
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅಗಳಕೇರಿಯ ಮಾಲತೇಶ್ ಗೆ ದ್ವಿತೀಯ ಸ್ಥಾನ

Malatesh from Agalakeri wins second place in bodybuilding competition

ಬಳ್ಳಾರಿ: ಇತ್ತೀಚೆಗೆ ನಗರದಲ್ಲಿ ಬಳ್ಳಾರಿ ಜಿಲ್ಲೆ ಫಿಟ್ನೆಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಭಾಗದ ದೇಹಧಾರ್ಡ್ಯ ಸ್ಪರ್ಧೆ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ಅಗಳಕೇರಿ ಗ್ರಾಮದ ಮಾಲತೇಶ್ ಶಿವಪ್ಪ ಮುಂಗ್ಲಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಜಿಕೆ ಕ್ಲಾಸಿಕ್ ಸೀಜನ್ – ೧ ರಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ದೇಹದಾರ್ಢ್ಯತೆಯ ಕಸರತ್ತು ಮತ್ತು ಪಟ್ಟುಗಳನ್ನು ಪ್ರದರ್ಶಿಸಿದ ಮಾಲತೇಶ್ ಬೇವಿನಹಳ್ಳಿ ಬಳಿ ಇರುವ ಕಿರ್ಲೋಸ್ಕರ್ ಇಂಡಸ್ಟಿçಯಲ್ ಫೆರಸ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಸ್ಪರ್ದೇ ಆಯೋಜಿಸಿದ ಮುಖ್ಯಸ್ಥರಾದ ಜಿ.ಕೆ. ಸ್ವಾಮಿ ಬಳ್ಳಾರಿ, ಜಡ್ಜ್ ಗಳಾಗಿ ಆಗಮಿಸಿದ ವಿಜಯ ನಗರದ ಖ್ಯಾತ ಬಾಡಿ ಬಿಲ್ಡರ್ ಹಾಗೂ ನಟ ಮಾರುತಿ, ರಾಘವೇಂದ್ರ ಠಾಕೂರ್, ಜಾವಿದ್, ಮೊಹಮದ್ ಇಸ್ಮಾಯಿಲ್ ಹಾಗೂ ಮಾರುತಿ ಜಿಮ್ ನ ಯುವಕರಾದ ಅಜಯ್ ಪ್ರದೀಪ್ ಇನ್ನಿತರು ಉಪಸ್ಥಿತರಿದ್ದರು.
—–




