ರಾಜ್ಯ ಮಟ್ಟಕ್ಕೆ ಆಯ್ಕೆ ನಬೀಸಾಬನಿಗೆ ಸನ್ಮಾನ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

ರಾಜ್ಯ ಮಟ್ಟಕ್ಕೆ ಆಯ್ಕೆ ನಬೀಸಾಬನಿಗೆ ಸನ್ಮಾನ

ಜಾಹೀರಾತು

Nabisab, selected for state level, honored

1000242074


ಕೊಪ್ಪಳ. ನ.15:ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಕೊಪ್ಪಳ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ನಬೀಸಾಬ ತಂದಿ ರಾಜಾಸಾಬ್ ಮುಲ್ಲಾ ಇಂದು ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದ್ದಾರೆ.


ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿನ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಆಡಳಿತ ಮಂಡಿಳಿಯಿಂದ ಇಂದು ಸನ್ಮಾನಿಸಿ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಕುಮಾರ ನಬೀಸಾಬ ಮುಲ್ಲಾ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಲೆಯ ಕನ್ನಡ ಶಿಕ್ಷಕ ರಂಗನಾಥ ಮಾತನಾಡಿ ವಿದ್ಯಾರ್ಥಿಯ ಸಾಧನೆಯನ್ನು  ಕೊಂಡಾಡಿದ್ದಾರೆ
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯ ಗುರುರಾಜ ಅಗಳಿ .ಮುಖ್ಯೋಪಾಧ್ಯಾಯ ರಾದ ಕಲ್ಪನಾ ವಿಜಯಕುಮಾರ .ವೆಂಕಟೇಶ ದೈಹಿಕ ಶಿಕ್ಷಣದ ಶಿಕ್ಷಕ.ಭಾರತೀ.ಸುಲೋಚನಾ ರಮೇಶ ಡಂಬಳ..ಸ್ವಪ್ನ.ಜಾಕೀರಹುಸೇನ.ಮೈನುದ್ದೀನ ಸೇರಿದಂತೆ ಹಲವರು ಉಪಸ್ಥಿತರಿದ್ದರು
—–
ವೃದ್ದಾಶ್ರಮದಲ್ಲಿ ಮಕ್ಕಳ ದಿನಾಚರಣೆ
ಕೊಪ್ಪಳ. ನ.16:-ಇಂದಿನ ಮಕ್ಕಳೆ ಮುಂದಿನ ನಾಗರಿಕರು ಅವರಿಗೆ ಭವಿಷ್ಯದಲ್ಲಿ ವೃದ್ದಾಶ್ರಮದ ಚಿತ್ರಣ ಮತ್ತು ಅಲ್ಲಿರುವ ಹಿರಿಯ ಜೀವಗಳ ಬದುಕು ಯಾವ ಸ್ಥಿತಿಯಲ್ಲಿ ಇರುತ್ತದೆ ಎಂದು ತಿಳಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಕೊಪ್ಪಳ ನಗರದ ಸುರಭಿ ವೃದ್ದಾಶ್ರಮದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಿ ಭಾಗ್ಯನಗರ ಪಟ್ಟಣದ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯವರು ಗಮನ ಸೇಳೆದಿದ್ದಾರೆ.
ಆಧುನಿಕ ಜೀವನ ಶೈಲಿಯಲ್ಲಿ ಅವಿಭಕ್ತ ಕುಟುಂಬ ಕಲ್ಪನೆ ಮಾಯವಾಗಿ ತಂದೆ ತಾಯಿ ಸೇರಿದಂತೆ ಮನೆಯಲ್ಲಿನ ಹಿರಿಯರನ್ನು ಅಸಡ್ಡೆಯಿಂದ ಕಾಣುವ ಮೂಲಕ ಮುಪ್ಪಾವಸ್ತೆಯಲ್ಲಿ ಹಿರಿಯ ಜೀವಿಗಳನ್ನು ಅನಾಥಶ್ರಮ ವೃದ್ದಾಶ್ರಮದಲ್ಲಿ ಬಿಡುವ ಹೀನ ಕೆಲಸ ತಪ್ಪ ಎಂದು ಮಕ್ಕಳಿಗೆ ತಿಳಿಸುವ ಮಹತ್ವದ ಉದ್ದೇಶದಿಂದ ಭಾಗ್ಯನಗರ ಪಟ್ಟಣದಲ್ಲಿನ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸುರಭಿ ವೃದ್ದಾಶ್ರಮಕ್ಕೆ ತೆರೆಳಿ ಹಿರಿಯ ಜೀವಿಗಳಿಗೆ ಸಿಹಿ ಭೋಜನದ ಊಟ ನೀಡಿ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಿಳಿಯ ಸದಸ್ಯ ಗುರುರಾಜ ಅಗಳಿ. ಶಿಕ್ಷಕರಾದ ಶಿಲ್ಪಾ ಗುರುರಾಜ. ಚಾಂದ ಬ್ಯಾವೋ. ಸುನಿತಾ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು  ಶಾಲೆಯ ಆಡಳಿತ ಮಂಡಳಿಯಿಂದ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ



Total Views: 0
Share This Article