ಭೋವಿ ಸಮುದಾಯದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪುಷ್ಪಾಂಜಲಿ ಗುನ್ನಾಳ ಆಯ್ಕೆ

Pushpanjali Gunna elected as district president of Bhovi community women's unit

ಭೋವಿ ಸಮುದಾಯದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪುಷ್ಪಾಂಜಲಿ ಗುನ್ನಾಳ ಆಯ್ಕೆ

ಜಾಹೀರಾತು

ಕೊಪ್ಪಳ ; ಇಲ್ಲಿನ ಪ್ರವಾಸಿಮಂದಿರದಲ್ಲಿ ರವಿವಾರದಂದು ನಡೆದ ಭೋವಿ ಸಮುದಾಯದ ಮುಖಂಡರ ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪುಷ್ಪಾಂಜಲಿ ಗುನ್ನಾಳ ನೇಮಕವಾಗಿದ್ದಾರೆ.

ಸಮುದಾಯದ ಮುಖಂಡರ ಸರ್ವಾನುಮತದಿಂದ ಒಪ್ಪಿಗೆ ಮೇರೆಗೆ ಸಮಾಜಮುಖಿ, ಮಹಿಳಾ ಸಂಘಟನೆಯಲ್ಲಿ ಛಾಪು ಮೂಡಿಸಿರುವ ಪುಷ್ಪಾಂಜಲಿ ಗುನ್ನಾಳ ಅವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಬಳಿಕ ಮಾತನಾಡಿದ ಪುಷ್ಪಾಂಜಲಿ ಗುನ್ನಾಳ ಅವರು, ಸಮುದಾಯದ ಮುಖಂಡರು, ಯುವಮಿತ್ರರು, ಮಹಿಳಾ ಪ್ರಮುಖರು ನನ್ನ ಮೇಲೆ ವಿಶ್ವಾಸ ಇಟ್ಟು, ಆಯ್ಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಮುದಾಯದ ಏಳಿಗೆಗೆ, ಸಮುದಾಯದ ಬಡವರ್ಗದ ಮಕ್ಕಳ ಶೈಕ್ಷಣಿಕವಾಗಿ ಬೆಳವಣಿಗೆ ಶ್ರಮಿಸುವುದಾಗಿ‌ ಹೇಳಿದರು.
ಇನ್ನೂ ಇದೇ ವೇಳೆ ಭೋವಿ ಸಮುದಾಯದ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಹುಲಿಗೇಶ್ ಬಂಡಿ ಗಂಗಾವತಿಯವರನ್ನು ಸಹ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು..