There is no shortage of petrol and diesel in Mudalagi taluk - Tahsildar Gudume

ಮೂಡಲಗಿ ತಾಲೂಕಿನಲ್ಲಿ ಪೆಟ್ರೋಲ್ ಡೀಸೆಲ್ ಕೊರತೆಯಿಲ್ಲ – ತಹಶೀಲ್ದಾರ ಗುಡುಮೆ
ಮೂಡಲಗಿ ತಾಲೂಕಿನಲ್ಲಿ ಡೀಸೆಲ್ ಅಥವಾ ಪೆಟ್ರೋಲ್ ಕೊರತೆ ಇಲ್ಲ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮೂಡಲಗಿ ತಹಶಿಲ್ದಾರ ಶ್ರೀಶೈಲ ಗುಡುಮೆ ಹೇಳಿದ್ದಾರೆ.
ನಗರದ ಪೆಟ್ರೋಲ್ ಪಂಪ್ ಗಳಲ್ಲಿ ವಾಹನಗಳಿಗೆ ಪೆಟ್ರೋಲ್ ಹಾಕಿಸಲು ಸಾರ್ವಜನಿಕರು ಧಾವಂತಪಡುತ್ತ, ಕ್ಯಾನ್ ಗಳಲ್ಲಿ ತೈಲ ಸಂಗ್ರಹ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿಯೇ ಪೆಟ್ರೋಲ್ ಡೀಸೆಲ್ ಕೊರತೆಯಿಲ್ಲ. ಸಾರ್ವಜನಿಕರು ಭಯಪಡಬಾರದು. ಕ್ಯಾನ್ ಗಳಲ್ಲಿ ಅನಧಿಕೃತವಾಗಿ ತೈಲ ಸಂಗ್ರಹ ಮಾಡುವುದು ಅಪರಾಧವಾಗಿದೆ ಎಂದು ಹೇಳಿದರು.
