
ನಿಷ್ಠುರವಾದಿ ಸತ್ಯಾನ್ವೇಷಕ ನಿಜಶರಣ ಅಂಬಿಗರ ಚೌಡಯ್ಯ : ಪ್ರೊ. ಕರಿಗೂಳಿ

Nijasharan Ambigara Chowdary, a staunch truth seeker: Prof. Kariguli

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ಅಂಬಿಗರ ಚೌಡಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರದ ಪ್ರೊ. ಕರಿಗೂಳಿಯವರು,
ಮಾತನಾಡಿ , ಬಸವ ಚಿಂತನೆಯ ಅತ್ಯಂತ ನೇರ,ನಿಷ್ಠುರ ಶರಣರಾದ ಅಂಬಿಗರ ಚೌಡಯ್ಯನವರ ವಚನಗಳು ಇಂದಿಗೂ ಕೂಡ ಆತ್ಮವಿರೋಧಿ ಗುರುಗಳನ್ನು ಪ್ರಶ್ನಿಸುವಂತಿವೆ, ಅವರ ವಿಮರ್ಶಾತ್ಮಕ ವಚನಗಳು, ಆಡಂಭರದ, ಮೂಢ ನಂಬಿಕೆಯ,ಅಸಮಾನತೆಯ ಹಾಗೂ ಇತರೆ ಎಲ್ಲಾ ರೀತಿಯ ಭಕ್ತಿರಹಿತ ಆಚರಣೆಗಳನ್ನು ವಿರೋಧಿಸುವ ಪ್ರಮುಖ ಜ್ಞಾನಸೂಕ್ತಿಗಳಾಗಿವೆ. ಸತ್ಯದ ಅನ್ವೇಷಣೆಗಾಗಿ ತುಂಬಾ ನಿಷ್ಠುರವಾಗಿ ಆಲೋಚಿಸಿದ ವಚನ ಸಾಹಿತ್ಯದ ಮಹನೀಯರು ಚೌಡಯ್ಯನವರು ಎಂದರು.
ಅಂಬಿಗರ ಚೌಡಯ್ಯರoತಹ ಶರಣರ ವಿಚಾಗಳನ್ನು ಇವತ್ತಿನ ಯುಗದಲ್ಲಿ ಹೇಳಬೇಕಾದರೂ ಕೂಡ ಒಂದು ಅರ್ಹತೆ ಬೇಕು ಎನ್ನುವಷ್ಟರ ಮಟ್ಟಿಗೆ ಅವರ ಕಟುವಾಗಿವೆ ಆದರೂ ಸತ್ಯವಾಗಿವೆ.
ಎಲ್ಲಾ ರೀತಿಯ ಸಾಮಾಜಿಕ ತಾರತಮ್ಯಗಳನ್ನು ಹೋಗಲಾಡಿಸಿ, ಸಮಾನತೆಯ ಸಂಸ್ಕೃತಿಯನ್ನು ಹುಟ್ಟುಹಾಕಲು ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯರವರ ವಚನಧಾರೆಗಳನ್ನು ಅನುಸರಿಸುತ್ತ ಜೀವಿಸುವ ಕಾರ್ಯವನ್ನು ಆಧುನಿಕ ಮನುಜರು ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ,
ಉಪನ್ಯಾಸಕರಾದ ವೆಂಕಟರಾಜು, ಗ್ರಂಥಾಪಾಲಕ ದೇವರಾಜ್,ಪ್ರವೀಣಕುಮಾರ್ ಹಾಗೂ ಕಾಲೇಜಿನ ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ ಮತ್ತು ಸಹಾಯಕ ಸಿಬ್ಬಂದಿಯವರಾದ,ಶಾಂತಿ ಚಿನ್ನವರಪ್ರಸಾದ ಹಾಗೂ ಶರಣಬಸವ ಉಪಸ್ಥಿತರಿದ್ದರು




