
ಕೊಪ್ಪಳ ಮತ್ತು ಗಂಗಾವತಿ: ಅನಧಿಕೃತ ಹೋಂಸ್ಟೇ, ರೆಸಾರ್ಟಗಳ ಮೇಲೆ ಕಾನೂನು ಕ್ರಮ
Koppal and Gangavathi: Legal action against unauthorized homestays, resorts

ಕೊಪ್ಪಳ ಫೆಬ್ರುವರಿ 27 (ಕರ್ನಾಟಕ ವಾರ್ತೆ): ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನಲ್ಲಿ ಬರುವ ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ ಕೊಪ್ಪಳ ತಾಲ್ಲೂಕಿನಲ್ಲಿ 10 ಮತ್ತು ಗಂಗಾವತಿ 3 ಸೇರಿ ಒಟ್ಟು 13 ಅಧಿಕೃತ ರೆಸಾರ್ಟಗಳಿವೆ. ಅದೇ ರೀತಿ ಕೊಪ್ಪಳ ತಾಲ್ಲೂಕಿನಲ್ಲಿ 47 ಹೋಂಸ್ಟೇ ಹಾಗೂ 40 ರೆಸಾರ್ಟಗಳು ಮತ್ತು ಗಂಗಾವತಿ ತಾಲ್ಲೂಕಿನ 6 ಹೋಂಸ್ಟೇ ಹಾಗೂ 43 ರೆಸಾರ್ಟಗಳು ಸೇರಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 53 ಹೋಂಸ್ಟೇಗಳು & 83 ರೆಸಾರ್ಟಗಳು ಅನಧಿಕೃತವಾಗಿದ್ದು, ಈ ಎಲ್ಲಾ ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳಿಗೆ ಸೂಕ್ತ ಕ್ರಮ ಕೈಗೋಳ್ಳಲಾಗಿದೆ.
ಕೊಪ್ಪಳ ತಾಲ್ಲೂಕಿನ 28 ಹಾಗೂ ಗಂಗಾವತಿ 87 ಸೇರಿ ಒಟ್ಟು 105 ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕೊಪ್ಪಳ ತಾಲ್ಲೂಕಿನ 37 ಹೋಂಸ್ಟೇ ಮತ್ತು ರೆಸಾರ್ಟಗಳ ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ ರದ್ದು ಪಡಿಸಲಾಗಿದೆ. ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಗಂಗಾವತಿ ತಾಲ್ಲೂಕಿನ 5 ರೆಸಾರ್ಟಗಳನ್ನು ತೆರವುಗೊಳಿಸಲಾಗಿದೆ. ಕೊಪ್ಪಳ ತಾಲ್ಲೂಕಿನ 5 ಮತ್ತು ಗಂಗಾವತಿ ತಾಲ್ಲೂಕಿನ 20 ಹೋಂಸ್ಟೇ, ರೆಸಾರ್ಟಗಳಿಗೆ ಸಂಬಂಧಿಸಿದಂತೆ 25 ಪ್ರಕರಣಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುತ್ತವೆ.
ಕೊಪ್ಪಳ ತಾಲ್ಲೂಕಿನ ವಿದ್ಯುತ್ ಸಂಪರ್ಕ ಕಡಿತ ಮತ್ತು ಗ್ರಾಮ ಪಂಚಾಯತ್ (ಎನ್.ಒ.ಸಿ) ರದ್ದಿನೊಂದಿಗೆ ಒಟ್ಟು 40 ರೆಸಾರ್ಟಗಳನ್ನು ಮತ್ತು ಒಟ್ಟು 4 ಹೋಂಸ್ಟೇಗಳನ್ನು ಬಂದ್ ಮಾಡಿ ಸೀಜ್ ಮಾಡಲಾಗಿದೆ.
ಮೇಲೆ ವಿವರಿಸಿರುವಂತೆ ಅನಧಿಕೃತವಾಗಿ ನಿರ್ಮಿಸಿದ ಕೊಪ್ಪಳ ತಾಲ್ಲೂಕಿನ ಒಟ್ಟು 49 ಹೋಂಸ್ಟೇ & ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತ ಮತ್ತು ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ರದ್ದುಪಡಿಸಿ ಸೀಜ್ ಮಾಡಲಾಗಿರುತ್ತದೆ. ಗಂಗಾವತಿ ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 87 ಹೋಂಸ್ಟೇ, ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿರುತ್ತದೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ 5 ರೆಸಾರ್ಟಗಳನ್ನು ಅರಣ್ಯ ಇಲಾಖೆಯಿಂದ ಸಂಪೂರ್ಣವಾಗಿ ತೆರವುಗೊಳಿಸಲಾಗಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಗಂಗಾವತಿ ತಾಲ್ಲೂಕಿನ 20 ಹೋಂಸ್ಟೇ & ರೆಸಾರ್ಟ ಹಾಗೂ ಕೊಪ್ಪಳ ತಾಲ್ಲೂಕಿನ 2 ಹೋಂಸ್ಟೇ ಮತ್ತು 3 ರೆಸಾರ್ಟಗಳು ಸೇರಿ ಒಟ್ಟಾರೆ 25 ಪ್ರಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವಾದ ನಂತರ ನಿಯಾಮಾನುಸಾರ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.




