Poster released for royal convention to be held in Bengaluru on April 10 to save government schools
ನಮ್ಮೂರ ಶಾಲೆ ಉಳಿಸಲು ರಾಜ್ಯಮಟ್ಟದ ಸಮಾವೇಶಕ್ಕೆ ಮುನ್ನಡೆಯಿರಿ

ಸರ್ಕಾರಿ ಶಾಲೆಗಳನ್ನು ಉಳಿಸಲು ಏಪ್ರಿಲ್ 10 ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಮಟ್ಟದ ಸಮಾವೇಶದ ಪೋಸ್ಟರ್ ಬಿಡುಗಡೆ
AIDSO ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಜಿಲ್ಲೆಯ ಸರಕಾರಿ ಶಾಲೆಗಳನ್ನು ಉಳಿಸುವ ಸ್ವಯಂ ಸೇವಕರು ಮತ್ತು ಪದವಿ ವಿದ್ಯಾರ್ಥಿಗಳ ಮದ್ಯೇ ಪ್ರಚಾರ ಮತ್ತು ಸಭೆ ನಡೆಸಿ ಸರ್ಕಾರಿ ಶಾಲೆಗಳನ್ನು ಉಳಿಸಲು ಏಪ್ರಿಲ್ 10 ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಮಟ್ಟದ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಸಿಂಧು ಕೌದಿ ಅವರು ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಲ್ಲಿ 40,000 ಸರ್ಕಾರಿ ಶಾಲೆ ಹಾಗೂ ಕೊಪ್ಪಳ ಜಿಲ್ಲೆಯ 500 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನೀತಿಯ ವಿರುದ್ಧ ಎಐಡಿಎಸ್ಓ ನೇತೃತ್ವದಲ್ಲಿ ಈಗಾಗಲೇ ಜಿಲ್ಲೆಯ ಜನತೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಿಕೊಂಡು ಕಳೆದ ನಾಲ್ಕು ತಿಂಗಳಿನಿಂದ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈ ಬಿಟ್ಟು, ನಮ್ಮೂರ ಶಾಲೆ ಉಳಿಸಿ ಎಂದು ಆಗ್ರಹಿಸಿ ಮಹಮ್ಮದ್ ನಗರ, ರಾಜಾರಾಮ್ ಪೇಟೆ, ಹಿರೇಕಾಸನ ಕಂಡಿ, ಮಳ್ಳಿಕೇರಿ,ಕುಣಿಕೇರಿ,ಗಡ್ಡಿ,ಬಂಡ್ರಾಳ್ ಸೇರಿದಂತೆ ಜಿಲ್ಲೆಯ ಹಲವು ಅನೇಕ ಹಳ್ಳಿಗಳಲ್ಲಿ ಹೋರಾಟ ನಡೆಸಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿವೆ. ಈ ಮುಂದುವರಿಕೆಯಾಗಿ ಸಮಾವೇಶಗಳು ಹೋರಾಟದ ಕೆಪಿಎಸ್ ಯೋಜನೆ ಕೈ ಬಿಟ್ಟು ನಮ್ಮೂರ ಶಾಲೆ ಉಳಿಸಿ ಎಂಬ ಧ್ವನಿಯನ್ನು ರಾಜಧಾನಿಯಲ್ಲಿ ಮೊಳಗಿಸಲು 10 ಏಪ್ರಿಲ್ 2026ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಜಿಲ್ಲೆಯ ವಿದ್ಯಾರ್ಥಿಗಳ ಪರವಾಗಿ ಕೊಪ್ಪಳದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯ ಶಾಲೆಗಳನ್ನು ಉಳಿಸಲು ನಾವೆಲ್ಲರೂ ಮುಂದಾಗೋಣ,ನಮ್ಮೂರ ಶಾಲೆ ಉಳಿಸಲು ರಾಜ್ಯಮಟ್ಟದ ಸಮಾವೇಶಕ್ಕೆ ಮುನ್ನಡೆಯಿರಿ ಎಂದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಸದಸ್ಯರಾದ
ಭೂಮಿಕ, ರೇಣುಕ, ರಶ್ಮಿ, ಅಶ್ವಿನಿ, ಅಕ್ಷಿತ, ಅಕ್ಕ ಮಹಾದೇವಿ, ವಿದ್ಯಾರ್ಥಿಗಳಾದ ಅಲ್ಫಿಯಾ, ಶಶಿಕಲಾ,ನಿಂಗಮ್ಮ ಪವಿತ್ರ, ಕಾವ್ಯ, ವಿದ್ಯಾಶ್ರೀ, ಗಾಯಿತ್ರಿ, ಚೈತ್ರ, ಪ್ರೇಮ, ಮಂಜುಳಾ,ಉಪಸ್ಥಿತರಿದ್ದರು.
ಧನ್ಯವಾದಗಳು
