
ಮಹಾತ್ಮ ಗಾಂಧಿ ನರೇಗಾ ಯೋಜನೆ
ಯತಾಸ್ಥಿತಿಗೆ ಮಹಿಳಾ ಕಾಂಗ್ರೆಸ್ ಒತ್ತಾಯ :
ಜ್ಯೋತಿ ಗೊಂಡಬಾಳ

Mahila Congress demands status quo of Mahatma Gandhi NREGA scheme: Jyoti Gondabaal

ಕೊಪ್ಪಳ: ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ
ನೀತಿಗಳು, ಧ್ವೇಷ ಮನಸ್ಥಿತಿಯಿಂದ ನರೇಗಾ
ಯೋಜನೆಯನ್ನು ಬದಲಾಯಿಸಿ ಮಹಾತ್ಮ ಗಾಂಧಿ ಅವರ ಹೆಸರು
ತೆಗೆದಿದ್ದನ್ನು ದೇಶವೇ ವಿರೋಧಿಸಬೇಕು ಎಂದು ಜಿಲ್ಲಾ
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ
ಕೋರಿದರು.
ಅವರು ನಗರದ ಗಾಂಧಿ ವೃತ್ತದಲ್ಲಿ ಜಲ್ಲಾ ಮಹಿಳಾ
ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ
ಗಾಂಧಿ ನರೇಗಾ ಯೋಜನೆ ಯಥಾಸ್ಥಿತಿ ಉಳಿಸಲು ಆಗ್ರಹಿಸಿ
ಪ್ರತಿಭಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರದ ಗೋಡ್ಸೆ ಮತ್ತು ಮನುಸ್ಮೃತಿ ಪಾಲಕರು
ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದು, ಯೋಜನೆಯ
ರೂಪ ಬದಲಿಸಿ, ರಾಜ್ಯ ಸರಕಾರಗಳಿಗೆ ಅನ್ಯಾಯ ಮಾಡಲು
ಹೊರಟಿದೆ, ಕೇಂದ್ರ ಬಿಜೆಪಿ ಸರಕಾರದ ದುಷ್ಟ
ಮನಸ್ಥಿತಿಯನ್ನು ಖಂಡಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆ
ಯಥಾಸ್ಥಿತಿ ಉಳಿಸಲು ಆಗ್ರಹಿಸಿ ಮಹಾತ್ಮ ಗಾಂಧೀಜಿ
ವೃತ್ತದವರೆಗೆ ಕಪುö್ಪ ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೇವೆ,
ಕೂಡಲೇ ಕೇಂದ್ರ ಎಚ್ಚೆತ್ತುಕೊಳ್ಳದಿದ್ದರೆ ಇದನ್ನು
ಜನಾಂದೋಲನವಾಗಿದೆ ರೂಪಿಸಲಾಗುತ್ತದೆ ಎಂದರು.
ಬಿಜೆಪಿ ನಾಯಕರು ಅಜ್ಞಾನದಿಂದ ಮಾತನಾಡುತ್ತಿದ್ದಾರೆ,
ಇಲ್ಲಿನ ಮಾಜಿ ಸಚಿವ ಹಾಲಪ್ಪಾಚಾರ ಅವರು ಹೊಸ ನರೇಗಾ ಕುರಿತು
ಕಾರ್ಯಾಗಾರ ಮಾಡುತ್ತೇವೆ, ಕಾಂಗ್ರೆಸ್ ಭ್ರಷ್ಟಾಚಾರ
ಮಾಡಲು ನರೇಗಾ ಯೋಜನೆ ಮಾಡಿದೆ ಎನ್ನುತ್ತಿದ್ದಾರೆ, ತಾವೂ
ಸಹ ಈ ಜಿಲ್ಲೆಯ ಶಾಸಕರಾಗಿ ಕ್ಯಾಬಿನೆಟ್ ಸಚಿವರಾಗಿ ಕೆಲಸ
ಮಾಡಿದಾಗ ನರೇಗಾದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಎಂದು
ಜನರಿಗೆ ತಿಳಿಸಿ, ಇನ್ನು ಜನರಿಗೆ ಮೋಸ ಮಾಡುವ ಯೋಜನೆಗಳ
ಬಗ್ಗೆ ಮತ್ರ ತಾವು ಕಾರ್ಯಾಗಾರ ಮಾಡಲು ಸಾಧ್ಯ ಎಂದು
ಕುಟುಕಿದರು ಇನ್ನು ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್ ಅವರಿಗೆ
ಮಾಹಿತಿಯ ಕೊರತೆ ಇದೆ, ಅವರು ಬೇರೆಯವರು
ಬರೆದುಕೊಟ್ಟಿದ್ದನ್ನು ಪತ್ರಿಕೆಗಳಿಗೆ ಕಳಿಸುವ ಮೊದಲು
ಸ್ವಲ್ಪ ಓದಿ ತಿಳಿದುಕೊಂಡು ಮಾಹಿತಿ ಕೊಡುವದು ಉತ್ತಮ,
ಇಲ್ಲವಾದರೆ ಸುಳ್ಳನ್ನೇ ಹತ್ತು ಬಾರಿ ಹೇಳಿ ಸತ್ಯ ಮಾಡಲು
ಹೇಳಿದ ನಿಮ್ಮ ಮಾಜಿ ನಾಯಕ ಈಶ್ವರಪ್ಪರ ಮಾತು
ಕೇಳುತ್ತಿದ್ದೀರಿ ಎಂದು ಭಾವಿಸಬೇಕಾಗುತ್ತದೆ.
೧೯೮೯ ರಲ್ಲಿ ೭ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ
ಜವಾಹರ ರೋಜಗಾರ ಯೋಜನೆ ಜಾರಿ ಮಾಡಲಾಗಿತ್ತು ಅದು ಐದು
ವರ್ಷಗಳ ಒಂದು ಯೋಜನೆ ಮತ್ತು ಬಡವರಿಗೆ ಉದ್ಯೋಗ
ನೀಡುವ ಉದ್ದೇಶ ಹೊಂದಿತ್ತು, ಆದರೆ ೨೦೦೫ರಲ್ಲಿ ಆಗಿದ್ದು
ಉದ್ಯೋಗ ಭದ್ರತೆಯ ಕಾನೂನು ನಂತರ ಅದನ್ನು
೨೦೦೯ರಲ್ಲಿ ಮಹಾತ್ಮ ಗಾಂಧಿ ಅವರ ೧೪೦ನೇ ಜನ್ಮ ದಿನದ ಸ್ಮರಣೆಗೆ
ಮಹಾತ್ಮ ಗಾಂಧಿ ನರೇಗಾ ಎಂದು ಮರುನಾಮಕರಣ
ಮಾಡಲಾಗಿದೆ. ನೀವು ಸುಳ್ಳು ಹೇಳಿದ ಹಾಗೆ ಇತಿಹಾಸ ಸುಳ್ಳು
ಹೇಳಲ್ಲ, ಜನರಿಗೆ ಎಲ್ಲಾ ಅರ್ಥವಾಗುತ್ತದೆ ಎಂದರು.
ಇನ್ನು ಈ ಯೋಜನೆಯ ದುಡಿಯುವ ದಿನಗಳನ್ನು
ಹೆಚ್ಚು ಮಾಡಿದೆ ಆದರೆ ಅದು ಆರ್.ಎಸ್.ಎಸ್. ಮನವೊಲಿಸುವ
ಉದ್ದೇಶ ಹಾಗೂ ರಾಜ್ಯ ಸರಕಾರಗಳಿಗೆ ವಿಶೇಷವಾಗಿ
ಬಿಜೆಪಿಯೇತರ ಸರಕಾರಗಳಿಗೆ ಅನ್ಯಾಯ ಮಾಡುವ
ಗುರಿಯೊಂದಿಗೆ ಬದಲಾವಣೆ ಮಾಡಲಾಗಿದೆ, ಕೇಂದ್ರವೇ ೯೦
ರಷ್ಟು ಅನುದಾನ ಕೊಡಬೇಕಿದ್ದ ಯೋಜನೆಯನ್ನು ಈಗ ೪೦
ರಷ್ಟು ರಾಜ್ಯ ಸರಕಾರ ಕೊಡುವ ಹಾಗೆ ಮಾಡಿದೆ, ಈಗಾಗಲೇ
ಜಿಎಸ್‌ಟಿ ಮೂಲಕ ಸುಲಿಗೆ ಮಾಡುತ್ತಿರುವ ಕೇಂದ್ರ ಇದರ ಭಾರ
ಹಾಕಿ ಯೋಜನೆ ಸಫಲವಾಗದಂತೆ ನೋಡಿಕೊಳ್ಳುವ ಗುರಿ
ಹೊಂದಿದೆ ಎಂದಿದ್ದಾರೆ.
ಇನ್ನು ಮಹಾತ್ಮ ಗಾಂಧಿ ಹೆಸರು ತೆಗೆದು ವಿಬಿ ಜಿ ರಾಮ ಜಿ
ಎಂದಿದ್ದಾರೆ, ಹೊಸ ಹೆಸರಲ್ಲಿ ಇರುವದು ಯೋಜನೆಯ
ಸಂಕ್ಷಿಪ್ತ ರೂಪವೇ ಹೊರತು ಶ್ರೀರಾಮನ ಹೆಸರಲ್ಲ, ಭಕ್ತ
ಮಂಡಳಿ ಮೂರ್ಖರಾಗುವದು ಬೇಡ, ಅವರೂ ಸಹ ಈ ದೇಶದ
ಮಾನವ ಸಂಪತ್ತು ಅದಕ್ಕೆ ಆಪತ್ತು ಬಾರದಿರಲಿ ಎಂದು
ಎಚ್ಚರಿಸಿದ್ದಾರೆ.
ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಮಾತನಾಡಿ, ಮಹಾತ್ಮ
ಗಾಂಧಿ ಅವರು ಕಂಡ ಕನಸು ನನಸು ಮಾಡಲು ಗ್ರಾಮೀಣ
ಜನರ ಜೀವನ ಸುಲಭವಾಗಿರಬೇಕು ಅದಕ್ಕಗಿ ನರೇಗಾ
ಯೋಜನೆ ಮೊದಲಿನ ರೀತಿಯಲ್ಲಿಯೇ ಇರಬೇಕು. ಹೊಸ
ಯೋಜನೆಯಲ್ಲಿರುವ ರಾಮ ವಾಸ್ತವವಾಗಿ ಶ್ರೀರಾಮನಲ್ಲ ಅದು
ನಾಥು ರಾಮ ಗೋಡ್ಸೆ ಆಗಿದೆ. ಮೋಶಾ ಅವರು ಅಧಿಕಾರ
ಕೇಂದ್ರೀಕರಿಸುವ ಬಹುದೊಡ್ಡ ಹಿಟ್ಲರ್‌ಗಳಾಗಿದ್ದಾರೆ. ಗ್ರಾಮ
ಮಟ್ಟದ ಅಧಿಕಾರ ಕಿತ್ತುಕೊಂಡು ತಾವು ನಿರ್ದೇಶನ
ಮಾಡಿದಂತೆ ಕೆಲಸ ಆಗಬೇಕು, ಅಲ್ಲಿ ಗುತ್ತಿಗೆದಾರರಿರಬೇಕು
ಮುಂದೆ ಅದರ ಇಡೀ ಗುತ್ತಿಗೆ ಆದಾನಿ ಅಂಬಾನಿ ಅವರಿಗೆ ದಕ್ಕಬೇಕು
ಎಂಬುವದಾಗಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಕಿಶೋರಿ
ಬೂದನೂರ, ಆಯೆ಼ಷಾ ಖಾನಂ, ಮಂಜುನಾಥ ಜಿ. ಗೊಂಡಬಾಳ,
ಯಾದವ ರವಿ ಕುರಗೋಡ, ಹೊನ್ನೂರಸಾಬ ಭೈರಾಪೂರ,
ಸಲೀಂ ಅಳವಂಡಿ, ಪದ್ಮಾವತಿ ಕಂಬಳಿ, ಸುಮಂಗಲಾ ನಾಯಕ,
ಮಲ್ಲಿಕಾರ್ಜುನ ಪೂಜಾರ, ಗಂಗಮ್ಮ ಚಿಕೇನಕೊಪ್ಪ,
ಯಶೋಧಾ ಮರಡಿ, ಚನ್ನಮ್ಮ, ಶಿಲ್ಪಾ ಗುಡ್ಲಾನೂರ, ಸಾವಿತ್ರಿ
ಗೊಲ್ಲರ, ಶರಣಮ್ಮ ಪೂಜಾರ, ಅಂಜಲಿ, ರೇಖಾ, ಶ್ರೀನಿವಾಸ ಪಂಡಿತ,
ಸೈಯದ್ ನಾಸಿರುದ್ದೀನ್, ಮೌನೇಶ ವಡ್ಡಟ್ಟಿ, ಹನುಮೇಶ
ಬೆಣ್ಣಿ ಅನೇಕರಿದ್ದರು. ಜಿಲ್ಲಾಧಿಕಾರಿಗಳ ಮೂಲಕ
ರಾಷ್ಟçಪತಿಗಳಿಗೆ ಬರೆದ ಮನವಿಯನ್ನು ಗ್ರೇಡ್ ೨
ತಹಶೀಲ್ದಾರ ಗವಿಸಿದ್ದಪ್ಪ ಮಣ್ಣೂರ ಅವರು ಮನವಿ
ಸ್ವೀಕರಿಸಿದರ


