Breaking News

ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಲು ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸಬೇಕು ; ಜಸ್ಟಿಸ್ ಸಂತೋಷ್ ಹೆಗ್ಡೆ

Teachers should play an important role to build a corruption free society; Justice Santosh Hegde

ಜಾಹೀರಾತು

ಬೆಂಗಳೂರು, ಜ 26: ಬಸವೇಶ್ವರ ಶಿಕ್ಷಣ ಸಂಸ್ಥೆಯ 24ನೇ ವರ್ಷದ ಶಾಲಾ ವಾರ್ಷಿಕೋತ್ಸವಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಚಾಲನೆ ನೀಡಿದರು. ಮೇಡ ಪ್ರತಿಷ್ಠಾನದ ಟ್ರಸ್ಟಿ ರಮೇಶ್ ಕೆ ಮೇಡ, ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟರಾಮೇಗೌಡ, ಕಾಪ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ – ಉದ್ಯಮಿ ಆರ್. ಗಂಗಾಧರ, ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ.ಶ್ರೀನಿವಾಸ, ಪ್ರಾಂಶುಪಾಲೆ ರಂಗಲಕ್ಷ್ಮೀ ಶ್ರೀನಿವಾಸ ಮತ್ತಿರರು ಉಪಸ್ಥಿತರಿದ್ದರು.

ಬಳಿಕ ಸಂತೋಷ್ ಹೆಗಡೆ ಅವರು ಮಾತನಾಡಿ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಸುಂದರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಪಠ್ಯದ ಕಲಿಕೆಯ ಜೊತೆಜೊತೆಗೆ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ಅತ್ಯಗತ್ಯ ಎಂದು ಹೇಳಿದರು.

ನಂತರ ಮಾತನಾಡಿದ ವೆಂಕಟರಾಮೇಗೌಡರು, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಕರ ಜೊತೆಗೆ ಪೋಷಕರ ಸಹಕಾರ ಅಗತ್ಯ ಎಂದು ವಿವರಿಸಿದರು.

ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ಇದೇ ವೇಳೆ ಉದ್ಯಮಿ ಗಂಗಾಧರ ಪ್ರಕಟಿಸಿದರು.
“ಭಾರತ ಉತ್ಸವ” ಶೀರ್ಷಿಕೆಯಡಿ ವಿದ್ಯಾರ್ಥಿಗಳು ನೀಡಿದ ವಿವಿಧ ರಾಜ್ಯಗಳ ನೃತ್ಯ ಪ್ರದರ್ಶನ ಮನಮೋಹಕವಾಗಿತ್ತು. ನಾಡು ನುಡಿಯ ಮಹತ್ವ ತಿಳಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಹಾಸ್ಯ ನಾಟಕ, ಪೌರಾಣಿಕ ನಾಟಕ, ದೇಶಭಕ್ತಿ ಗೀತೆಗಳು ಮಾತ್ರವಲ್ಲದೇ ಕೀಬೋರ್ಡ್ ವಾದನ, ಯೋಗ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.

About Mallikarjun

Check Also

ರಾಯಚೂರ ಜಿಲ್ಲಾಧಿಕಾರಿ ನಿತೀಶ್ ಕೆ ಅವರ ಉತ್ಸಾಹ, ಕಠಿಣ ಪರಿಶ್ರಮಕ್ಕಾಗಿ ರಾಜ್ಯ ಸರ್ಕಾರದಿಂದ ಪ್ರಶಂಸನಾ ಪತ್ರ

Raichur District Magistrate Nitish K receives a letter of appreciation from the state government for …

Leave a Reply

Your email address will not be published. Required fields are marked *