
ಮಾದಪ್ಪನ ಪಾದಯಾತ್ರಿ ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ :ಸಿಲ್ಕ್ ಸಿಟಿ ಅಧ್ಯಕ್ಷ ಪ್ತಕಾಶ್ .
Prasad distribution program for Madappa's padayatri devotees: Silk City President Ptakash.
ಹನೂರು : ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ರಾಮನಗರ ಸಿಲ್ಕ್ ಸಿಟಿ ವತಿಯಿಂದ ಪ್ರಸಾದ ವಿನಿಯೋಗ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ ಎಂದು ಸಿಲ್ಕ್ ಸಿಟಿ ಅಧ್ಯಕ್ಷರಾದ ಪ್ರಕಾಶ್ ವಿ ರವರು ತಿಳಿಸಿದರು.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಬಳಿ ಟೆಂಟ್ ನಿರ್ಮಿಸಿ ಕಳೆದ ಮೂರು ದಿನಗಳಿಂದ ನಿರಂತರ ಪ್ರಸಾದ ವಿನಿಯೋಗ ಅನ್ನ ದಾಸೋಹ ಎರ್ಪಡಿಸಿದ್ದು ಭಕ್ತರಿಗೆ ಊಟ ಉಪಹಾರ ಪಾನಕ ಮಜ್ಜಿಗೆ ಎಲೆ ಅಡಿಕೆ ವಿತರಣೆ ಮಾಡಲಾಗುತ್ತಿದೆ. ಫೆ 10 ರಿಂದ 13ರ ವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತದಿಗಳು ಪಾಲ್ಗೊಳ್ಳುತ್ತಿದ್ದಾರೆ.
ಇದೇ ವೇಳೆ ಪಾದಯಾತ್ರೆಗಳಿಗೆ ವಿಶ್ರಾಂತಿ ಪಡೆಯಲು ಹಾಗೂ ಮೊಬೈಲ್ ಗಳ ಚಾರ್ಜ ಗೆ ವ್ಯವಸ್ಥೆ ಮಾಡಲಾಗಿದೆ.
ಪಾದಯಾತ್ರೆ ವೇಳೆ ಆರೋಗ್ಯದ ದೃಷ್ಟಿಯಿಂದ ಔಷದೋಪಚಾರ ಮಾಡಲಾಗಿದ್ದು ಕುಡಿಯುವ ನೀರು ವಿತರಣೆ ಮಾಡಲಾಗುತ್ತಿದೆ.

ಇದೇ ಸಮಯದಲ್ಲಿ ಸಿಲ್ಕ್ ಸಿಟಿ ಅಧ್ಯಕ್ಷ ಪ್ರಕಾಶ ವಿ., ಜಿಲ್ಲಾ ಕಾರ್ಯದರ್ಶಿ ಬಿ. ಗೋಪಾಲ್, ಲತಾ ಗೋಪಾಲ್, ಬೋರಲಿಂಗಗೌಡ (ಕುಮಾರ್ ) ಉಸ್ತುವಾರಿ ಪ್ರಭಾಕರ್ ಎಲ್. ಕಾಂತರಾಜು, ರೋಟರಿ ರಾಮಾಗಡ್ ರಾಕರ್ಸ್ ರಾಮನಗರದ ಅಧ್ಯಕ್ಷ ಪ್ರಕಾಶ ಎಂ ಹೆಚ್. ಕಾರ್ಯದರ್ಶಿ ನಾಗೇಶ, ನಿರ್ದೇಶಕರುಗಳಾದ ತಿಮ್ಮಗೌಡ, ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.




