ಕೊಪ್ಪಳ ಜಿಲ್ಲೆಗೆ ದಲಿತ ಸೇನೆಯ ನೂತನ ಅಧ್ಯಕ್ಷರಾಗಿ ಶಿವಮೂರ್ತಿ ಜೆಕಿನ್ ನೇಮಕ.

Mallikarjun
1 Min Read

Shivamurthy Jekin appointed as the new president of Dalit Sena for Koppal district.




ಕೊಪ್ಪಳ ಜಿಲ್ಲೆಗೆ ದಲಿತ ಸೇನೆಯ ನೂತನ ಅಧ್ಯಕ್ಷರಾಗಿ ಶಿವಮೂರ್ತಿ ಜೆಕಿನ್ ನೇಮಕ.

ಬೆಂಗಳೂರು: ದಲಿತ ಸೇನೆ ಕೇಂದ್ರ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ, ರಾಜ್ಯಾಧ್ಯಕ್ಷ ಎಂ.ಎಸ್. ಜಗನ್ನಾಥ್ ಹಾಗೂ ರಾಜ್ಯ ಉಪಾಧ್ಯಕ್ಷ ಖಾಲಿದ್ ಖಾನ್ ಅವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ನೂತನ ಅಧ್ಯಕ್ಷರಾಗಿ ಶಿವಮೂರ್ತಿ ಜೆಕಿನ್ ಅವರನ್ನು ಆಯ್ಕೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ನಾಯಕರು, ಜಿಲ್ಲೆಯಲ್ಲಿ ಬುದ್ಧ, ಬಸವ, ಫುಲೇ, ಶಾಹೂ ಮತ್ತು ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳ ಆಧಾರದಲ್ಲಿ ಶಕ್ತಿಶಾಲಿ ಸಾಮಾಜಿಕ ಚಳುವಳಿ ರೂಪಿಸುವಂತೆ ಸೂಚಿಸಿದರು. ದಲಿತರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಸಂಘಟನೆ ನಿರಂತರವಾಗಿ ಹೋರಾಡಬೇಕು ಎಂದು ಅವರು ಕರೆ ನೀಡಿದರು.
ಇದಲ್ಲದೆ, ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ಅಗತ್ಯವಿದೆ ಎಂದು ಸಲಹೆ ನೀಡಲಾಯಿತು. ಗ್ರಾಮ ಮಟ್ಟದಿಂದಲೇ ಕಾರ್ಯಕರ್ತರನ್ನು ಸಂಘಟಿಸಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ನೂತನ ಅಧ್ಯಕ್ಷರಾದ ಶಿವಮೂರ್ತಿ ಜೆಕಿನ್ ಅವರು ಯುವ ನಾಯಕತ್ವ ಹೊಂದಿದ್ದು, ಸಮಾನತೆಯ ಸಮಾಜ ನಿರ್ಮಾಣದ ದಿಸೆಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಹಿರಿಯ ನಾಯಕರು ಪ್ರೇರಣೆ ನೀಡಿದರು. ಅವರ ನೇಮಕದಿಂದ ಜಿಲ್ಲೆಯ ದಲಿತ ಸೇನೆಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Total Views: 0
Share This Article