ಬೆಂ.ವಿವಿ ಫಲಿತಾಂಶ : ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಜನಾ ಎಸ್.ಎ, ಲಾವಣ್ಯ ಯಾದವ್ ಆರ್. ಮೊದಲ ರಾಂಕ್

H.Mallikarjun
H.Mallikarjun - Kalyanasiri
1 Min Read

Ben.V. Result: Sanjana S.A, Lavanya Yadav R. of APS Educational Institute rank first




ಬೆಂ.ವಿವಿ ಫಲಿತಾಂಶ : ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಜನಾ ಎಸ್.ಎ, ಲಾವಣ್ಯ ಯಾದವ್ ಆರ್. ಮೊದಲ ರಾಂಕ್

ಜಾಹೀರಾತು

ಬೆಂಗಳೂರು,ಮಾ.3: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಈ ಬಾರಿ ಎಪಿಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಬಿಸಿಎ ಕೋರ್ಸ್ ನಲ್ಲಿ ಸಂಜನಾ ಎಸ್.ಎ ಹಾಗೂ ಎಂ.ಎ. ಎಕನಾಮಿಕ್ಸ್ ಲಾವಣ್ಯ ಯಾದವ್ ಆರ್. ಮೊದಲ ಶ್ರೇಿಯಾಂಕದಲ್ಲಿ ಉತ್ತೀರ್ಣರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.
l
ಎ.ಪಿ.ಎಸ್. ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರಾದ ಸಿಎ.ಡಾ. ವಿಷ್ಣು ಭರತ್ ಅಲಂಪಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಬಿ.ಸಿ.ಎಕೋರ್ಸ್ ನಲ್ಲಿ ಸಂಸ್ಥೆಗೆ 1, 4, 6 ಮತ್ತು 8ನೇ ಸ್ಥಾನ ಲಭಿಸಿದೆ. ಎಮ್.ಎ.ಎಕಾನಮಿಕ್ಸ್ – 1 ಮತ್ತು 2ನೇ ಸ್ಥಾನ ಲಭಿಸಿದೆ. ಎಪಿಎಸ್ ಪಬ್ಲಿಕ್ ಶಾಲೆ ಮೊದಲಿನಿಂದಲೂ ಶೇ 100 ರಷ್ಟು ಫಲಿತಾಂಶ ದಾಖಲಿಸುತ್ತಿದ್ದು, ಈ ಬಾರಿ ಎಂಜಿನಿಯರಿಂಗ್ ನಲ್ಲಿ ಶೇ 80 ರಷ್ಟು, ವಾಣಿಜ್ಯ ಶೇ 90, ಪದವಿ ಪೂರ್ವ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 90 ರಷ್ಟು ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.

ಎಪಿಎಸ್ ಸಂಸ್ಥೆ 90 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದು, ಸಮಗ್ರ ಬೆಳವಣಿಗೆ ಮತ್ತು ರಾಷ್ಟ್ರಾಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀಡಲು ಒತ್ತು ಕೊಡುತ್ತಿದೆ ಎಂದು ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.

Total Views: 0
Share This Article