Breaking News

ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

Naming ceremony for 118 children at Sri Siddaganga Mutt

ಜಾಹೀರಾತು

ಬೆಂಗಳೂರು, ಮಾ.16- ಡಾ ಶ್ರೀ.

ಶಿವಕುಮಾರ ಮಹಾ ಸ್ವಾಮಿಗಳವರ 118ನೇ ಹುಟ್ಟುಹಬ್ಬದಂದು ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶ್ರೀ ಶಿವಕುಮಾರಸ್ವಾಮೀಜಿ ದಾಸೋಹ ಟ್ರಸ್ಟ್‌ ತಿಳಿಸಿದೆ.ಮಾ.1 ದಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ.ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, ಸಿದ್ದಗಂಗಾ ಮಠ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನಾಮಕರಣಕ್ಕೆ ಅರ್ಜಿ : 73488 53276 ಸಂಖ್ಯೆಯನ್ನು ಸಂಪರ್ಕಿಸಬಹುದು.ಇನ್ನು ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತು ಮಾಡಬೇಕು. ನಾಮಕರಣಗೊಳ್ಳುವ ಮಗುವಿನ ಜನನ ಪ್ರಮಾಣ ಪತ್ರ.ತಂದೆ ಅಥವಾ ತಾಯಿಯ ಆಧಾರ ಕಾರ್ಡ್ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ಮಾ.31 ಕೊನೆ ದಿನ,ನಾಮ ಕರಣಗೊಳ್ಳ ಬಯಸುವ ಮಕ್ಕಳ ವಯಸ್ಸು : ನವಜಾತ ಶಿಶುವಿನಿಂದ 1 ವರ್ಷದೊಳಗಿನ ಮಕ್ಕಳು ಮಾತ್ರ. ಗಂಡು ಮಗುವಿಗೆ ಹುಟ್ಟು ಹೆಸರು ಶಿವಕುಮಾರಸ್ವಾಮಿ ಎಂತಲೂ ಹೆಣ್ಣು ಮಕ್ಕಳಿಗೆ ಶಿ ಅಕ್ಷರದಿಂದ ಪ್ರಾರಂಭವಾಗುವ ಹುಟ್ಟು ಹೆಸರನ್ನು ನಾಮಾಂಕಿತಗೊಳಿಸಲು ಕೋರಲಾಗಿದೆ.

About Mallikarjun

Check Also

ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದ ನರೇಗಾ ನೌಕರರು

NREGA employees have started an indefinite non-cooperation movement by stopping work. 6 ತಿಂಗಳ ಬಾಕಿ ವೇತನ …

Leave a Reply

Your email address will not be published. Required fields are marked *