
Historic resolution to ban alcohol, gambling, and matka in Ulenur village villagers' meeting
‘ಗ್ರಾಮದಲ್ಲಿ ಮದ್ಯ ಮಾರಾಟ, ಇಸ್ಪೀಟು ಹಾಗೂ ಮಟ್ಕಾದಂತ ಕಾನೂನು ಬಾಹಿರ ಜೂಜು ದಂದೆಗಳು ಯಾವುದೇ ಆತಂಕವಿಲ್ಲದೆ ನಡೆಯುತ್ತಿವೆ. ಇವುಗಳನ್ನು ಕಾನೂನು ಕ್ರಮ ತೆಗೆದುಕೊಳ್ಳಲು ಊರಿನ ಹಿರಿಯರ ಮತ್ತು ಮಹಿಳೆಯರ ಆಗ್ರಹಿಸಿದರು.


ಕಾರಟಗಿ :ತಾಲೂಕಿನ ಉಳೇನೂರಿನ ಗ್ರಾಮದ ದ್ಯಾವಮ್ಮನ ದೇವಸ್ಥಾನದ ಆವರಣದಲ್ಲಿ ಬೂದಗುಂಪ ಗ್ರಾಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಅಬಕಾರಿ ಇಲಾಖೆ, ತಹಸೀಲ್ದಾರ್ ಕಾರ್ಯಲಯ ಮತ್ತು ಪೊಲೀಸ್ ಇಲಾಖೆ, ಪಂಚಾಯತ್ ಅಧಿಕಾರಿಗಳ ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಗ್ರಾಮಸ್ಥರು ಗ್ರಾಮ ಸಭೆಯನ್ನು ನಡೆಸಿದರು.
ಗ್ರಾಮ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಬುದಗುಂಪ ಶಿಕ್ಷಕರಾದ ಭೀಮಣ್ಣ ಸರ್ ಮಾತನಾಡಿ, ಉಳೇನೂರು ಗ್ರಾಮವು ಕಲೆ ಮತ್ತು ಕ್ರೀಡೆಯಲ್ಲಿ ಮುಂದಿರುವ ಹಾಗೂ ಬಹಳಷ್ಟು ಜನ ಯುವಕರನ್ನು ಒಳಗೊಂಡಿರುವ ಗ್ರಾಮವಾಗಿದೆ. ಆದರೆ ಆ ಯುವಕರು ಒಂದು ಸರಿಯಾದ ದಾರಿಯಲ್ಲಿ ನಡೆಯುವಂತಹ ಕೊರತೆ ಎದ್ದು ಕಾಣುತ್ತಿದೆ. ಆದರೆ ಇಂದು ಮಧ್ಯಪಾನ ಓಸಿ, ಇಸ್ಪೆಟ್ ಅಂತಹ ದುಶ್ಚಟಗಳನ್ನು ನಿಷೇಧಿಸಿ, ವ್ಯಸನ ಮುಕ್ತ ಗ್ರಾಮ ವನ್ನಾಗಿ ಮಾಡುವಂತೆ ತೆಗೆದುಕೊಂಡಿರುವ ಈ ನಿರ್ಣಯ ಪ್ರಸಂಶನೀಯವಾಗಿದೆ ಎಂದರು.

ಅಬಕಾರಿ ಇಲಾಖೆಯ ನಿರೀಕ್ಷಕರಾದ ವಿಠಲ್ ಅವರು ಮಾತನಾಡಿ ಇಂದು ಇಲಾಖೆ ಮಾಡುವಂತಹ ಕಾರ್ಯವನ್ನ ಊರಿನ ಯುವಕರು ಮಾಡಿರುವುದು ತುಂಬಾ ಖುಷಿಯ ವಿಚಾರ ಹಾಗೆಯೇ ಗಂಗಾವತಿಯ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ಎಂಟು ಹಳ್ಳಿಗಳಲ್ಲಿ ಮದ್ಯಪಾನ ನಿಷೇಧ ಮಾಡಿ ವ್ಯಸನಮುಕ್ತ ಗ್ರಾಮಗಳಾಗಿ ಸ್ವಯಂ ಘೋಷಣೆಯಾಗಿವೆ. ಅದರಲ್ಲಿ ಉಳೆನೂರು ಗ್ರಾಮವು ಕೂಡ ಒಂದಾಗಿದೆ. ಈ ರೀತಿಯಾಗಿ ಗ್ರಾಮ ಸಭೆಯಲ್ಲಿ ಅಧಿಕಾರಿಗಳನ್ನು ಕರೆದು, ಒಂದಿಷ್ಟು ವಿಚಾರಗಳ ಚಿಂತನೆಗಳನ್ನು ನಡೆಸಿ, ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ವ್ಯಸನ ಮುಕ್ತ ಗ್ರಾಮ ವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವುದು ಮತ್ತು ಮೊದಲ ಬಾರಿಗೆ ಈ ರೀತಿಯ ಸಭೆಯಲ್ಲಿ ಭಾಗವಹಿಸಿ ಇಂತಹ ಕಾರ್ಯಕ್ರಮದಲ್ಲಿ ನಾನು ಇದರಲ್ಲಿ ಒಬ್ಬನ್ನಾಗಿ ಭಾಗವಹಿಸಿರುವುದು ಸಂತಸ ತಂದಿದೆ. ಉಳೆನೂರಿನ ಮಹಿಳೆಯರ ಈ ನೋವಿನ ಆಕ್ರಂದನದ ಮಾತನ್ನು ಕೇಳಿದರೆ, ಈ ಮಧ್ಯಪಾನ ಎಂಬುದು ಎಷ್ಟು ಕುಟುಂಬಗಳನ್ನು ಬೀದಿಪಾಲ್ ಮಾಡಿದೆ ಎಂಬುದು ಅರ್ಥವಾಗುತ್ತಿದೆ. ಹಾಗಾಗಿ ಯಾವುದೇ ರೀತಿಯ ಅಕ್ರಮವಾಗಿ ಮಧ್ಯಪಾನ ಮಾರಾಟ ಮಾಡುವಂತಹ ಸಂದರ್ಭ ಕಂಡು ಬಂದರೆ ಧೈರ್ಯವಾಗಿ ನಮಗೆ ತಿಳಿಸಿ ಇಲಾಖೆಗೆ ಸಂಪರ್ಕಿಸಿ ಕಾನೂನಿನ ಮೂಲಕ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದರು.
ಊರಿನ ಅನೇಕ ಮಹಿಳೆಯರು, ಸಂತ್ರಸ್ತೆಯರು ನಮ್ಮೂರಿನಲ್ಲಿ ಈ ಮಧ್ಯಪಾನ ನಿಷೇಧ ಆಗಲೇಬೇಕು, ಇವತ್ತು ನಮ್ಮ ಮಕ್ಕಳು ನನ್ನ ಗಂಡಂದಿರು ಕುಡಿದು ಗಲಾಟೆ ಮಾಡಿ ಎಷ್ಟೋ ಸಂಸಾರಗಳು ಹಾಳಾಗಿದ್ದಾವೆ, ಅದಕ್ಕಾಗಿ ಇವತ್ತಿನ ನಮ್ಮೂರಲ್ಲಿ ಮಧ್ಯಪಾನ ಮಾರಾಟ ನಿಷೇಧ ಆಗಲೇಬೇಕು ಈ ಗ್ರಾಮ ಸಭೆ ಮಾಡಿ ನಿರ್ಧಾರ ತೆಗೆದುಕೊಂಡು ತುಂಬಾ ಒಳ್ಳೆಯ ಕೆಲಸ ಎಂದರು.
“ಉಳೇನೂರು ಗ್ರಾಮದಲ್ಲಿ ಮಧ್ಯಪಾನ, ಇಸ್ಪೀಟು ಮತ್ತು ಓ.ಸಿಯಂತಹ ದುಶ್ಚಟಗಳನ್ನು ಶಾಶ್ವತವಾಗಿ ನಿಷೇಧಿಸಬೇಕು.
ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಮದ್ಯಪಾನ ಮಾರಾಟ, ಇಸ್ಪೀಟು ಮತ್ತು ಓಸಿಗಳಂತಹ ಕಾನುನು ಬಾಹಿರ ಚಟುವಟಿಕೆ, ದುಶ್ಚಟಗಳು ಹೆಚ್ಚಾಗಿವೆ. ಇತ್ತೀಚಿಗೆ ಊರಿನ ಯುವಕರು ಕುಡಿತಕ್ಕೆ ಬಲಿಯಾಗಿ ಮಾರಕವಾದ ಖಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಅನೇಕ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ. ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮದ್ಯಪಾನಕ್ಕೆ ಬಲಿಯಾಗಿದ್ದಾರೆ. ಉನ್ನತ ಶಿಕ್ಷಣ, ಉನ್ನತ ಮೌಲ್ಯಗಳನ್ನು ಕಲಿಯುವ ವಯಸ್ಸಿನಲ್ಲಿ ಮದ್ಯಪಾನದ ದುಶ್ಚಟಕ್ಕೆ ದಾಸರಾಗುತ್ತಿರುವುದು ದುರಂತ” ಬೇಸರ ವ್ಯಕ್ತಪಡಿಸಿದರು.
ನಂತರ ಗ್ರಾಮದಲ್ಲಿ ಸಾರಾಯಿ ಮಾರಾಟ, ಇಸ್ಪೀಟ್ ಹಾಗೂ ಜೂಜಾಟಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದರಿಂದ ಸಮಾಜಿಕ ಸ್ವಾಸ್ಥ್ಯ ಮತ್ತು ನೆಮ್ಮದಿ ಹಾಳಾಗುತ್ತಿರುವುದರಿಂದ ಸಂಪೂರ್ಣವಾಗಿ ಈ ಚಟುವಟಿಕೆ ನಿಲ್ಲಬೇಕೆಂದು ಆಗ್ರಹಿಸಿ ಕಾರಟಗಿ ತಹಶೀಲ್ದಾರರಿಗೆ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿದರು.
ಈ ವೇಳೆಯಲ್ಲಿ ಊರಿನ ಅನೇಕ ಮಹಿಳೆಯರು, ಮುಖಂಡರು, ಹಿರಿಯರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು. ಊರಿನ ಸಾವಿರಾರು ಜನರು ಭಾಗವಹಿಸಿದ್ದರು.




