ಮಕ್ಕಳ ಆರೋಗ್ಯಕ್ಕೆ ಮುಂಜಾಗ್ರತೆ ಅಗತ್ಯ-ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಮಕ್ಕಳ ಆರೋಗ್ಯಕ್ಕೆ ಮುಂಜಾಗ್ರತೆ ಅಗತ್ಯ-ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್

ಜಾಹೀರಾತು
Precaution is necessary for children's health-Child Development Project Director Jayashree, R

ಗಂಗಾವತಿ, 05:ತಾಲೂಕಿನಲ್ಲಿ ಈ ವರ್ಷ ಬೇಸಿಗೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಬಿಸಿಗಾಳಿ ಬೀಸುವ ಸಂಭವನೀಯತೆ ತಾಲೂಕಿನಲ್ಲಿ ಗರಿಷ್ಠ ಪ್ರಮಾಣಕ್ಕಿಂತ ಹೆಚ್ಚಿದೆ.

ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಜಾಸ್ತಿ ಕಂಡು ಬಂದ ಹಿನ್ನೆಲೆ ವಿಶೇಷವಾಗಿ ತಾಲ್ಲೂಕಿನ ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್ ತಿಳಿಸಿದ್ದಾರೆ.
ಗಂಗಾವತಿ ತಾಲ್ಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಹೆಚ್ಚು ನೀರನ್ನು ಕುಡಿಸಲು ಮುಂದಾಗಬೇಕು.

ಮಕ್ಕಳ ಪಾಲಕರಿಗೆ ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಹಾಗೂ ಸಡಿಲವಾದ ತೆಳುಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸುವುದಕ್ಕೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು.

ಪಾಲಕರು ಸಣ್ಣ ಮಕ್ಕಳನ್ನು ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆಯ ನಂತರ ಹೊರಗಡೆ ಓಡಾಡುವುದಕ್ಕೆ ಬಿಡಬೇಕು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕಿತ್ತಳೆ, ಸೇಬು. ಅತಿ ಹೆಚ್ಚು ನೀರಿನ ಅಂಶ ಇರುವ ಹಣ್ಣುಗಳನ್ನು ಮಕ್ಕಳಿಗೆ ನೀಡಿ. ಬೇಕರಿ ಪದಾರ್ಥ ಸಕ್ಕರೆ ಅಂಶ ಇರುವ ಆಹಾರವನ್ನು ಆದಷ್ಟು ಮಕ್ಕಳಿಗೆ ನೀಡಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್ ಪ್ರಕಟಣೆಯಲ್ಲಿ ತಿಳಿಸಿದೆ.

Total Views: 0
Share This Article