Breaking News

ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್‌ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್‌ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಎಚ್ಚರಿಕೆ

Screenshot 2025 07 15 19 20 27 54 E307a3f9df9f380ebaf106e1dc980bb64334357726584612290 1024x480

ತೆರಿಗೆ  ನೋಟೀಸ್‌  ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ 

ಜಾಹೀರಾತು

ಬೆಂಗಳೂರು,ಜು.15: ವಾರ್ಷಿಕ 40 ಲಕ್ಷ ವಹಿವಾಟು ನಡೆಸಿರುವ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟೀಸ್‌ ಜಾರಿಗೊಳಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಕ್ರಮವನ್ನು ವಿರೋಧಿಸಿ ಇದೇ 23 ರಿಂದ ಎರಡು ದಿನಗಳ ಕಾಲ ಬಂದ್‌ ಆಚರಿಸಲು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ನಿರ್ಧರಿಸಿದೆ. ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದೆ.

Karnataka State Workers' Council warns of two-day state-wide milk, bakery product sale ban from July 23 against the Centre, which is issuing notices to pay crores of rupees in taxes

 

ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಜು. 23 ಮತ್ತು 24 ರಂದು ಬೇಕರಿ, ಬೀಡ ಅಂಗಡಿಗಳು, ಕೇಂದ್ರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ.

Screenshot 2025 07 15 19 20 45 71 E307a3f9df9f380ebaf106e1dc980bb64919956874708409086 679x1024

ನಂತರ 25 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತೇವೆ. ನಮ್ಮ ತಾತ, ಮುತ್ತಾತನ ಕಾಲದಿಂದ ಅಂಗಡಿ, ಮುಂಗಟ್ಟುಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನೋಟೀಸ್‌ ನೀಡಿರುವುದು ಸರಿಯಲ್ಲ. ನಮ್ಮ ಅಂಗಡಿ ಎರಡರಿಂದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಆದರೆ ಕೋಟ್ಯಂತರ ತೆರಿಗೆ ಪಾವತಿಸುವಂತೆ ಸೂಚಿಸಿರುವುದು ಸರಿಯಲ್ಲ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಉದ್ಯಮಿದಾರರಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ಶೋಕಾಸ್ ನೋಟಿಸ್‌  ಕೊಟ್ಟಿರುವುದು ಕಾನೂನು ಬಾಹಿರ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದ್ದು, ನಮಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ ಎಂದು ರವಿ ಶೆಟ್ಟಿ ಬೈಂದೂರು ಹೇಳಿದರು.

ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಜಿ.ಎಸ್.ಟಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್‌ ಹಿಂಪಡೆಯಬೇಕು. ಜಿ.ಎಸ್.ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತಕ್ಷಣವೇ ಸಣ್ಣ ಉದ್ದಿಮದಾರರ ಪರವಾದ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಉದ್ದಿಮೆದಾರರ ಪರವಾಗಿರಬೇಕು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಅನ್ವಯಿಸುತ್ತದೆ. ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಂಡರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.

ಸಭೆಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ,, ಕನ್ನಡ ಭೂಷಣ, ತೆರಿಗೆ ಮಾಹಿತಿದಾರ ಸುಬ್ರಮಣ್ಯ, ಗೋವಿಂದ ಬಾಬು ಪೂಜಾರಿ, ಪೂಜಾಶೆಟ್ಟಿ, ಮುರುಳಿ, ಕೃಷ್ಣ,  ಪ್ರಕಾಶ್ ಶೆಟ್ಟಿ, ಶಶಿಧರ್ ಗೌಡ, ನವೀನ್ ಕುಮಾರ್ ಹೆಗಡೆ, ರಾಜ್ಯ ಹೋಟೆಲ್ ಸಂಘದ ಅಧ್ಯಕ್ಷ ಜಿ ಕೆ ಶೆಟ್ಟಿ, ಶೋಭಾ ಗೌಡ, ನಾಗರಾಜ್, ಅನೂಪ್, ಪ್ರದೀಪ್, ಸುರೇಂದ್ರ ಶೆಟ್ಟಿ, ಶೈಲೇಶ್ ಪೂಜಾರಿ, ಮಣಿಕಂಠ ಮತ್ತಿತರರು ಉಪಸ್ಥಿತರಿದ್ದರು. 


About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.