Breaking News
ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಸಂದ ಜಯ :ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಹೇಳಿಕೆ .

Karnataka State Farmers' Association's struggle has won: Statement by District Vice President Gowde Gowda.

ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಸಂದ ಜಯ :ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಹೇಳಿಕೆ .

ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_E
ಜಾಹೀರಾತು


ವರದಿ:ಬಂಗಾರಪ್ಪ .ಸಿ.
ಹನೂರು ತಾಲ್ಲೂಕು ಕ್ಷೇತ್ರದ ರೈತರ ಜಮೀನುಗಳಿಗಾಗಿ
ನದಿ ಮೂಲದಿಂದ ನಿರು ತರಲು DPR ಪ್ರಕಾರ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಹಾಗೂ ಗೋಪಿನತ್ತಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದೊಳಗೆ ಇರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಆಗ್ರಹಿಸಿ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ಚಳುವಳಿಯನ್ನು ನಾವು ಹಮ್ಮಿಕೊಂಡ ಪರಿಣಾಮವಾಗಿ ಹಾಗೂ ಹನೂರು ಕ್ಷೇತ್ರದ ಶಾಸಕರಾದ ಎಮ್ ಆರ್ ಮಂಜುನಾಥ್ ,ಮಾಜಿ ಶಾಸಕರಾದ ಆರದ ನರೇಂದ್ರ , ಸಂಸದರಾದ ಸುನೀಲ್ ಬೋಸ್ , ಮುಖ್ಯಮಂತ್ರಿಗಳಾದ ಸಿದ್ದರಾಮಯ ,ಉಸ್ತುವಾರಿ ಸಚಿವರಾದ ವೆಂಕಟೇಶ ಇನ್ನು ಅನೇಕರ ಶ್ರಮದಿಂದ ಇಂದಿನ ಬಜೇಟ್ ನಲ್ಲಿ ನೀರಾವರಿ ಯೋಜನೆಗೆ 490ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ತಿಳಿಸಿದರು.

ಹನೂರು ಪಟ್ಟಣದಲ್ಲಿ ಮಾತನಾಡಿದ ಅವರು
ಚಾಮರಾಜನಗರ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲ್ಲೂಕಾಗಿರುವ ಹನೂರು ತಾಲ್ಲೂಕು ಮಳೆ ಆಶ್ರಿತ ವ್ಯವಸಾಯವನ್ನು ಅವಲಂಬಿಸಿದ್ದು ಹಲವಾರು ವರ್ಷಗಳಿಂದ ಮಳೆಯಾಗದೆ ಬರಪೀಡಿತವಾಗಿದೆ. ಈಗ ಬೇಸಿಗೆ ಆರಂಭದಲ್ಲಿಯೇ ಜನಗಳು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಮಳೆ ಆಶ್ರಿತ ಜಲಮೂಲವನ್ನು ಹೊಂದಿರುವ ರೈತರು ದಯನೀಯ ಸ್ಥಿತಿಗೆ ತಲುಪಿದ್ದಾರೆ ತನ್ನ ಕುಟುಂಬವನ್ನು ಕಾಪಾಡಲು ಪರ ಊರುಗಳಿಗೆ ಗುಳೇ ಹೋಗಲು ರೈತರು ಸಿದ್ದವಾಗುತ್ತಿದಾರೆ ಈ ಗಂಭೀರ ಪರಿಸ್ಥಿತಿಯ ಅರಿವು ರಾಜ್ಯ ಸರ್ಕಾರಕ್ಕೆ ಇದ್ದಂತ್ತಿಲ್ಲ, ಇದ್ದಿದ್ದರೇ ಕಾವೇರಿ ನದಿಯಿಂದ ಏತ ನೀರಾವರಿ ಮುಖಾಂತರ ಹನೂರು ತಾಲ್ಲೂಕಿಗೆ ನೀರು ಹರಿಸಲು DPR ಗೆ ಅನುಮತಿ ದೊರಕಿದ್ದರೂ ಅನುಮೋದನೆ ಬಾಕಿಇತ್ತು ಅದು ಇಂದು ನೆರವೆರಿದೆ .
ಹನೂರು ತಾಲ್ಲೂಕಿನ ಉಡುತೊರೆಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ 1.31 TMC ನೀರೋದಗಿಸಲು 2020-21ರ ಸಾಲಿನಲ್ಲಿ DPR ಗೆ ಅನುಮತಿ ದೊರಕಿದ್ದು ಕಾಮಗಾರಿಗೆ ಅನುಮೋದನೆ ದೊರಕಿಲ್ಲ ಈ ಬಜೆಟ್‌ನಲ್ಲಿ ಹಣಕಾಸು ಒದಗಿಸಲಾಗಿದೆ ,
ಅದೇ ರೀತಿಯಲ್ಲಿ
ಹನೂರು ತಾಲ್ಲೂಕಿನ ಕೆರೆಗಳಾದ ಮಣಗಳ್ಳಿ ಕೆರೆ, ಬಂಡಳ್ಳಿ ಕೆರೆ, ಹಲಗಾಪುರದ ಕೆರೆ, ಮಾರ್ಟಳ್ಳಿ ಕೀರಪಾತಿಯ-ಹಾಲೇರಿ ಕೆರೆ, ಹೂಗ್ಯಂನ ಮಿನ್ನತ್ತಹಳ್ಳ ಕಿರು ಜಲಾಶಯ, ದಿನ್ನಳ್ಳಿಯ ಮೂಕಚ್ಚಿ ಕಿರು ಜಲಾಶಯಗಳಿಗೆ ಕಾವೇರಿ ನದಿಯ ಸತ್ತೇಗಾಲದ ಶಿವಾ ಆಣೆಕಟ್ಟೆಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಲು DPR ಗೆ ಅನುಮತಿ ದೊರಕಿದ್ದು 419 ಕೋಟಿಯ ಪರಿಷ್ಕೃತ DPR ನಲ್ಲಿ ಮಾರ್ಟಳ್ಳಿ, ಕುರಟ್ಟಿಹೊಸೂರು, ಕೌದಳ್ಳಿ, ಶೆಟ್ಟಳ್ಳಿ, ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳನ್ನು ಸೇರಿಸಿ ನೀರು ಒದಗಿಸಲು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸರ್ಕರವು ತಕ್ಷಣ ಹಣ ಬಿಡುಗಡೆ ಮಾಡಿ ರೈತರು ಗುಳೆ ಹೋಗುವುದನ್ನು ತಪ್ಪಿಸಬೇಕು.
ಹಾಗೂ ಗೋಪಿನತ್ತಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯಗ್ರಾಮಗಳಾದ ಆಲಂಬಾಡಿ,ಜಂಬೂಪಟ್ಟಿ, ಮಾರಿಕೋಟೆ,ಪುದುಕಾಡು,ಅವುಕಾಂಪಟ್ಟಿ,ಪುಂಗಾತ್ತೂರು, ತೆಂಗಾಯ್ ಕೊಂಬು ಗ್ರಾಮಗಳ ಪಾರಂಪರಿಕ ಅರಣ್ಯವಾಸಿಗಳಿಗೆ ವಿದ್ಯುತ್. ಕುಡಿಯುವ ನೀರು, ಸುಸಜ್ಜಿತ ರಸ್ತೆ ಹಾಗೂ ಹಕ್ಕುಪತ್ರಗಳನ್ನು ಇಲ್ಲಿಯವರೆಗೂ ಯಾವ ಸರ್ಕಾರವೂ ನೀಡಿರುವುದಿಲ್ಲ ರಾಜ್ಯ ಸರ್ಕಾರವು ಈ ಬಗ್ಗೆ ಗಮನಹರಿಸಿ ಮೂಲಭೂತ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಅದೆ ರೀತಿಯಲ್ಲಿ ನಮ್ಮ ಹೋರಾಟಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ರಾಜ್ಯಧ್ಯಕ್ಷರಾದ ಬಡಗಲುಪುರದ ನಾಗೇಂದ್ರ ,ರಾಜ್ಯದ ಎಲ್ಲಾ ಜಿಲ್ಲಾ ಸಂಘಟನೆ ಮುಖಂಡರು ಸೇರಿದಂತೆ ಸಾಥ್ ನೀಡಿದ ಎಲ್ಲಾರಿಗೂ ನಾವು ಅಭಾರಿಯಾಗಿದ್ದೇವೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ
ಕರ್ನಾಟಕ ರಾಜ್ಯ ರೈತ ಸಂಘ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಅಮ್ಜಾದ್ ಖಾನ್ , ಗೌರವ ಅಧ್ಯಕ್ಷರು ರಾಜಣ್ಣ ,ಸಂಘಟನ ಕಾರ್ಯದರ್ಶಿ ಬಸವರಾಜು ,ಪಳನಿಸ್ವಾಮಿ, ಬಸವರಾಜು, ಕನಕಮ್ಮ , ಲೋಕೇಶ್ ,ವೆಂಕಟೇಶ್ ,ಸೇರಿದಂತೆ ಎಲ್ಲಾರು ಹಾಜರಿದ್ದರು ,

Leave a Reply

Your email address will not be published. Required fields are marked *