Appointment of office bearers of the Koppal District Youth Unit and District Women’s Youth Unit of the All India Veerashaiva Lingayat Mahasabha.

ಗಂಗಾವತಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಕೊಪ್ಪಳ ಜಿಲ್ಲಾ ಮಹಿಳಾ ಯುವ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ಮಹಾಸಭಾದ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪಾಟೀಲ್ ಕಲ್ಲೂರು ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಏಪ್ರಿಲ್-೨೦ ಭಾನುವಾರ ಕೊಪ್ಪಳದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿಯಾದ ಕೆ.ಬಿ. ಶ್ರೀನಿವಾಸರೆಡ್ಡಿ, ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಮ.ನಿ.ಪ್ರ.ಸ್ವ ಡಾ. ಮಹಾದೇವಸ್ವಾಮಿಗಳು ಕುಕನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವಪುತ್ರಪ್ಪ ಕಾಡನವರ್, ಕೊಪ್ಪಳ ತಾಲೂಕ ಅಧ್ಯಕ್ಷರಾದ ನಾಗಭೂಷಣ ಸಾಲಿಮಠ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಎಲ್ಲ ಮುಖಂಡರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಯುವ ಘಟಕಗಳನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು.
ಕೊಪ್ಪಳ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಹೆಚ್.ಎಂ. ವಿರುಪಾಕ್ಷಯ್ಯಸ್ವಾಮಿ, ಉಪಾಧ್ಯಕ್ಷರುಗಳಾಗಿ ಬೆಟ್ಟಪ್ಪ ಮೂಲಿಮನಿ, ವಿನಾಯಕ ಬೆನ್ನಳ್ಳಿ, ಶೇಖರಗೌಡ ಬೂದಗುಂಪ, ಅಯ್ಯನಗೌಡ ಕನಕರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ಕುಂಬಾರ, ಕಾರ್ಯದರ್ಶಿಗಳಾಗಿ ಅವಿನಾಶ ಅರಿಕೇರಿ, ಶಿವಣ್ಣ ಮೂಲಿಮನಿ, ವಿರೇಶ ಟೆಂಗಿನಕಾಯಿ, ಲಿಂಗರಾಜ ಲಿಂಗದಳ್ಳಿ, ಕೋಶಾಧ್ಯಕ್ಷರಾಗಿ ಪಂಪನಗೌಡ ಜಂತಕಲ್, ಸದಸ್ಯರುಗಳಾಗಿ ವೀರಣ್ಣ ಮರಳಿ, ವಿನಾಯಕ ಭಾವಿಕಟ್ಟಿ, ಜಗದೀಶ ಜವಳಿ, ನವೀನಕುಮಾರ ಮಾಲಿಪಾಟೀಲ್, ಶಿವಶರಣಗೌಡ ಯರಡೋಣ, ಶರಣಯ್ಯ ಬೇವಿನಾಳ, ಪಂಪಾಪತಿ ಶಿವಲಂತರ, ವೀರನಗೌಡ ಕೊಪ್ಪಳ, ಗವಿಸಿದ್ದಪ್ಪ ಮುದುಗಲ್, ಮಹೇಶ ಭೂತೆ, ಪ್ರವೀಣ ಮತ್ತೂರು, ಆಶಿಕ್ ಕಲಬುರ್ಗಿ, ದೊಡ್ಡಬಸವ ಪವಾಡಶೆಟ್ಟರ್, ಬಸವನಗೌಡ ಎಂ. ಓಲಿ, ವಿರುಪಾಕ್ಷ ಗುಂಡೂರು, ವಿಜಯಕುಮಾರ ಹಿರೇಮಠ, ಸಂಗಯ್ಯಸ್ವಾಮಿ ಸಂಶೀಮಠ, ಮಹಾಬಲೇಶ ಕಾರಟಗಿ, ಸಂತೊಷ ಹಾದಿಮನಿ, ಬಸವರಾಜ ಗಂಗಾವತಿ ಇವರುಗಳು ಆಯ್ಕೆಯಾದರು.
ಅದೇರೀತಿ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಲಲಿತಾ ಎಸ್. ಮ್ಯಾಗಳಮನಿ, ಉಪಾಧ್ಯಕ್ಷರುಗಳಾಗಿ ಪೂರ್ಣಿಮಾ ಶಶೀಧರಗೌಡ, ಸವಿತಾ ಗಂಗಾಧರಸ್ವಾಮಿ, ಶೀಲಾ ದೇಸಾಯಿಗೌಡ, ಶಾರದಾ ಕೆ. ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಮ್ಮ ಶರಣಬಸಪ್ಪ, ಕಾರ್ಯದರ್ಶಿಗಳಾಗಿ ಜಯಶ್ರೀ ಸಾಹುಕಾರ್, ಬಸಮ್ಮ ಶಿವಪುತ್ರಪ್ಪ, ನಂದಾ ಜಗದೀಶ, ಕಾವ್ಯ ಮಹೇಶ, ಕೋಶಾಧ್ಯಕ್ಷರಾಗಿ ವಿದ್ಯಾಲಕ್ಷಿö್ಮ ಗವಿಸಿದ್ದಪ್ಪ, ಸದಸ್ಯರುಗಳಾಗಿ ಸುಜಾತ ಅಯ್ಯನಗೌಡ, ಸರಸ್ವತಿ ವಿಶ್ವನಾಥ, ಶೈಲಾ ಸಂಗಪ್ಪ, ಬಸಮ್ಮ ಶಿವಾನಂದ, ವಿಶಾಲಾಕ್ಷಿ ಹೆಚ್.ಎಸ್.ಶಶಿಧರ, ಶಶಿಕಲಾ ಚಿನಿವಾಲರ್, ಡಿ.ವರಲಕ್ಷಿö್ಮ ಮಂಜುನಾಥ, ಲಕ್ಷಿö್ಮÃ ವಿರೇಶ, ನಯನ ವಿಜಯಕುಮಾರ, ಕೋಮಲಾ ಕೆ. ಕುದರಿಮೋತಿ, ಸುಮಂಗಲಾ ಮಲ್ಲಿಕಾರ್ಜುನ, ಗೀತಾಂಜಲಿ ಶರಣಯ್ಯ, ನೀಲಮ್ಮ ಶೇಖರಪ್ಪ, ಸವಿತಾ ಬಸವರಾಜ, ಅನ್ನಪೂರ್ಣ ಸಂಗಪ್ಪ, ಗೀತಾ ರಾಜಶೇಖರ, ಸುಧಾರಾಣಿ ರಮೇಶ, ಉಮಾಮಹೇಶ್ವರಿ ನಾಗೂರು, ಗೀತಾ ದೇವಣ್ಣ, ಪರಿಮಳ ಸಂಗಪ್ಪ ಇವರುಗಳು ಆಯ್ಕೆಯಾದರು.
ನೂತನವಾಗಿ ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳಿಗೆ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳಿಂದ ಅಭಿನಂದಿಸಿ, ಮಹಾಸಭಾದ ಎಲ್ಲಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವ ಮೂಲಕ ಬಲಪಡಿಸಲು ಸೂಚಿಸಲಾಯಿತು.