
Where are the Mathadhis who preach the Pankaanu Punka Basava philosophy and the Lingayats who preach the philosophy?

ಕನ್ನೇರಿ ಸ್ವಾಮಿ ಮಾಡುವ ಪ್ರಶ್ನೆಗಳಿಗೆ ಪಂಕಾನು ಪುಂಕಾ ಬಸವ ತತ್ವ ಹೇಳುವ ಮಠಾಧೀಶರು ಮತ್ತು ತತ್ವ ಹೇಳುವ ಹೇಳುವ ಲಿಂಗಾಯತರು ಎಲ್ಲಿ ! ?

ಕನ್ನೇರಿ ಸ್ವಾಮಿ . ಹಿಂದುತ್ವದ ಪ್ರತಿಪಾದಕ, ಬಸವಾದಿ ಶರಣರನ್ನು ಹಿಂದುತ್ವದ ತಕ್ಕೆಗೆ ತೆಗೆದುಕೊಂಡು ಹಿಂದುತ್ವವೆ ಮುಖ್ಯ ಎಂದು ಸಾಧಿಸಬೇಕೆಂಬ ಹಂಬಲದ ಛಾತಿಯುಳ್ಳ ಪಕ್ಕಾ ಮನುವಾದಿ , ಕೋಮುವಾದಿ , ಹಿಂದುತ್ವವಾದಿ ಕನ್ನೇರಿ ಸ್ವಾಮಿಗಳು.
ಕನ್ನೇರಿ ಸ್ವಾಮಿ ಎತ್ತುವ ಪ್ರಶ್ನೆಗಳು ಇಂದೂ ಬಸವತತ್ವದವರೆನ್ನುವ , ಬಸವಣ್ಣನ ಲಿಂಗಾಯತ ಧರ್ಮ . ಹಿಂದುತ್ವವನ್ನು (ವೈದಿಕತೆ) ಧಿಕ್ಕರಿಸಿ ಉದಯಿಸಿದ ಧರ್ಮ ಎಂದೂ ಹೇಳುವ ಲಿಂಗಾಯತ ತತ್ವನ್ನು ಸಾರುವ ಮಠಾಧೀಶರಿಂದ ಹಿಡಿದು , ಲಿಂಗಾಯತ ತತ್ವದ ಬಗ್ಗೆ ಪುಂಕಾನು ಪುಂಕವಾಗಿ ವೇದಿಕೆಯ ಮೇಲೆ ಮಾತಾಡುವ ಅನುಭಾವಿಗಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ ಈ ಕನ್ನೇರಿ ಸ್ವಾಮಿ.
ಕನ್ನೇರಿ ಸ್ವಾಮಿ ಮಾಡುವ ಪ್ರಶ್ನೆಗಳಿಗೆ ಇಂದು ಬಸವ ತತ್ವ ಹೇಳುವ ಮಠಾಧೀಶರು ಮತ್ತು ತತ್ವ ಹೇಳುವ ಹೇಳುವ ಲಿಂಗಾಯತರು ತಿಣುಕಾಡುತ್ತಿದ್ದಾರೆ. ಕನ್ನೇರಿ ಕುನ್ನಿ ಕೇಳುವ ಪ್ರಶ್ನೆಗಳು ತುಂಬಾ ಸರಳ ಆದರೆ , ಆ ಸರಳ ಪ್ರಶ್ನೆಗಳಿಗೆ ತಿಣುಕಾಡುವ ತತ್ವದವರನ್ನು ನೋಡಿದಾಗ ನಿಜಕ್ಕೂ ಖೇದ ಅನಿಸುತ್ತೆ.
ಇಂದು ಹಿಂದುತ್ವದ ಲಿಂಗಾಯತರಿಗೂ , ಬಸವ ತತ್ವ ಮಾತಾಡುವ ಲಿಂಗಾಯತರಿಗೂ ದೊಡ್ಡ ಭೇದವೆನಿಲ್ಲ ಎಲ್ಲವೂ ಒಂದೇ ದೋಣಿಯ ಪಯಣಿಗರು. ದೇವರು , ಧರ್ಮ , ಮೌಢ್ಯ , ಕಂದಾಚಾರದ ಬಗ್ಗೆ ಮಾತಾಡುವವರ ಬದುಕು ಸಹ ಆ ಬಸವ ತತ್ವದಂತೆ ಇಲ್ಲ ಎನ್ನುವ ಕನ್ನೇರಿಯ ಪ್ರಶ್ನೆಗೆ ಮೂಕರಾಗಿದ್ದಾರೆ ಇಂದಿನ ಅನುಭಾವಿಗಳು ತತ್ವ ಹೇಳುವವರು.
ಕನ್ನೇರಿ ಸ್ವಾಮಿಗೆ ಉತ್ತರ ಹೇಳುವುದು ಎಷ್ಟು ಸುಲುಭ ಇದೆ ಅಂದ್ರೆ ಅದು ನೀರು ಕುಡಿದಷ್ಟು ಸುಲುಭ . ಆದರೆ ಇಂದಿನ ಬಸವ ತತ್ವ ಹೇಳುವ ಅನುಭಾವಿಗಳು, ಮಠಾಧೀಶರು ಮತ್ತು ನಮ್ಮಂತವರು ಎಷ್ಟೆ ವೈಚಾರಿಕ , ವೈಜ್ಞಾನಿಕ , ಪ್ರಗತಿಪರ ಎನ್ನುವವರು ಆಂತರ್ಯದಲ್ಲಿ ನಾವು ಮನುವಾದ , ಹಿಂದುತ್ವದ ಭಾಗವೆ ಆಗಿದ್ದಾರೆ. ಬಸವಾದಿ ಶರಣರು ಬರಿ ಮಾತಾಡಲಿಲ್ಲ ಅವರು ಮಾತಾಡಿದಂತೆ ನಡೆದುಕೊಂಡು.
ಇಂದು ಬಸವತತ್ವದ ಬಗ್ಗೆ ಮಾತಾಡುವ ಕರ್ನಾಟಕದ ಬಸವಪರ ಸಂಘಟನೆಗಳು ಮತ್ತು ವೇದಿಕೆಯ ಮೇಲೆ ಹಿಂದುತ್ವದ ಬಗ್ಗೆ ತಾಸುಗಟ್ಟಲೆ ಮಾತಾಡುವ ಅನುಭಾವಿಗಳು , ತತ್ವ ಹೇಳುವವರು ಯಾರು ಬಸವಣ್ಣನ ಆಸೆಯದಂತೆ ಬದುಕಿದ್ದಿರಿ? . ಬಹುತೇಕರ ಮನೆಗಳಲ್ಲಿ ಮೌಢ್ಯತೆ ಬಿಟ್ಟಿಲ್ಲ, ಪರೋಕ್ಷವಾಗಿ ದೇವರು ದಿಂಡರನ್ನು ಬಿಟ್ಟಿಲ್ಲ, ಮುಖ್ಯವಾಗಿ ಶರಣ ಆಸೆ ನಿರ್ಜಾತೀಕರಣನಾಗುವುದು , ಆದರೆ ಇಂದು ತತ್ವ ಹೇಳುವ ಅನುಭಾವಿಗಳು 99% ಜಾತಿ ಬಿಟ್ಟಿಲ್ಲ . ಹಿಂಗಾದಾಗಲೇ ಕನ್ನೇರಿಗೆ ಸೆಡ್ಡು ಹೊಡೆಯಲು ನಿಮ್ಮ ತಿಣುಕಾಟ.
ಈ ತತ್ವಗಳಂತೆ ಬದುಕಿದ 5% ಜನ ಇದ್ದರೆ ಸಾಕಾಗಿತ್ತು ಕನ್ನೇರಿ ಕುನ್ನಿಯ ಈ ಬೊಗಳುವಿಕೆಗೆ ಉತ್ತರ ಕೊಡಬಹುದಿತ್ತು . ಆದರೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇಂದು ತತ್ವ ಹೇಳುವ ಅನುಭಾವಿಗಳು ಸ್ವಾಮಿಗಳು ಒಂದಲ್ಲ ಒಂದು ರೀತಿ ಮನುವಾದದ ಮತ್ತು ಹಿಂದುತ್ವದ ಭಾಗವೆ ಆಗಿದ್ದಾರೆ . ಹಾಗಾಗಿ ಬನ್ನಹಟ್ಟಿ ಕನ್ನೇರಿ ಸ್ವಾಮಿಯ ಕೂಗು ಜೋರಾಗಿದೆ. ಕೇವಲ ವೇದಿಕೆಯ ಮೇಲೆ ಕೂಗಾಡುವುದು ಬಸವತತ್ವ ಅಲ್ಲ , ಬದುಕುವುದು ಬಸವತತ್ವ ಇಲ್ಲದಿದ್ದರೆ ಬಸವಾದಿ ಶರಣರು ಮುಂದೊಂದು ದಿನ ಹಿಂದುತ್ವದ ತಕ್ಕೆ ಹೋದರೂ , ನಾನಂತೂ ಆಶ್ಚರ್ಯಪಡಲ್ಲ. ಯಾಕೆಂದರೆ ” ಹೊರಗೆ ಭಕ್ತ ಒಳಗೆ ಕುಟಿಲ ಎಂಬ ಭಕ್ತರನ್ನೊಲ್ಲಯ್ಯಾ ಲಿಂಗವು ” ಎನ್ನುವ ಅಪ್ಪ ಬಸವಣ್ಣನ ಮಾತು ನಿಜ.
ಡಾ. ರಾಜಶೇಖರ ನಾರನಾಳ
