ ಲಿವ್ ಇನ್ ಟುಗೇದರ್ ದುಷ್ಪರಿಣಾಮಗಳು ಸಂಪ್ರದಾಯ ಮದವೆಯ ಮಹತ್ವ ಸಾರುವ ಬಿಜಿಎಂ (ಬ್ಯಾಗ್ರೌಂಡ್ ಮ್ಯಾರೇಜ್) ಈ ಚಲನ ಚಿತ್ರದ ಕಥಾವಸ್ತುವೆ ಹೀರೋ ಎಂದು ಚೊಚ್ಚಲ ಚಿತ್ರ ನಿರ್ದೇಶಿಸುತ್ತಿರುವ ಬಳ್ಳಾರಿ ರಮೇಶ್ ಭೀಮರಾಯಪ್ಪ ತಿಳಿಸಿದರು.
ಅವರು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಈ ಚಿತ್ರಕಥೆಗೆ ಕೆಜಿಎಫ್ ಖ್ಯಾತಿಯ ಕಿನ್ನಾಳ್‌ರಾಜ್ ಅವರು ಸಂಭಾಷಣೆ ಮತ್ತು ಹಾಡು ರಚಿಸಿದ್ದು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ, ಸಂಗೀತ ಆಕಾಶ್ ಪರ್ವ ನೀಡುತ್ತಿದ್ದು, ಛಾಯಗ್ರಹಣ ಸುವೀಶ್ ನೀಡಲಾಗುತ್ತಿದ್ದು, ಶ್ರೀಚಕ್ರ ಫಿಲಮ್ಸ್ ಪ್ರೊಡೆಕ್ಷನ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳಲಿದೆ, ಅನೇಕ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವಿ ನಟ ಮಲ್ಲಿಕಾರ್ಜುನ ಕ್ಯಾದಿಗುಪ್ಪ ಹಾಗು ದಿನೇಶ್ ಹೆಚ್,ಡಿ.ಕೋಟೆ ನಾಯಕ ನಟರಾಗಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಪೂಜಾ ಕೊಟ್ಟೂರ್ ಇವರು ನಟಿಸಲಿದ್ದಾರೆ ತ್ರಿಕೋನ ಪ್ರೇಮ ಕಥೆ ಇದಾಗಿದೆ ಎಂದರು.
ಸAಪ್ರದಾಯ ಪದ್ಧತಿಗಳ ಮದುವೆ ಕಟ್ಟುಪಾಡುಗಳು, ಲಿವ್‌ಇನ್ ಟುಗೇದರ್ ಇತರೆ ನೂತನ ವ್ಯವಸ್ಥೆಗಳು ಪರಿಣಾಮಕಾರಿಯಾಗಿರುವುದಿಲ್ಲ, ಬಹುತೇಕ ಲವ್ ಮ್ಯಾರೇಜ್, ಲಿವ್ ಇನ್ ಟುಗೇದರ್ ಮದುವೆಗಳು ಮುರಿದು ಬಿದ್ದ ಉದಾಹರಣೆಗಳಿದ್ದು, ಸಂಪ್ರದಾಯ ಬದ್ದ ಮದುವೆಗಳು ಡಿವೊರ್ಸ್ ಇತರೆ ತೊಂದರೆಗಳು ಕಡಿಮೆ ಆಗಿದ್ದು ಚಿತ್ರವು ನೋಡುಗರನ್ನು ಒಂದೇ ಉಸಿರಿನಲ್ಲಿ ನೋಡಿಸಿಕೊಂಡು ಹೋಗುತ್ತಿದ್ದು, ಬೆಂಗಳೂರು ಬಳ್ಳಾರಿ ಹಾಗು ಇತರೆ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದ್ದು ತಿಂಗಳೊಳಗೆ ಸಂಪೂರ್ಣ ಚಿತ್ರೀಕರಣ ಮಾಡಲಿದ್ದೇವೆ ಅನೇಕ ಪ್ರತಿಭಾವಂತ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಿದ್ದೇವೆ ಎಂದು ವಿವರಿಸಿದರು.
ಕೆಜಿಎಫ್ ಲಿರಿಕ್ಸ್ ಖ್ಯಾತಿಯ ಕಿನ್ನಾಳ್ ರಾಜ್ ಅವರು ಮಾತನಾಡಿ, ಕಥೆ ತುಂಬಾ ಚೆನ್ನಾಗಿದೆ ನಿರ್ದೇಶಕ ರಮೇಶ್ ಅವರು ಈ ಚಿತ್ರದ ಮೂಲಕ ಯಾಕ್ಷನ್ ಕಟ್ ಹೇಳುತ್ತಿದ್ದು, ಜನರನ್ನು ಹಿಡಿದಿಡುವ ಶಕ್ತಿ ಕಥೆಗಿದೆ, ಇದುವರೆಗು ಸುಮಾರು ೨೦೦ ಹಾಡು ಬರೆದಿದ್ದು ಈ ಚಿತ್ರಕ್ಕೆ ಸಂಭಾಷಣೆ ಹಾಗು ಹಾಡುಗಳನ್ನು ನಾನೆ ರಚಿಸುತ್ತಿದ್ದು ಚಿತ್ರೀಕರಣದುದ್ದಕ್ಕೂ ಜೊತೆಯಾಗಿರುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಯಕ ನಟರಾದ ಮಲ್ಲಿಕಾರ್ಜುನ್ ಕ್ಯಾದಿಗುಪ್ಪ, ದಿನೇಶ್ ಹೆಚ್.ಡಿ.ಕೋಟೆ ಹಾಗು ನಾಯಕಿ ಪೂಜಾ ಕೊಟ್ಟೂರು, ಛಾಯಗ್ರಾಹಕ ಸುವೇಶ್ ಇದ್ದರು.
ನಂತರ ಶ್ರೀ ಕನಕದುರ್ಗಾದೇವಿ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ದೇವಸ್ಥಾನದ ಗಾದೆಪ್ಪ ಬಳ್ಳಾರಿ ಇವರು ಚಾಲನೆ ನೀಡಿದರು.
