Breaking News

ಪ್ರಜಾಪಿತಬ್ರಹ್ಮಕುಮಾರಿ ಈಶ್ವರಿಯವಿಶ್ವವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಪರಿಸರ ಸಂರಕ್ಷಣಾ ಮಹೋತ್ಸವ

Environment Conservation Festival on Mahashivratri by Prajapit Brahma Kumari Eishwari University

ಜಾಹೀರಾತು
ಜಾಹೀರಾತು

ಕೊಪ್ಪಳ, ಪ್ರಜಾ ಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಪರಿಸರ ಸಂರಕ್ಷಣಾ ಮಹೋತ್ಸವ ಕಾರ್ಯಕ್ರಮ ಈಶ್ವರಗುಡಿ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತ ಮಾತನಾಡುತ್ತಾ ಪರಿಸರ ಸಂರಕ್ಷಣಾ ಮಹೋತ್ಸವದಡಿಯಲ್ಲಿ ನಗರದ ಪೌರಕಾರ್ಮಿಕರಿಗೆ ಈಶ್ವರಿಯ ಸನ್ಮಾನ ಕಾರ್ಯಕ್ರಮ ಏರ್ಪಡಿಸಿರುವುದು ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದರು ಪೌರಕಾರ್ಮಿಕರು ಬೆಳಿಗ್ಗೆ ಎದ್ದು ಸ್ವಚ್ಛ ಮಾಡದೇ ಹೋದರೆ ನಗರದಲ್ಲಿ ನಾವು ನಡೆದಾಡಲು ಸಾಧ್ಯವಿಲ್ಲ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದರು. ಹೊರಗಿನ ಸ್ವಚ್ಛತೆ ಮಾತ್ರ ಸಾಲದು ಮನಸ್ಸಿನಸ್ವಚ್ಛತೆಯು ಅತ್ಯವಶ್ಯಕ  ನಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಲು ಇಂತಹ ಸತ್ಸಂಗದಲ್ಲಿ ಭಾಗವಹಿಸಿ ಸದ್ ವಿಚಾರಗಳನ್ನ ಜ್ಞಾನಯುಕ್ತ ಮಾತುಗಳನ್ನು ಕೇಳಿದಾಗ ಮಾತ್ರ ಸಾಧ್ಯ ಎಂದರು. ಸಾನಿಧ್ಯ ವಹಿಸಿ ಮಾತನಾಡಿದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ನಗರಸಭೆಯ ಪೌರಕಾರ್ಮಿಕರು ಬಾಹ್ಯ ಸ್ವಚ್ಛತೆಯ ಕೆಲಸವನ್ನ ಮಾಡುತ್ತಾರೆ ನಾವು ಈಶ್ವರಿಯ ವಿಶ್ವವಿದ್ಯಾಲಯದವರೂ ಸಹ ಕಾರ್ಮಿಕರಾಗಿ ಜನರ ಆಂತರಿಕ ಮನಸ್ಸಿನ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದೇವೆ. ನಗರ ಸಭೆ ಬೀದಿ ದೀಪದ ವ್ಯವಸ್ಥೆ ಮಾಡಿದರೆ ಈಶ್ವರಿಯ ವಿಶ್ವವಿದ್ಯಾಲಯ ಜನರ ಅಂತರಂಗಕ್ಕೆ ಜ್ಞಾನದ ಬೆಳಕು ನೀಡುವ ಕಾರ್ಯ ಮಾಡುತ್ತಿದೆ ಬಾ ಯಾರಿರುವ ಮನುಷ್ಯರಿಗೆ ಸುಖ ಶಾಂತಿಯ ಅಮೃತವನ್ನು ನೀಡುತ್ತಿದೆ ಎಂದರು. ಸ್ವಚ್ಛತೆಯೇ ದೇವರು ಎಂಬ ಗಾಯನವಿದೆ ಪೌರಕಾರ್ಮಿಕರು ಮಳೆ ಚಳಿ ಬಿಸಿಲು ಎನ್ನದೆ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ಆರೋಗ್ಯವಾಗಿರಲಿ ದುರ್ಗುಣ ದುಶ್ಚಟ ದುಸಂಗ ದುರ್ ವ್ಯಸನಗಳಿಂದ  ಮುಕ್ತರಾಗಿ ಸದ್ಗುಣ  ಸದ್ವಿಚಾರವನ್ನು ಕೇಳುತ್ತಾ ಸತ್ಸಂಗದಲ್ಲಿ ಪರಮಾತ್ಮನ ಆಶೀರ್ವಾದದಿಂದ ಆರೋಗ್ಯವಂತ ಜೀವನ ಸುಖ ಶಾಂತಿ ನೆಮ್ಮದಿಯ ಜೀವನ ನಡೆಸಲಿ ಎಂದು ಶುಭ ಹಾರೈಸಿದರು. ಮುಖಂಡರಾದ ಸಿವಿ ಚಂದ್ರಶೇಖರ್ ಮಾತನಾಡಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುತ್ತಿರುವುದು ಅದ್ಭುತ ಕಾರ್ಯ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎನ್ನುವಂತೆ ಯಾವುದೇ ಕೆಲಸವಿರಲಿ ಶುದ್ಧ ಮನಸ್ಸಿನಿಂದ ಪ್ರೀತಿಯಿಂದ ಕೆಲಸ ಮಾಡಿದರೆ ಆ ಕೆಲಸದಲ್ಲಿ ನಮಗೆ ಖುಷಿ ತೃಪ್ತಿ ಸಿಗುತ್ತದೆ ಪೌರಕಾರ್ಮಿಕರು ಯಾವುದೇ ಕೀಳರಿಮೆ ಇಟ್ಟುಕೊಳ್ಳಬಾರದು. ಕೇವಲ ಹಣ ಆಸ್ತಿ ಐಶ್ವರ್ಯದಿಂದ ನಾವು ಶಾಂತಿ ನೆಮ್ಮದಿ ಕಾಣಲು ಸಾಧ್ಯವಿಲ್ಲ ಜೀವನದಲ್ಲಿ ಆರೋಗ್ಯ ಸಂತೋಷ ತಾಳ್ಮೆ ನೆಮ್ಮದಿ ಇವೆಲ್ಲವೂ ಸಹ ಆಧ್ಯಾತ್ಮದಿಂದ ಮಾತ್ರ ಪಡೆಯಲು ಸಾಧ್ಯ ಎಂದರು. ನಗರ ಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದಗಿನ ಮಠ ಮಾತನಾಡಿ ನಗರದ ಸ್ವಚ್ಛತೆ ಕೇವಲ ನಗರಸಭೆ ಪೌರಕಾರ್ಮಿಕರ ಕೆಲಸ ಮಾತ್ರವಲ್ಲ ಪ್ರತಿಯೊಬ್ಬ ವ್ಯಕ್ತಿಯ ಕೆಲಸ ಪೌರಕಾರ್ಮಿಕರನ್ನು ಸನ್ಮಾನ ಸುತ್ತಿರುವ ಕಾರ್ಯ ಶ್ಲಾಘನೀಯ  ಎಂದು ಹರ್ಷ ವ್ಯಕ್ತಪಡಿಸಿದರು  ವೇದಿಕೆಯಲ್ಲಿ ಡಿಪೋ ಮ್ಯಾನೇಜರ್ ಆದ ರಮೇಶ್ ಸಿ,ನಗರಸಭೆ ವ್ಯವಸ್ಥಾಪಕರಾದ ಮುನಿಸ್ವಾಮಿ, ನಿವೃತ್ತ ತಹಶೀಲ್ದಾರರಾದ ಛತ್ರಪ್ಪ ಎಂ ಉಪಸ್ಥಿತರಿದ್ದರು ಬ್ರಹ್ಮಕುಮಾರಿ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು ಪೌರಕಾರ್ಮಿಕರಿಗೆ ಈಶ್ವರಿಯ ಸನ್ಮಾನ ಕಾರ್ಯಕ್ರಮ ನೆರವೇರಿತು. ಸನ್ಮಾನ ಸ್ವೀಕರಿಸಿದ ಪೌರಕಾರ್ಮಿಕರು ಅತ್ಯಂತ ಹರ್ಷಿತರಾದರು.

About Mallikarjun

Check Also

ಗ್ರಾಮಗಳಲ್ಲಿ ಪ್ರತ್ಯಕ್ಷವಾದ ಚಿರತೆಗಳು ಪ್ರಾಣ ಭಯದಲ್ಲಿರುವ ಜನರು

People are in fear of their lives when leopards are seen in villages. ವರದಿ:ಬಂಗಾರಪ್ಪ ಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.