ತಾವರಗೇರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ “ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಾಕ್ಷರತೆ”  ಕುರಿತು ಉಪನ್ಯಾಸ

Mallikarjun
2 Min Read
Lecture on "Cyber Safety and Digital Literacy" by the Youth Red Cross Unit at Government First Grade College, Tavaragera




ತಾವರಗೇರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ “ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಾಕ್ಷರತೆ”ಕುರಿತು ಉಪನ್ಯಾಸ

ತಾವರಗೇರಾ :  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ “ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಾಕ್ಷರತೆ” ಎಂಬ ವಿಷಯ ಕುರಿತುವಿಶೇಷ ಉಪನ್ಯಾಸ ಕಾರ್ಯಕ್ರಮ:
ಪ್ರಸ್ತುತ ದಿನಗಳಲ್ಲಿ ಸೈಬರ್ ವಂಚನೆಯು ವಿವಿಧ ರೂಪಗಳಲ್ಲಿ ನಡೆಯುತ್ತಿದ್ದು, ಪ್ರಮುಖವಾಗಿ ಆನ್ಲೈನ್ ವ್ಯವಹಾರ ಮಾಡುವಾಗ ನೈಜವಾಗಿರುವ ವಿವರಗಳನ್ನು ಪರಿಶೀಲಿಸಿ ವ್ಯವಹರಿಸಬೇಕು, ಬ್ಯಾಂಕಿಂಗ್ ವ್ಯವಹಾರಗಳಲ್ಲಿನ ಮತ್ತು ನಕಲಿ ಆನ್ಲೈನ್ ವೆಬ್ ಸೈಟ್ ಗಳ ಕುರಿತು ಜಾಗೃತಿ ಇರಬೇಕು ಮತ್ತು ಡಿಜಿಟಲ್ ಅರೆಸ್ಟ್ ನಂತಹ ವಿಡಿಯೋ ಕರೆಗಳು ಬಂದಾಗ ಹೆದರದೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಅದೇ ರೀತಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳಬಾರದು. ಇದರಿಂದ ಸೈಬರ್ ವಂಚಕರು ನಕಲಿ ವಿಡಿಯೋ ಮತ್ತು ಫೋಟೋಗಳನ್ನು ತಯಾರಿಸಿ ವಂಚಿಸಬಹುದು ಇದರಿಂದ ಜಾಗೃತರಾಗಿರಬೇಕೆಂದು ತಾವರಗೇರಾ ಪೋಲೀಸ್ ಠಾಣೆಯ ಮಾನ್ಯ ಪಿಎಸ್ಐ ಸಾಹೇಬರಾದ ಚಂದ್ರಪ್ಪ ಹೆಚ್.ರವರು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಯವರಾದ ಶ್ರೀಮತಿ ನಿರ್ಮಲಾ ರವರು ರೆಡ್ ಕ್ರಾಸ್ ಘಟಕದ ಇತ್ತೀಚಿನ ಕೆಲವು ಜಾಗೃತಿ ಕಾರ್ಯಕ್ರಮಗಳ ಕುರಿತು ಹೆಚ್ಐವಿ, ರಕ್ತದಾನದ ಮಹತ್ವ ಇನ್ನಿತರ ವಿಚಾರಗಳ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಹಾಗೂ ಡಿಜಿಟಲ್ ಜ್ಞಾನ ನಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.

ಸೈಬರ್ ಸುರಕ್ಷತೆ ನಮ್ಮನ್ನು ಸುರಕ್ಷಿತವಾಗಿ ಕಾಪಾಡುತ್ತದೆ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಜಾಗೃತವಾಗಬೇಕೆಂದು ಕಾಲೇಜಿನ ರೆಡ್ ಕ್ರಾಸ್ ಸಂಚಾಲಕರಾದ ಡಾ. ಯಮನೂರಪ್ಪ ರವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಮೊಬೈಲ್ ಬಳಕೆ ಹಾಗೂ ಸುರಕ್ಷತೆಯ ಕುರಿತಂತೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ವೆಂಕಟೇಶ ರವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ IQAC ಸಂಚಾಲಕರಾದ ಡಾ. ಉಮಾ ಕಾಂತ ಅವರೆಡ್ಡಿರವರು,ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಇಜಾಜ್ ಹುಸೇನ್ ರವರು, ಕಚೇರಿ ಅಧೀಕ್ಷಕರಾದ ಶ್ರೀಮತಿ ಸಾವಿತ್ರಿಬಾಯಿ ಎಸ್ ಬಿರಾದಾರ್ ರವರು, ಇಂಗ್ಲಿಷ್ ವಿಷಯದ ಸಹಾಯಕ ಪ್ರಾಧ್ಯಾಪಕರಾದ ಗುರುರಾಜ್ ಮಾಲಿ ಪಾಟೀಲ್ ರವರು ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಮಂಜುಳಾ ಕೆ. ಇ.ರವರು ನಿರೂಪಿಸಿದರು.ಕನ್ನಡ ವಿಭಾಗದ ಉಪನ್ಯಾಸಕರಾದ  ವಿಜಯ ಕುಮಾರ ಕಟ್ಟಿಮನಿ ರವರು ಸ್ವಾಗತಿಸಿದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಯುತ ಬೈಲಪ್ಪ ಮುಳ್ಳೂರು ರವರು ವಂದಿಸಿದರು.

Share This Article
Leave a Comment