ಅಂತರ್ ಜಿಲ್ಲಾ ಮೊಟಾರ್ ಸೈಕಲ್ ಕಳ್ಳನ ಬಂಧನ. | ರೂ.12 ಲಕ್ಷ 81 ಸಾವಿರ ಬೆಲೆಬಾಳುವ ವಿವಿದ ಕಂಪನಿಗಳ 14 ಮೋಟಾ‌ರ್ ಸೈಕಲ್‌ಗಳ ವಶ

Mallikarjun
1 Min Read

Inter-district motorcycle thief arrested. | 14 motorcycles of various companies worth Rs. 12 lakh 81 thousand seized




ಅಂತರ್ ಜಿಲ್ಲಾ ಮೊಟಾರ್ ಸೈಕಲ್ ಕಳ್ಳನ ಬಂಧನ. | ರೂ.12 ಲಕ್ಷ 81 ಸಾವಿರ ಬೆಲೆಬಾಳುವ ವಿವಿದ ಕಂಪನಿಗಳ 14 ಮೋಟಾ‌ರ್ ಸೈಕಲ್‌ಗಳ ವಶ

ವಿಜಯನಗರ (ಹೊಸಪೇಟೆ): ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು 12 ಲಕ್ಷ 81 ಸಾವಿರ ಮೌಲ್ಯದ ವಿವಿಧ ಕಂಪೆನಿಗಳ 14 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 15ರಂದು ವೆಂಕಟೇಶ್ ಎಂಬವರ ಬೈಕ್‌ ಕಳ್ಳತನವಾಗಿತ್ತು. ಈ ಸಂಬಂಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾರ್ಚ್ 30ರ ಬೆಳಗಿನ ಜಾವ ಕನಕದಾಸ ವೃತ್ತದಲ್ಲಿ ಗಸ್ತು ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಆತ ಬೈಕ್ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಬಂಧಿತನನ್ನು ಮುನಿರಾಬಾದ್ ನಿವಾಸಿ ಮೆಹಬೂಬ್ (37) ಎಂದು ಗುರುತಿಸಲಾಗಿದೆ. ಆತ ಹೊಸಪೇಟೆ, ಮುನಿರಾಬಾದ್, ಬಳ್ಳಾರಿ, ಗದಗ, ಸಂಡೂರು, ಗಂಗಾವತಿ, ಕಂಪ್ಲಿ ಹಾಗೂ ಮಂಡ್ಯ ಸೇರಿದಂತೆ ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡಿರುವುದು ವಿಚಾರಣೆಯ ವೇಳೆ ಬಹಿರಂಗವಾಗಿದೆ. ಪೊಲೀಸರು ಬಂಧಿತನಿಂದ 14 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪರಮೇಶ್ವರಪ್ಪ ರಾಜಶೇಖ‌ರ್ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ಲಿಂಗರಾಜ್‌, ಚಂದ್ರಶೇಖ‌ರ್, ಕೊಟ್ರೇಶ್, ಪಕ್ಕೀರಪ್ಪ ದೇವೇಂದ್ರ ಮತ್ತು ಶಿವಪ್ಪಜಿ ಭಾಗವಹಿಸಿದ್ದರು.

Total Views: 0
Share This Article