Magalamani is outraged by the Education Minister's move to not have time to accept the request.

ಗಂಗಾವತಿ: ಯಲಬುರ್ಗಾ ತಾಲೂಕು ಹಿರೇವಂಕಲಗುಂಟ ಗ್ರಾಮದ ಬಾಲಕಿಯರ ಪ್ರೌಢ ಶಾಲೆಯ ನೂತನ ಕೊಠಡಿ ಉದ್ಘಾಟನೆ ಮಾಡಲು ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಸರಕಾರಿ ಶಾಲೆ ಉಳಿಸಲು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರಕಾರಿ ಶಾಲೆಗಳನ್ನು ಉಳಿಸಲು ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಆದರೆ ಮನವಿ ಸಲ್ಲಿಸಲು ಬಂದ ಸಂಘಟನೆಯ ಪದಾಧಿಕಾರಿಗಳಿಗೆ ಸಮಸ್ಯೆ ಹೇಳಲು ಅವಕಾಶ ನೀಡದೇ ಬಲವಂತದಿಂದ ಸ್ವೀಕರಿಸಿ ಸ್ಪಂದನೆ ಮಾಡಿಲ್ಲ ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೂರದ ಬೆಂಗಳೂರು ನಿಂದ ಅಪರೂಪಕ್ಕೆ ಆಗಮಿಸಿದ ಮಂತ್ರಿಗೆ ಮನವಿ ಸಲ್ಲಿಸಿ ಸಮಸ್ಯೆಗಳನ್ನು ಹೇಳಲು ಬಂದ ನಮಗೆ ನಿರಾಸೆಯಾಯಿತು ಎಂದು ಮಾಧ್ಯಮದವರ ಮುಂದೆ ಮ್ಯಾಗಳಮನಿ ಬೇಸರ ವ್ಯಕ್ತಪಡಿಸಿ ಚುನಾವಣೆ ಸಂದರ್ಭದಲ್ಲಿ ಮನೆ ಬಾಗಿಲಗೆ ಹೋಗಿ ಕೈಮುಗಿದು ಮತ ಕೇಳುತ್ತಾರೆ ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಒಂದು ಮನವಿ ಪತ್ರ ಸ್ವೀಕರಿಸಲು ಸಮಯ ಇರುವುದಿಲ್ಲ ಇಂಥ ಪರಿಸ್ಥಿತಿಯಲ್ಲಿ ಬಡವರ ಸಮಸ್ಯೆ ಕೇಳುವುದಕ್ಕೂ ಸಮಯ ಸಮಯವಿರುವುದಿಲ್ಲ. ಮಾತೆತ್ತಿದರೆ ವೇದಿಕೆ ಮೇಲೆ ಗ್ಯಾರಂಟಿ ಯೋಜನೆ ಗ್ಯಾರಂಟಿ ಗ್ಯಾರಂಟಿ ಅಂತ ಹೇಳಿ ಜನರ ಮುಂದೆ ಬೇರೆ ಪಕ್ಷದವರನ್ನು ವಿರೋಧ ಮಾಡುತ್ತಾ ಹೊರಟು ಹೋಗುತ್ತಾರೆ ಎಂದು ಮ್ಯಾಗಳಮನಿ ಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ದುರ್ಗೇಶ ಹೊಸಳ್ಳಿ, ಮಂಜುನಾಥ ಚನ್ನದಾಸರ ಮತ್ತಿತರರು ಇದ್ದರು.