
ಹನೂರು ತಾಲ್ಲೂಕಿನ ವಿವಿಧೆಡೆ ನೀರಿಲ್ಲ ಸಾರ್ವಜನಿಕರ ಪರದಾಟ ಜೆಜೆಎಮ್ ಅಧಿಕಾರಿಗಳ ಜಾಣಮೌನ ,
There is no water in various places in Hanur taluk, public protests, JJM officials remain silent,

ವರದಿ: ಬಂಗಾರಪ್ಪ ಸಿ.
ಹನೂರು:ಸಾರ್ವಜನಿಕರಿಗೆ ನೀರು ಒದಗಿಸುವಲ್ಲಿ ಜೆ ಜೆ ಎಮ್ ನವರು ಚಲ್ಲಾಟ ಜನರಿಗೆವ ಕುಡಿಯುವ ನೀರಿಗಾಗಿ ಪರದಾಟ ಪ್ರತಿ ಗ್ರಾಮದಲ್ಲೂ ತನ್ನದೆ ಆದ ನೀರಿನ ಸಮಸ್ಯೆಯನ್ನು ಅನುಭವಿಸಿ
ಜನರು ಕಿತ್ತಾಡುವಂತೆ ಮಾಡಲಾಗಿದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಗಳಲ್ಲೋಂದಾದ ಜೆಜೆಎಮ್ ಯೋಜನೆಯಿಂದ ಕಾಮಗಾರಿಗಳ ಅರ್ದಕರ್ದ ಮಾಡಿ ಉಂಡು ಹೋದ ಕೊಂಡು ಹೋದ ಎಂಬಂತೆ ಸರ್ಕಾರಕ್ಕೆ ಪಂಗನಾಮ ಹಾಕಿರುವ ಘಟನೆ ಜರುಗಿದೆ ,ಇದರ ಜೊತೆಯಲ್ಲಿ ನಮಗೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಿಳಿಸಿದೆ ಸಮರ್ಪಕವಾಗಿ ನೀರು ಒದಗಿಸುವಲ್ಲಿ ವಿಪಲವಾಗಿದ್ದಾರೆ, ಜೆ ಜೆ ಎಮ್ ಯೋಜನಾಧಿಕಾರಿಗಳ ಬೇಜವಾಬ್ದಾರಿ ನಡೆಯ ಎದ್ದುವ ಕಾಣುವಂತೆ ತೋರುತ್ತಿದೆ ಎಂಬುದಕ್ಕೆ ಭೈರನತ್ತರ ಗ್ರಾಮದಲ್ಲಿ ಸೃಷ್ಟಿಯಾಗಿರುವ ನೀರಿನ ಸಮಸ್ಯೆ ಗಳ ತಾಜ ಉದಾಹರಣೆಯಾಗಿದೆ.
ಹನೂರು ತಾಲೂಕು ಕೇಂದ್ರದ ಮಣಗಳ್ಳಿ ಗ್ರಾಮ ಪಂಚಾಯತಿಯ
ವ್ಯಾಪ್ತಿಯಲ್ಲಿನ ಭೈರನತ್ತ ಗ್ರಾಮದಲ್ಲಿ ದಿನೆದಿನೆ ನೀರಿನ ಸಮಸ್ಯೆ ಹೆಚ್ಚಾಗಿ ಉದ್ಭವವಾಗಿದ್ದು .
ಇಲ್ಲಿರುವ ಕೆಲವೆ ತೊಂಬೆಗಳಲ್ಲಿ ಸಿಗುವ ಅಲ್ಪ ಸ್ವಲ್ಪ ನೀರಿಗಾಗಿ ಜನರು ಕಿತ್ತಾಡಿ ಪರಿ ತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭೈರನತ್ತ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿ ಎರಡು ತಿಂಗಳೇ ಕಳೆದಿದ್ದರೂ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸುವಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಸಹ ನೀರು ಪೂರೈಸಲು ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಬೇಸಿಗೆ ಶುರುವಾಗುತ್ತಿದ್ದಂತೆ ನೀರಿನ ಸಮಸ್ಯೆ ಆಗಬಾರದೆಂದು ತಾಲ್ಲೊಕುಡಳಿತ ಶಾಸಕರು ಅಗತ್ಯ
ಕ್ರಮಗಳನ್ನು ಕೈಗೊಂಡು ಸಮರ್ಪಕ ನೀರು ಪೂರೈಸಬೇಕು ಎಂಬ ಸೂಚನೆಯನ್ನು ಜೆಜೆಎಮ್ ಅಧಿಕಾರಿಗಳಿಗೆ ನೀಡಿದ್ದಾರೆ ಆದರೂ ಇಲ್ಲಿನ ಮಣಗಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೇಜವಾಬ್ದಾರಿತನಕ್ಕೆ ನೀರಿನ ಹಾಹಾಕಾರ ಉಂಟಾಗಿದೆ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ಮುಂದಾಗದಿದ್ದ ಪಕ್ಷದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದರು.




