
ಕೊಪ್ಪಳ ಜು ೭: ವಚನ ಸಾಹಿತ್ಯ ಬದುಕಿನ ಮೌಲ್ಯವನ್ನು ಹೆಚ್ಚಿಸುವ ದಿವ್ಯ ಔಷಧಿಯಾಗಿದೆ ಎಂದು ವಚನ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗೋನಾಳ ಹೇಳಿದರು. ವಚನ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕು ಘಟಕ ಅಧ್ಯಕ್ಷ ಭಾಗ್ಯನಗರದ ಶಿಕ್ಷಕ ಮೈಲಾರಪ್ಪ ಉಂಕಿ ಅವರ ಸದನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಜಿಲ್ಲೆಯ ಪ್ರತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬೆಳಗಿನ ಜಾವ ನಡೆಯುವ ಪ್ರಾರ್ಥನೆಯಲ್ಲಿ ಒಂದು ವಚನವನ್ನು ಮಕ್ಕಳ ಬಾಯಲ್ಲಿ ಹೇಳಿಸುಂತಾಗಬೇಕು. ಆ ದಿಸೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕ್ರಮ ಕೈಗೊಳ್ಳಲು ಅವರು ಮನವಿ ಮಾಡಿದರು.
ಬಸವಾನುಯಾಯಿ ವೈ. ಎಚ್ ಹಳ್ಳಿಕೇರಿ ಮಾತನಾಡಿ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ಬಸವಣ್ಣನು ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ ಎಂದು ಅಭಿಪ್ರಾಯ ಪಟ್ಟರು. ಸಭೆಯಲ್ಲಿ ಉಪಸ್ತಿತರಿದ್ದ ಸಾಹಿತಿ ಶಿ.ಕಾ. ಬಡಿಗೇರ ಪ್ರತಿ ತಿಂಗಳು ವಚನ ಗೋಷ್ಟಿ, ವಚನ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು.
ಹಿರಿಯ ಮಕ್ಕಳ ಸಾಹಿತಿ ಎ. ಪಿ ಅಂಗಡಿ, ಗವಿಸಿದ್ದಪ್ಪ ಬಾರಕೇರ, ಸುರೇಶ ಕುಂಬಾರ ಹಾಗೂ ಪ್ರದೀಪ ಹದ್ದಣ್ಣವರ ವಚನಕಾರರ ಒಂದೊAದು ವಚನ ಓದಿದರು. ಇದೇ ಸಂದರ್ಭದಲ್ಲಿ ಮೈಲಾರಪ್ಪ ಉಂಕಿ ದಂಪತಿಗಳನ್ನು ಸನ್ಮಾನಿಸಲಾಯಿತು.