Sri Jagannath Dasaru Part 2 Teaser: Das literature is a legacy that instilled morality among the common people: Ruparani
ಗಂಗಾವತಿ: ನೂರಾರು ದಾಸರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಲ್ಲದೆ ಜನಸಾಮಾನ್ಯರಲ್ಲಿಗೆ ತೆರಳಿ ತಮ್ಮ ಹಾಡು ಕೀರ್ತನೆಗಳಿಂದ ನೈತಿಕತೆ ಬಿಂಬಿಸಿ ಜೀವನ ಮೌಲ್ಯ ಎತ್ತಿ ಹಿಡಿದಿದ್ದು ಶ್ರೀ ಜಗನ್ನಾಥ ದಾಸರು ಚಲನಚಿತ್ರ ಕನ್ನಡ ಚಿತ್ರರಂಗದ ಮೈಲುಗಲ್ಲಾಗಲಿದೆ ಎಂದು ಗಂಗಾವತಿ ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ರೂಪಾರಾಣಿ ರಾಯಚೂರು ಹೇಳಿದರು.
ಅವರು ನಗರದ ಶ್ರೀ ನಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಡಾ. ಮಧುಸೂದನ ಹವಾಲ್ದಾರ್ ನಿರ್ದೇಶನದ ಶ್ರೀ ಜಗನ್ನಾಥ ದಾಸರು ಭಾಗ ೦೨ ಚಿತ್ರದ ಟೀಸರ್ ಹಾಗು ಹಾಡುಗಳು ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿಗೆ ಮೊಬೈಲ ಹಾವಳಿಯಿಂದಾಗಿ ಯುವ ಕೆಲ ಯುವ ಸಮೂಹ ದಾರಿ ತಪ್ಪುತ್ತಿದ್ದು, ಇಂಥ ಚಿತ್ರ ವೀಕ್ಷಣೆಯಿಂದಾಗಿ ಜೀವನ ಮೌಲ್ಯಗಳ ಕುರಿತು ಜಾಗೃತಿ ಮೂಡುತ್ತದೆ ಎಂದರು.
ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಕೊಟ್ಯಾಂತರ ಬಜೆಟ್ ಹಾಕಿ ಕೈ ಸುಟ್ಟುಕೊಳ್ಳುತ್ತಿರುವ ಇಂಥ ದಿನಮಾನಗಳಲ್ಲಿ ಲಕ್ಷಾಂತರ ರೂಗಳಲ್ಲಿ ಚಿತ್ರ ನಿರ್ಮಿಸಿ, ನಿರ್ದೇಶಿಸಿ ರಾಜ್ಯದಾದ್ಯಂತ ಅಲ್ಲದೆ ಅಂತಾ ರಾಷ್ಟಿçÃಯ ಮಟ್ಟದಲ್ಲಿ ಚಿತ್ರ ಪ್ರದರ್ಶನ ಅವಕಾಶ ಗಿಟ್ಟಿಸಿಕೊಂಡು ಯಶಸ್ವಿ ನಿರ್ದೇಶಕರೆನಿಸಿದ ಮಧಸೂದನ ಹವಾಲ್ದಾರ್ ಅವರ ನೈಪುಣ್ಯತೆ ನಿಜಕ್ಕು ವಿಶಿಷ್ಟವಾದದು ಎಂದು ಗುಣಗಾನ ಮಾಡಿದರು.
ರಾಜಮಾತೆ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ, ನಮ್ಮ ಬದುಕನ್ನು ಹೇಗೆ ಸುಂದರ ಹಾಗು ಸುಸಂಸ್ಕೃತವಾಗಿಟ್ಟುಕೊಳ್ಳಬೇಕೆAಬುದು ದಾಸರು ತಮ್ಮ ಹಾಡುಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ ಅವರ ಹಾದಿಯಲ್ಲಿ ನಾವು ಸಾಗೋಣ ಎಂದು ಕಿವಿಮಾತು ಹೇಳಿದರು.
ನಿರ್ದೇಶಕ, ನಿರ್ಮಾಪಕ ಡಾ.ಮಧುಸೂದನ ಹವಾಲ್ದಾರ ಮಾತನಾಡಿ, ಮುಂದಿನ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಆಗಿ ಹೋದ ದಾಸರು, ಸಂತರು, ಶರಣರ ಚಿತ್ರಗಳನ್ನು ಹೊರತರುವ ಯೋಜನೆಯಿದೆ, ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ನಟ ಶರದ ದಂಡೀನ ವಕೀಲರು ಮಾತನಾಡಿ, ಅಮೇರಿಕಾದಲ್ಲಿ ಹಿರಿಯ ಕ್ಯಾನ್ಸರ್ ತಜ್ಞ ವೈದ್ಯರು ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರ ನಿರ್ವಹಿಸಿದ್ದು ಅತ್ಯುತ್ತಮ ತಾರಾಗಣದಲ್ಲಿ ಸ್ಥಳೀಯ ಕಲಾವಿದರು ನಟನೆ ಮಾಡಿದ್ದಾರೆ ಮುಂದಿನ ತಿಂಗಳು ಬಿಡುಗಡೆಗೊಳ್ಳುವ ಈ ಚಿತ್ರ ಬಿಡುಗಡೆಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದರು.
ಖ್ಯಾತ ಹಾಸ್ಯ ಭಾಷಣಕಾರ ನರಸಿಂಹ ಜೋಷಿಯವರು ಮಾತನಾಡಿ, ವಿಠಲನನ್ನು ನೆನದರೆ ಸಾವಿರ ಸಂಕಷ್ಟ ದೂರವಾಗುತ್ತವೆ, ಅಮುಲ್ಯ ಚರಿತೆಯ ಮೂಲಕ ಜೀವನ ಯಶಸ್ವಿಗೆ ನಿದರ್ಶನಗಳನ್ನು ನಮ್ಮಲ್ಲಿ ಬಿಟ್ಟು ಹೋಗಿದ್ದಾರೆ ನಾವು ಒಳಗಣ್ಣಿನಿಂದ ನೋಡಬೇಕು ಪ್ರತಿಯೊಬ್ಬರು ಚಿತ್ರ ವೀಕ್ಷಿಸಿ ಕನ್ನಡ ಚಿತ್ರದ್ಯಮವನ್ನು ಪ್ರೋತ್ಸಾಹಿಸಬೇಕೆಂದರು.
ಮಾತಾAಬುಜಾ ಮೂವಿಸ್‌ನಿಂದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ರೂಪಾರಾಣಿಯವರಿಗೆ ಶ್ರೀ ಜಗನ್ನಾಥ ವಿಠಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಜಗನ್ನಾಥ ದಾಸರು ಟೀಸರ್ ನೆರದವರನ್ನು ರೋಮಾಂಚನಗೊಳಿಸಿತು. ಹಾಡುಗಳು ವೀಕ್ಷಕರನ್ನು ಮಂತ್ರಮುಗ್ದರನ್ನಾಗಿ ಮಾಡಿದವು.
ಈ ಸಂದರ್ಭದಲ್ಲಿ ನಿರ್ಮಾಪಕ ಹಾಗು ನಟ ವಿಷ್ಣುತೀರ್ಥ ಜೋಷಿ, ಹಿರಿಯ ಕಲಾವಿದರು, ಪತ್ರಕರ್ತರಾದ ರಾಮಮೂರ್ತಿ ನವಲಿ, ನಿ ಹಿರಿಯ ಕಲಾವಿದರಾದ ಶರದದಂಡೀನ ವಕೀಲರು ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಘಾವತಿ ತಾಲೂಕು ಅಧ್ಯಕ್ಷರು ಹಾಗು ನಟ ನಾಗರಾಜ್ ಇಂಗಳಗಿ ಮತ್ತು ಗಾಯಕ ಪಂಪಾಪತಿ ಇಂಗಳಗಿಯವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಮುಖರಾದ ಮುತ್ತುರಾಜ್ ಶೆಟ್ಟಿ, ಸುರೇಶ್ ಶೆಟ್ಟಿ, ಈಶ್ವರ್ ಶೆಟ್ಟಿ, ಸುಬ್ರಮಣ್ಯಂ ರಾಯ್ಕರ್, ನಟರಾದ ವಿಷ್ಣುತೀರ್ಥ ಜೋಷಿ, ಶರದ ದಂಡೀನ ವಕೀಲರು, ಮಾರುತಿ ಪ್ರಸಾದ್ ರಾಯಚೂರು ಹಾಗು ಭಾಗ್ಯ ಈಶ್ವರ್‌ಶೆಟ್ಟಿ ಇತರರಿದ್ದರು.