Breaking News
ಸಿದ್ದರಾಮಯ್ಯ ಅವರ ಬಜೆಟ್ ಜನಪರ ಬಜೆಟ್ : ರೆಡ್ಡಿ ಶ್ರೀನಿವಾಸ್
Siddaramaiah's budget is a pro-people budget: Reddy Srinivas

ಸಿದ್ದರಾಮಯ್ಯ ಅವರ ಬಜೆಟ್ ಜನಪರ ಬಜೆಟ್ : ರೆಡ್ಡಿ ಶ್ರೀನಿವಾಸ್

ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_E
ಜಾಹೀರಾತು


ಕೊಪ್ಪಳ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ 2026-27ರ ಬಜೆಟ್ ಜನಪದ
ರ ಬಜೆಟ್ ಎಂದು ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಈ ಬಾರಿ ಬಜೆಟನ್ನು ಎಲ್ಲಾ ವರ್ಗದವರ ಹಿತವನ್ನು ಕಾಪಾಡುವ ಬಜೆಟ್ ಆಗಿದೆ, ಕೊಪ್ಪಳ ಜಿಲ್ಲೆಗೆ ಮುನಿರಾಬಾದ್ ಬಳಿಯ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ, ಬೇವೂರಿನಲ್ಲಿ ಸರಕಾರಿ ವಸತಿ ಪದವಿ ಕಾಲೇಜು ನೀಡಿದ್ದು ಸಂತಸ ತಂದಿದೆ, 16 ವರ್ಷದೊಳಗಿನ ಶಾಲಾ ಮಕ್ಕಳಿಗೆ ಮೊಬೈಲ್ ನಿಷೇಧಿಸಿರುವುದು ಒಳ್ಳೆ ನಿರ್ಧಾರ, ರಾಜ್ಯದ ಅನ್ನ ರಾಮಯ್ಯನವರು ಬಜೆಟ್ಟಿನಲ್ಲಿ
ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 28,608 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ
ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರಿಗೆ ಒಂದು ಜೊತೆ ಸಮವಸ್ತ್ರ ನೀಡಲಾಗುವುದೆಂದು ಘೋಷಿಸಿದ್ದಾರೆ, ಇಂದಿರಾ ಕಿಟ್ ಗೆ ಬಜೆಟ್ ನಲ್ಲಿ 68,200 ಕೋಟಿಗಳನ್ನು ಮೀಸಲಿಟ್ಟಿರುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ, ಒಟ್ಟಾರೆ ಈ ಬಾರಿ ಬಜೆಟ್ ಜನಪರ ಬಜೆಟ್ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *