ಇಳಿ ವಯಸ್ಸಿನಲ್ಲಿ ಆಸ್ತಿ ರಕ್ಷಣೆ ಪರದಾಡುತ್ತಿರುವ ನಿವೃತ್ತನೌಕರ,ನ್ಯಾಯಕ್ಕಾಗಿಕಳೆದ೧೫ವರ್ಷಗಳಿಂದಹೋರಾಡುತ್ತಿರುವ ಹಿರಿಯ ಜೀವ
A retired employee struggling to protect his assets at a young age, an elderly man who has been fighting for justice for the past 15 years


ಗಂಗಾವತಿ. ಮೇ.೦೫: ಸಮೀಪದ ಆನೆಗುಂದಿಯಲ್ಲಿ ಪಿತ್ರಾರ್ಜಿತವಾಗಿ ಬಂದ ಸರ್ವೆ ನಂ.೩೦೬ರ ೦.೩೮ ಗುಂಟೆ ಜಮೀನನ್ನು ಅನ್ಯರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಸಾಲದೆಂಬAತೆ ಸರಕಾರಿ ಆಸ್ಪತ್ರೆಯೂ ಕೂಡ ನಮ್ಮ ಜಮೀನಿನಲ್ಲಿ ನಿರ್ಮಾಣಗೊಂಡಿದೆ. ನ್ಯಾಯ ಕೊಡಿಸುವಂತೆ ಕಳೆದ ೧೫ ವರ್ಷಗಳಿಂದ ಸಂಬAಧಿಸಿದ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆನೆಗೊಂದಿ ಗ್ರಾಮದ ನಿವೃತ್ತ ನೌಕರ ಹನುಮಂತಪ್ಪ ಅಂಬಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನೌಕರಿ ನಿಮಿತ್ತ ಹಲವಾರು ವರ್ಷಗಳಿಂದ ಬಾಗಲಕೋಟ, ರಾಯಚೂರು, ಕೊಪ್ಪಳ ಹೊಸಪೇಟೆ, ಹೂವಿನ ಹಡಗಲಿ ಇನ್ನಿತರ ಭಾಗಗಳಲ್ಲಿ ವಾಸವಿದ್ದು, ನಿವೃತ್ತಿ ನಂತರ ಸ್ವಂತ ಊರಾದ ಆನೆಗುಂದಿಯಲ್ಲಿ ನೆಲೆಸಿದ್ದೇನೆ. ನೌಕರಿ ಜಂಜಾಟದಲ್ಲಿ ವೇಳೆ ಸ್ಥಳೀಯರು ನಮ್ಮ ಭೂಮಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದಾರೆ. ವಿಪರ್ಯಾಸವೆಂದರೆ ನಮ್ಮ ಜಮೀನಿನಲ್ಲಿಯೇ ಸರ್ಕಾರಿ ಆಸ್ಪತ್ರೆ ಅಕ್ರಮವಾಗಿ ನಿರ್ಮಾಣವಾಗಿದೆ. ಈ ಕುರಿತಂತೆ ೨೦೧೩ ರಿಂದ ಸಂಬAಧಿಸಿದ ಗಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ತಹಶೀಲ್ದಾರ್, ಹಂಪಿ ಪ್ರಾಧಿಕಾರದ ಇನ್ನಿತರ ಅಧಿಕಾರಿಗಳಿಗೆ ದೂರು ನೀಡುತ್ತಾ ಬಂದಿದ್ದೇನೆ. ಆದರೆ ಯಾರೊಬ್ಬರೂ ನ್ಯಾಯ ಕೊಡಿಸುತ್ತಿಲ್ಲ. ನೌಕರಿಯಿಂದ ನಿವೃತ್ತನಾಗಿರುವ ನನ್ನ ಜೀವನ ನಿರ್ವಹಣೆಗೆ ಇದ್ದ ಅಲ್ಪಸ್ವಲ್ಪ ಜಮೀನು ಕಂಡವರ ಪಾಲಾಗಿದೆ. ಈಗಾಗಲೇ ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಾಗಿದ್ದೇನೆ. ವೈದ್ಯಕೀಯ ವೆಚ್ಚ ಭರಿಸಲೂ ಪರದಾಡುವಂತಾಗಿದೆ ಎಂದು ಹನುಮಂತಪ್ಪ ಅಂಬಿಗರ ಅಳಲು ತೋಡಿಕೊಂಡರು.
ನನ್ನ ತಾಯಿಯವರಿಂದ ವಂಶಪಾರAಪರ್ಯವಾಗಿ ಬಂದ ಜಮೀನು ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನ್ಯರ ಪಾಲಾಗಿದೆ. ಈ ಕುರಿತಂತೆ ಕಾನೂನು ಹೋರಾಟವನ್ನೂ ಆರಂಭಿಸಿದ್ದೇನೆ. ಆದರೆ ಈ ಇಳಿ ವಯಸ್ಸಿನಲ್ಲಿ ಹೃದಯ ರೋಗಿಯಾದ ನಾನು ದೈಹಿಕವಾಗಿ, ಆರ್ಥಿಕವಾಗಿ ಸದೃಢನಲ್ಲದ ಕಾರಣ ತೊಂದರೆಯಾಗಿದೆ. ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಹಿರಿಯ ನಾಗರಿಕನ ಈ ಮನವಿಯನ್ನು ಪರಿಗಣಿಸಿ ಆನೆಗುಂದಿ ಗ್ರಾಮಕ್ಕೆ ಸ್ವತಃ ಭೇಟಿ ನೀಡಿ ನಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ ಸತ್ಯಾಸತ್ಯೆ ಅರಿಯಬೇಕು. ನಮ್ಮ ೩೮ ಗುಂಟೆ ಜಮೀನನ್ನು ಸರ್ವೇ ಮಾಡುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು. ಕೂಡಲೇ ಒತ್ತುವರಿಯಾಗಿರುವ ನಮ್ಮ ಜಮೀನನ್ನು ನಮಗೆ ಹಿಂದಿರುಗಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಕಂಡ ಕಂಡಲ್ಲಿ ಗುಂಡಿ ತೋಡಿದರೂ ಕ್ಯಾರೇ ಅನ್ನದ ಪಿಡಿಓ
ಆನೆಗೊಂದಿ ಗ್ರಾಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ಪರವಾನಗಿ ಬೇಕಿಲ್ಲ. ಯಾರ ಹಂಗೂ ಇಲ್ಲದೆ ನಿರ್ಭಿತಿಯಿಂದ ಕಟ್ಟಡ ನಿರ್ಮಾಣ ಆರಂಭಿಸಬಹುದು. ಇಲ್ಲಿ ಪ್ರಾಧಿಕಾರದ ನಿಯಮಕ್ಕೆ ಬೆಲೆ ಇಲ್ಲ. ಈ ಬಗ್ಗೆ ಪಿಡಿಓ ರವೀಂದ್ರ ಕುಲಕರ್ಣಿ ಕೂಡ ಕ್ಯಾರೆ ಅನ್ನುವುದಿಲ್ಲ. “ನಿಮ್ಮ ಆಸ್ತಿಗೆ ನೀವೇ ಜವಾಬ್ದಾರರು” ಎಂಬ ಉಢಾಫೆ ಉತ್ತರ ನೀಡುತ್ತಾರೆ. ಆದರೆ ಸ್ಮಾರಕಗಳ ರಕ್ಷಣೆ ಕುರಿತಂತೆ ಪ್ರಾಧಿಕಾರ ಜಾರಿಗೊಳಿಸಿದ ನಿಯಮಗಳ ಬಗ್ಗೆ ಆತ ಮಾತನಾಡುವುದೇ ಇಲ್ಲ. ಮನೆ ಕಟ್ಟುವ ನೆಪದಲ್ಲಿ ನಿಧಿ ಚೋರರು ಕಂಡಕAಡಲ್ಲಿ ಜೆಸಿಬಿಯಿಂದ ಅಗೆಯುತ್ತಿದ್ದಾರೆ. ಆನೆಗುಂದಿಯ ಐತಿಹಾಸಿಕ ಅಗಸೆ ಬಾಗಿಲ ಸಮೀಪದಲ್ಲೇ ಜೆಸಿಬಿ ಗರ್ಜಿಸಿದರೂ ಪಿಡಿಓ ರವೀಂದ್ರ ತಮಗೆ ಸಂಬAಧ ಇಲ್ಲ ಎಂಬAತೆ ವರ್ತಿಸುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು.
