Mr. Valmiki to the city today

ಕೊಪ್ಪಳ : ನಗರ ಹಾಗೂ ಜಿಲ್ಲೆಯ ವಿವಿಧ ಖಾಸಗಿ ಕಾರ್ಯಕ್ರಮಗಳಿಗೆ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಆಗಮಿಸಲಿದ್ದಾರೆ ಎಂದು ಟ್ರಸ್ಟಿನ ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ್ ಮತ್ತು ಎಸ್. ಟಿ. ಒಳ ಮೀಸಲಾತಿ ಹೋರಾಟ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮೀಜಿ ಅವರು ರವಿವಾರ ರಾತ್ರಿ ಯಲಬುರ್ಗಾ ತಾಲೂಕಿನ ವಂಕಲಕುಂಟಾ ಪ್ರವಾಸಿ ಮಂದಿರದಲ್ಲಿ ವಸತಿ ಮಾಡುತ್ತಾರೆ. ಸೋಮುವಾರ ಬೆಳಗ್ಗೆ ಯಲಬುರ್ಗಾ ಮತ್ತು ಕೊಪ್ಪಳಸ ವಿವಿಧ ಕಾರ್ಯಕ್ರಮಗಳಿಗೆ ಭೇಟಿ ನೀಡಿ, ನಂತರ ಕೊಪ್ಪಳ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿ.ಎ. ಅಗಡಿ ಬಡಾವಣೆಯ ವಾಲ್ಮೀಕಿ ಭವನ, ಸರ್ಕಾರಿ ಜಿಲ್ಲಾ ಹಳೆ ಆಸ್ಪತ್ರೆಯ ಹಿಂದುಗಡೆ ಇರುವ ವಾಲ್ಮೀಕಿ ಭವನ ಹಾಗೂ ಟಣಕನಕಲ್ ಸೀಮೆಯಲ್ಲಿ ಬರುತ್ತಿರುವ ವಾಲ್ಮೀಕಿ ಭವನಗಳಿಗೆ ಭೇಟಿ ನೀಡಿ ಅವುಗಳನ್ನು ತುರ್ತಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಾಸಕರು, ಸಚಿವರು ಹಾಗೂ ಸರ್ಕಾರಗಳೊಂದಿಗೆ ಮಾತನಾಡುವರು ಎಂದು ಅವರು ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
