Breaking News

ಶೈಕ್ಷಣಿಕ ಮತ್ತು ಕ್ರೀಡಾ ತಾರೆಗೆ ಸನ್ಮಾನ ಪ್ರತಿಭೆಗೆ ಪುರಸ್ಕಾರ – ಸಾಧನೆಗೆ ಗೌರವ

Screenshot 2025 06 23 15 46 48 83 6012fa4d4ddec268fc5c7112cbb265e7

Academic and sports stars honored, talent rewarded – respect for achievement

ಜಾಹೀರಾತು

ಗಂಗಾವತಿ ಜೂನ್ 22:ಕೊಪ್ಪಳದ ಫಾನಘಂಟಿ ಕಲ್ಯಾಣ ಮಂಟಪದಲ್ಲಿ ಹೈಬ್ರಿಡ್ ನ್ಯೂಸ್ ಮತ್ತು ಮಹಿಳಾ ಧ್ವನಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ” ವಿಜೃಂಭಣೆಯಿಂದ ನೆರವೇರಿತು.

ಈ ಸಂಧರ್ಭದಲ್ಲಿ ಗಂಗಾವತಿಯ ಬೇತಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ರೇಖಾ ಮುರುಗೇಶ್ ಅವರು ಕನ್ನಡ ವಿಷಯದಲ್ಲಿ ಅತಿ ಉತ್ತಮ ಅಂಕಗಳನ್ನು ಪಡೆದು ಶೈಕ್ಷಣಿಕವಾಗಿ ಕಿರೀಟವನ್ನೇ ತೊಟ್ಟಿದ್ದಾರೆ. ಅಲ್ಲದೆ, ಅವರು ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿ, ಪದಕ ಗಳಿಸಿರುವ ಹಿನ್ನೆಲೆಯಲ್ಲಿ, ಸಮಾರಂಭದಲ್ಲಿ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ್ರೀಡಾ ಶಿಕ್ಷಕ ಬಾಬುಸಾಬ್ ಅವರು, “ರೇಖಾ ಅವರು ಕನ್ನಡದಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ರಾಷ್ಟ್ರಮಟ್ಟದ ಸಾಧನೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಮತೋಲನ ಸಾಧಿಸುವುದು ಸುಲಭವಲ್ಲದ ನಡುವೆಯೂ, ಸಮಯದ ಶಿಸ್ತಿನಿಂದ, ಅವಿರತ ಪರಿಶ್ರಮದಿಂದ ಅವರು ಎರಡೂ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ 2025ನೇ ಸಾಲಿನ ಪದ್ಮಶ್ರೀ ಪುರಸ್ಕೃತರು ಭೀಮವ್ವ ಶಿಳ್ಳೇಕ್ಯಾತರ, ಶ್ರೀ ಸಿದ್ದೇಶ್ವರ ಸಂಸ್ಥಾನದ ಮರುಳಾರಾಧ್ಯ ಶಿವಚಾರ್ಯ ಸ್ವಾಮೀಜಿ, ಹೈಬ್ರಿಡ್ ನ್ಯೂಸ್‌ನ ಬಿ.ಎನ್. ಹೊರಪೇಟೆ, ಮಹಿಳಾ ಧ್ವನಿ ಸಂಸ್ಥೆಯ ಸ್ಥಾಪಕಿ ಪ್ರಿಯಾದರ್ಶಿನಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

About Mallikarjun

Check Also

screenshot 2025 10 09 17 51 12 32 6012fa4d4ddec268fc5c7112cbb265e7.jpg

ಗುರುವಂದನಾ ಕಾರ್ಯಕ್ರಮ ಹಳೆಯ ವಿದ್ಯಾರ್ಥಿಗಳ ಕಲಿತವರೆಲ್ಲರೂ ಸಂಭ್ರಮ

Guru Vandana program, alumni, and all the students were happy ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.