ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ-2026;ಕೊಪ್ಪಳ ಜಿಲ್ಲೆಯಲ್ಲಿ ಶೇ.92.59 ರಷ್ಟು ಮತದಾನ

H.Mallikarjun
H.Mallikarjun - Kalyanasiri
5 Min Read
ಜಾಹೀರಾತು

Karnataka North-East Teachers' Constituency Election 2026;
92.59% voter turnout in Koppal district

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ-2026;
ಕೊಪ್ಪಳ ಜಿಲ್ಲೆಯಲ್ಲಿ ಶೇ.92.59 ರಷ್ಟು ಮತದಾನ

ಜಾಹೀರಾತು


ಕೊಪ್ಪಳ, ಅಕ್ಟೋಬರ್ 23 (ಕರ್ನಾಟಕ ವಾರ್ತೆ): ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆಯು ಅಕ್ಟೋಬರ್ 23ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟಾರೆ ಶೇಕಡಾ 92.59 ರಷ್ಟು ದಾಖಲೆಯ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಕುಕನೂರ ಮತ್ತು ಯಲಬುರ್ಗಾ ತಾಲೂಕುಗಳಲ್ಲಿನ ಮತಗಟ್ಟೆಗಳಲ್ಲಿ
ಬೆಳಗ್ಗೆ 8 ಗಂಟೆಯಿAದ ಆರಂಭವಾದ ಮತದಾನವು ಸಂಜೆ 4 ಗಂಟೆವರೆಗೆ ನಡೆಯಿತು. ಮತದಾರ ಶಿಕ್ಷಕರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ 1,845 ಪುರುಷರು ಮತ್ತು 869 ಮಹಿಳೆಯರು ಸೇರಿ ಒಟ್ಟು 2,714 ಮತದಾರರಿದ್ದಾರೆ. ಇದರಲ್ಲಿ 1,732 (ಶೇ.93.88) ಪುರುಷರು ಮತ್ತು 781 (ಶೆ.89.87) ಮಹಿಳೆಯರು ಒಳಗೊಂಡAತೆ ಒಟ್ಟು 2,513 (ಶೇ.92.59) ಮತದಾರರು ಮತ ಚಲಾಯಿಸಿದ್ದಾರೆ.  
ಶಾಂತಿಯುತ ಮತದಾನ: ಕೊಪ್ಪಳ ಜಿಲ್ಲೆಯ ಏಳು ತಾಲೂಕುಗಳಲ್ಲಿನ ಎಲ್ಲಾ 20 ಮತಗಟ್ಟೆಗಳಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಮತದಾನ ಜರುಗಿದೆ.
ಜಿಲ್ಲಾಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಈಶಾನ್ಯ ಶಿಕ್ಷಕರ ಕ್ಷೇತ್ರದ ಮತಗಟ್ಟೆಗಳಾದ ಕೊಪ್ಪಳ ತಾಲೂಕು ಪಂಚಾಯತ್, ಕುಕನೂರು ಮತ್ತು ಅಳವಂಡಿಯಲ್ಲಿನ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಹಂತ ಹಂತವಾಗಿ ಏರಿಕೆಯಾದ ಮತದಾನ: ಬೆಳಗ್ಗೆ 10 ಗಂಟೆಯವರೆಗೆ ಶೇ.12.42ರಷ್ಟು ಜನರು ಮತ ಚಲಾವಣೆ ಮಾಡಿದ್ದರು. ಮಧ್ಯಾಹ್ನ ವೇಳೆಗೆ ಮತದಾನ ಪ್ರಕ್ರಿಯೆ ಚುರುಕುಗೊಂಡಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಶೇ.49.89 ರಷ್ಟು,  
ಮಧ್ಯಾಹ್ನ 2 ಗಂಟೆವರೆಗೆ ಮತದಾನದ ಪ್ರಮಾಣ ಗಣನೀಯ ಏರಿಕೆಯಾಗಿ ಶೇ.78.11ರಷ್ಟು ದಾಖಲಾಯಿತು. ಅಂತಿಮವಾಗಿ ಸಂಜೆ 4 ಗಂಟೆಗೆ ಮತದಾನ ಮುಕ್ತಾಯದ ವೇಳೆಗೆ ಒಟ್ಟು 2,513 ಮತಗಳು ಚಲಾವಣೆಯಾಗುವ ಮೂಲಕ ಶೇ.92.59 ರಷ್ಟು ದಾಖಲೆಯ ಮತದಾನವಾಯಿತು.
ತಾಲೂಕುವಾರು ಮತದಾನದ ವಿವರ: ಬೆಳಗ್ಗೆ 8 ಗಂಟೆಯಿAದ ಮಧ್ಯಾಹ್ನ 4 ಗಂಟೆವರೆಗೆ ನಡೆದ ಮತದಾನದ ತಾಲೂಕುವಾರು ವಿವರ ಇಂತಿದೆ.
ಗAಗಾವತಿ ತಾಲೂಕು: ಗಂಗಾವತಿ ತಾಲೂಕಿನ ಮತಗಟ್ಟೆ ಸಂಖ್ಯೆ 108ರಲ್ಲಿ ಒಟ್ಟು 236 ಪುರುಷ ಮತದಾರರ ಪೈಕಿ 223 ಮತದಾರರು ಹಾಗೂ ಒಟ್ಟು 161 ಮಹಿಳಾ ಮತದಾರರ ಪೈಕಿ 150 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 109ರಲ್ಲಿ ಒಟ್ಟು 63 ಪುರುಷ ಮತದಾರರ ಪೈಕಿ 60 ಮತದಾರರು ಹಾಗೂ ಒಟ್ಟು 23 ಮಹಿಳಾ ಮತದಾರರ ಪೈಕಿ 22 ಜನರು ಮತ ಚಲಾಯಿಸಿದ್ದಾರೆ. ಮತಗಟ್ಟೆ ಸಂಖ್ಯೆ 110ರಲ್ಲಿ ಒಟ್ಟು 46 ಪುರುಷ ಮತದಾರರ ಪೈಕಿ 45 ಮತದಾರರು ಹಾಗೂ ಒಟ್ಟು 28 ಮಹಿಳಾ ಮತದಾರರ ಪೈಕಿ 24 ಜನರು ಮತದಾನ ಮಾಡಿದ್ದಾರೆ.
ಕಾರಟಗಿ ತಾಲೂಕು: ಕಾರಟಗಿ ತಾಲೂಕಿನ ಮತಗಟ್ಟೆ ಸಂಖ್ಯೆ 111ರಲ್ಲಿ ಒಟ್ಟು 94 ಪುರುಷ ಮತದಾರರ ಪೈಕಿ 89 ಮತದಾರರು ಹಾಗೂ ಒಟ್ಟು 55 ಮಹಿಳಾ ಮತದಾರರ ಪೈಕಿ 49 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 112ರಲ್ಲಿ ಒಟ್ಟು 41 ಪುರುಷ ಮತದಾರರ ಪೈಕಿ 40 ಮತದಾರರು ಹಾಗೂ ಒಟ್ಟು 15 ಮಹಿಳಾ ಮತದಾರರ ಪೈಕಿ 13 ಜನರು ಮತದಾನ ಮಾಡಿದ್ದಾರೆ.
ಕನಕಗಿರಿ ತಾಲೂಕು: ಕನಕಗಿರಿ ತಾಲೂಕಿನ ಮತಗಟ್ಟೆ ಸಂಖ್ಯೆ 113ರಲ್ಲಿ ಒಟ್ಟು 50 ಪುರುಷ ಮತದಾರರ ಪೈಕಿ 48 ಮತದಾರರು ಹಾಗೂ ಒಟ್ಟು 16 ಮಹಿಳಾ ಮತದಾರರ ಪೈಕಿ 15 ಜನರು ಮತದಾನ ಮಾಡಿದ್ದಾರೆ.
ಕುಷ್ಟಗಿ ತಾಲೂಕು: ಕುಷ್ಟಗಿ ತಾಲೂಕಿನ ಮತಗಟ್ಟೆ ಸಂಖ್ಯೆ 114ರಲ್ಲಿ ಒಟ್ಟು 97 ಪುರುಷ ಮತದಾರರ ಪೈಕಿ 88 ಮತದಾರರು ಹಾಗೂ ಒಟ್ಟು 51 ಮಹಿಳಾ ಮತದಾರರ ಪೈಕಿ 47 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 115ರಲ್ಲಿ ಒಟ್ಟು 77 ಪುರುಷ ಮತದಾರರ ಪೈಕಿ 67 ಮತದಾರರು ಹಾಗೂ ಒಟ್ಟು 15 ಮಹಿಳಾ ಮತದಾರರ ಪೈಕಿ 14 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 116ರಲ್ಲಿ ಒಟ್ಟು 63 ಪುರುಷ ಮತದಾರರ ಪೈಕಿ 62 ಮತದಾರರು ಹಾಗೂ ಒಟ್ಟು 11 ಮಹಿಳಾ ಮತದಾರರ ಪೈಕಿ 10 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 117ರಲ್ಲಿ ಒಟ್ಟು 98 ಪುರುಷ ಮತದಾರರ ಪೈಕಿ 91 ಮತದಾರರು ಹಾಗೂ ಒಟ್ಟು 17 ಮಹಿಳಾ ಮತದಾರರ ಪೈಕಿ 15 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 118ರಲ್ಲಿ ಒಟ್ಟು 58 ಪುರುಷ ಮತದಾರರ ಪೈಕಿ 58 ಮತದಾರರು ಹಾಗೂ ಒಟ್ಟು 22 ಮಹಿಳಾ ಮತದಾರರ ಪೈಕಿ 20 ಜನರು ಮತದಾನ ಮಾಡಿದ್ದಾರೆ.
ಕುಕನೂರು ತಾಲೂಕು: ಕುಕನೂರು ತಾಲೂಕಿನ ಮತಗಟ್ಟೆ ಸಂಖ್ಯೆ 119ರಲ್ಲಿ ಒಟ್ಟು 164 ಪುರುಷ ಮತದಾರರ ಪೈಕಿ 156 ಮತದಾರರು ಹಾಗೂ ಒಟ್ಟು 56 ಮಹಿಳಾ ಮತದಾರರ ಪೈಕಿ 53 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 120ರಲ್ಲಿ ಒಟ್ಟು 31 ಪುರುಷ ಮತದಾರರ ಪೈಕಿ 27 ಮತದಾರರು ಹಾಗೂ ಒಟ್ಟು 5 ಮಹಿಳಾ ಮತದಾರರ ಪೈಕಿ 5 ಜನರು ಮತದಾನ ಮಾಡಿದ್ದಾರೆ.
ಯಲಬುರ್ಗಾ ತಾಲೂಕು: ಯಲಬುರ್ಗಾ ತಾಲೂಕಿನ ಮತಗಟ್ಟೆ ಸಂಖ್ಯೆ 121ರಲ್ಲಿ ಒಟ್ಟು 126 ಪುರುಷ ಮತದಾರರ ಪೈಕಿ 123 ಮತದಾರರು ಹಾಗೂ ಒಟ್ಟು 40 ಮಹಿಳಾ ಮತದಾರರ ಪೈಕಿ 33 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 122ರಲ್ಲಿ ಒಟ್ಟು 44 ಪುರುಷ ಮತದಾರರ ಪೈಕಿ 43 ಮತದಾರರು ಹಾಗೂ ಒಟ್ಟು 12 ಮಹಿಳಾ ಮತದಾರರ ಪೈಕಿ 12 ಜನರು ಮತದಾನ ಮಾಡಿದ್ದಾರೆ.
ಕೊಪ್ಪಳ ತಾಲೂಕು: ಕೊಪ್ಪಳ ತಾಲೂಕಿನ ಮತಗಟ್ಟೆ ಸಂಖ್ಯೆ 123ರಲ್ಲಿ ಒಟ್ಟು 77 ಪುರುಷ ಮತದಾರರ ಪೈಕಿ 72 ಮತದಾರರು ಹಾಗೂ ಒಟ್ಟು 17 ಮಹಿಳಾ ಮತದಾರರ ಪೈಕಿ 15 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 124ರಲ್ಲಿ ಒಟ್ಟು 58 ಪುರುಷ ಮತದಾರರ ಪೈಕಿ 54 ಮತದಾರರು ಹಾಗೂ ಒಟ್ಟು 18 ಮಹಿಳಾ ಮತದಾರರ ಪೈಕಿ 18 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 125ರಲ್ಲಿ ಒಟ್ಟು 353 ಪುರುಷ ಮತದಾರರ ಪೈಕಿ 324 ಮತದಾರರು ಹಾಗೂ ಒಟ್ಟು 260 ಮಹಿಳಾ ಮತದಾರರ ಪೈಕಿ 225 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 126ರಲ್ಲಿ ಒಟ್ಟು 34 ಪುರುಷ ಮತದಾರರ ಪೈಕಿ 30 ಮತದಾರರು ಹಾಗೂ ಒಟ್ಟು 14 ಮಹಿಳಾ ಮತದಾರರ ಪೈಕಿ 11 ಜನರು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 127ರಲ್ಲಿ ಒಟ್ಟು 35 ಪುರುಷ ಮತದಾರರ ಪೈಕಿ 32 ಮತದಾರರು ಹಾಗೂ ಒಟ್ಟು 33 ಮಹಿಳಾ ಮತದಾರರ ಪೈಕಿ 30 ಜನರು ಮತದಾನ ಮಾಡಿದ್ದಾರೆ.

Total Views: 0
ಜಾಹೀರಾತು
Share This Article