
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಬಿ.ಕೆ.ರವಿ ರವರಿಗೆ ಸನ್ಮಾನ

Honored by Bangalore North University Chancellor Prof. B.K. Ravi

ಬೆಂಗಳೂರು.: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ನೂತನ ಕುಲಪತಿಯಾಗಿ ಪ್ರೊ. ಬಿ.ಕೆ ರವಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರು ವಿವಿಯ ಸಂವಹನ ವಿಭಾಗದಲ್ಲಿ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿಯ ಅತಿಥಿ ಸಹಾಯಕ ಗ್ರಂಥಪಾಲಕರಾದ ಡಾ. ಷಣ್ಮುಖಪ್ಪ ಕೆ. ಅವರು ಮಾತನಾಡಿ ಪ್ರೊ. ಬಿ.ಕೆ.ರವಿ ರವರು ನಮ್ಮ ರಾಜ್ಯದ ಪತ್ರಿಕೋದ್ಯಮ ಕ್ಷೇತ್ರದ ಅವಿಸ್ಮರಣೀಯ ಸೇವೆ ಸಲ್ಲಿಸಿದವರು. ನಮ್ಮ ಅಹಿಂದ ಸಮುದಾಯಗಳಿಗೆ ಮೇರು ಶಿಖರ ಇದ್ದಂತೆ, ಇವರು ಈ ಮೊದಲು ಕೊಪ್ಪಳ ವಿವಿಯ ಪ್ರಥಮ ಕುಲಪತಿಯಾಗಿದ್ದರು. ಇತ್ತೀಚಿಗೆ ರಾಜ್ಯ ಸರ್ಕಾರವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ನೇಮಕ ಮಾಡಿರುವುದು ಹೆಮ್ಮೆಯ ಸಂಗತಿ. ಪತ್ರಿಕಾರಂಗದಲ್ಲಿ ಸಾಕಷ್ಟು ಶಿಷ್ಯ ಬಳಗವನ್ನೇ ಹೊಂದಿರುವುದು ವಿಶೇಷ, ಇವರಿಗೆ ಇನ್ನಷ್ಟು ಸೇವೆ ಮಾಡಲು ಅ ಭಗವಂತ ಶಕ್ತಿ ನೀಡಲೆಂದು ಶುಭ ಹಾರೈಸುತ್ತೇನೆ. ಇದೇ ವೇಳೆ ಸಂವಹನ ವಿಭಾಗದ ಸಂಶೋಧನಾರ್ಥಿ ಈಶ್ವರ್,
ಮತ್ತಿತರರು ಉಪಸ್ಥಿತರಿದ್ದರು.


