ಬಾಬುಜಗಜೀವನರಾಮ್ ಪ್ರಶಸ್ತಿಗೆ ಆಯ್ಕೆಯಾದಪ್ರಗತಿಪರ ಪೌರಕಾರ್ಮಿಕರ ಸಂಘದ ಶ್ರೀಮತಿ ಮಾಯಮ್ಮ

Mrs. Mayamma of the Progressive Civil Service Association selected for the Babu Jagjivanram Award

ಜಾಹೀರಾತು

ಗಂಗಾವತಿ: ಹಸಿರು ಕ್ರಾಂತಿಯ ಹರಿಕಾರ, ರಾಷ್ಟç ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಜನ್ಮದಿನಾಚರಣೆಯಲ್ಲಿ ಡಾ. ಬಾಬು ಜಗಜೀವನರಾಮ್ ಪ್ರಶಸ್ತಿಗೆ ರಾಜ್ಯಾಧ್ಯಂತ ಒಟ್ಟು ೧೫ ಜನ ಆಯ್ಕೆಯಾಗಿದ್ದು, ಅದರಲ್ಲಿ ಗಂಗಾವತಿ ನಗರಸಭೆಯ ಪೌರಕಾರ್ಮಿಕಳಾದ ಮಾಯಮ್ಮ ಅವರೂ ಒಬ್ಬರಾಗಿದ್ದಾರೆ ಎಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ಅವರು ನಮ್ಮ ಪ್ರಗತಿಪರ ಪೌರಕಾರ್ಮಿಕರ ಸಂಘದ ಸದಸ್ಯರಾಗಿದ್ದು, ಅವರಿಗೆ ಏಪ್ರಿಲ್-೦೫ ಶನಿವಾರ ಬೆಂಗಳೂರಿನ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಸಂಘದ ಸದಸ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಆಯ್ಕೆ ಸಮಿತಿಗೆ ನಮ್ಮ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ಸ್ವಾಗತಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಶ್ರೀಮತಿ ಮಾಯಮ್ಮ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೃತಿ ಎಂ., ವ್ಯವಸ್ಥಾಪಕರಾದ ಸಂಗಪ್ಪ ಜೈನಾಪುರ, ಸೀನಿಯರ್ ವಾರ್ಡನ್‌ರಾದ ಸುಮಂಗಲಾ ವಾಲಿ, ವಾರ್ಡನ್ ಆದ ವಿರುಪಾಕ್ಷಪ್ಪ, ಪ್ರಥಮ ದರ್ಜೆ ಸಹಾಯಕರಾದ ರಾಮಾಂಜನೇಯ, ಕಂಪ್ಯೂಟರ್ ಆಪರೇಟರ್ ಅಶೋಕ ಮತ್ತು ನವಲಿ ತಾಂಡ ಆಶ್ರಮ ಶಾಲೆಯ ಶಿಕ್ಷಕರಾದ ಮಂಜುನಾಥ ಇವರುಗಳು ಹಾಗೂ ಸಿ.ಪಿ.ಐ.ಎಂ.ಎಲ್ ಪಕ್ಷದ ಸಣ್ಣ ಹನುಮಮತಪ್ಪ, ರಮೇಶ ಉಪಸ್ಥಿತರಿದ್ದರು.