
ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಕ್ಕೆನೂತನ ಪದಾಧಿಕಾರಿಗಳ ಆಯ್ಕೆ
New office bearers elected for the Government Degree College Guest Lecturers Association

ಗಂಗಾವತಿ: ಗಂಗಾವತಿ ತಾಲೂಕು ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಕ್ಕೆ ಬುಧವಾರ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪವನ್‌ಕುಮಾರ್ ಗುಂಡೂರು, ಉಪಾಧ್ಯಕ್ಷರಾಗಿ ಶಿವಕುಮಾರ್ ಉಪಾಸಿ ಹಾಗೂ ಮುದುಕನಗೌಡ, ಕಾರ್ಯದರ್ಶಿಗಳಾಗಿ ಬಸವರಾಜ ಗೌಡನಬಾವಿ ಹಾಗೂ ಹುಸೇನ್ ಬಾಷಾ, ಸಂಘಟನಾ ಕಾರ್ಯದರ್ಶಿಗಳಾಗಿ ಎಸ್. ಎಸ್. ಖಾದ್ರಿ, ವಿನಯಕುಮಾರ ಪತ್ರಿಮಠ, ಭವಾನಿ, ಅಮರೇಶ ಹಾಗೂ ಅಜೀಜ್, ಖಜಾಂಚಿಯಾಗಿ ಹನುಮಂತ, ಮಾಧ್ಯಮ ಪ್ರತಿನಿಧಿಯಾಗಿ ಬಸವರಾಜ ಕರುಗಲ್ ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕಾದಂಬರಿ ದೇಶಪಾಂಡೆ, ಮಂಜಣ್ಣ ಪೂಜಾರ, ಸೋಮಶೇಖರ ಜೇಕೀನ್, ಕಳಕಪ್ಪ, ನಿರೋಷ, ಪಾಂಡುರಂಗ, ಜಗದೀಶ್, ಉಜ್ಜನಿ ಈಶ್ವರ, ಡಾ.ಮಂಜು.ಎನ್., ಡಾ.ಸತೀಶ್, ವಿಶ್ವನಾಥ ಅವರನ್ನು ಆಯ್ಕೆ ಮಾಡಲಾಯಿತು.
ಅತಿಥಿ ಉಪನ್ಯಾಸಕರ ಶ್ರೇಯೋಭಿವೃದ್ಧಿಗೆ ಸಂಘ ಕಂಕಣಬದ್ಧವಾಗಿ ಶ್ರಮಿಸುವುದಾಗಿ ನೂತನ ಅಧ್ಯಕ್ಷ ಪವನ್‌ಕುಮಾರ್ ಗುಂಡೂರು ಈ ವೇಳೆ ತಿಳಿಸಿದರು.
———




