Advice to adopt Mahayogi Vemana’s thoughts and ideas in life
ರಾಯಚೂರು ಜ.19, (ಕರ್ನಾಟಕ ವಾರ್ತೆ): ಮಾನವನ ಏಳ್ಗೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು, ಅಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹನಿಯರಲ್ಲಿ ಶ್ರೀ ಮಹಾಯೋಗಿ ವೇಮನರು ಸಹ ಪ್ರಮುಖರಾಗಿದ್ದಾರೆ ಎಂದು
ರಾಯಚೂರು ತಹಸೀಲ್ದಾರ್ ಸುರೇಶ ವರ್ಮಾ ಅವರು ಹೇಳಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜನವರಿ 19ರಂದು ನಡೆದ ಮಹಾಯೋಗಿ ವೇಮನ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೇಷ್ಠ ಅಧ್ಯಾತ್ಮಿಕ ಚಿಂತಕ, ಮಹಾನ್ ಯೋಗಿ ವೇಮನ ಅವರ ಜನ್ಮದಿನವು
ಭಾರತ ಇತಿಹಾಸದಲ್ಲಿ ಪುಣ್ಯದಿನವಾಗಿದೆ. ಮಾನವ ಜೀವನದ ಸುಧಾರಣೆಗಾಗಿ ತಮ್ಮ ವಚನಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬರು ಸಮಯವಿಲ್ಲದೆ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಇಂದು ಆರೋಗ್ಯ ಮತ್ತು ಒತ್ತಡದ ನಿವಾರಣೆಗಾಗಿ, ಮಾನಸಿಕ ನೆಮ್ಮದಿಗಾಗಿ ಸಂಗೀತ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳುವುದು ಅತೀ ಅವಶ್ಯವಾಗಿದೆ.
ಮಾನವನು ನೆಮ್ಮದಿಯ ಬಾಳ್ವೆಯನು ನಡೆಸುವುದು
ಮೇಮನ ಅವರ ವಚನಗಳಲ್ಲಿ, ಚಿಂತನೆಗಳಲ್ಲಿ ಅಡಗಿದೆ. ಅವರ ಸಾಹಿತ್ಯ, ಚಿಂತನೆ, ಬರಹಗಳ ಸಂದೇಶವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ವೇಮನ ಅವರು ನೀಡಿದ ಬೋಧನೆಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಜ್ಞಾವಂತರಾಗಿ ನಡೆಯಬೇಕು. ವೇಮನ ಅವರು ವಿಶ್ವಮಟ್ಟದಲ್ಲಿ ಬೆಳೆದಿದ್ದಾರೆ. ವೇಮನರ ವಿಚಾರ, ಸಿದ್ದಾಂತಗಳನ್ನು ಈ ಜಗತ್ತು ಒಪ್ಪಿಕೊಳ್ಳುತ್ತಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ದಂಡಪ್ಪ ಬೀರಾದಾರ್ ಅವರು ಮಾತನಾಡಿ, ಮೇಮನ ಅವರು ಕ್ರಿ.ಶ. 1421ರಲ್ಲಿ ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲ ಮಾಂಬೆ ಎಂಬ ದಂಪತಿಯ ಮಗನಾಗಿ ಜನಿಸಿದರು. 15ನೇ ಶತಮಾನದಲ್ಲಿ ವೇಮನರು ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರಾಗಿ ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ಅವರು ಶ್ರೇಷ್ಟ ವಚನಕಾರರು, ಮಹಾಕವಿ, ಮಹಾ ಯೋಗಿಯಾಗಿದ್ದಾರೆ ಎಂದರು.
ವೇಮನರ ಕೃತಿಗಳು ಇತಿಹಾಸದಲ್ಲಿ ವೇಮನ ಶತಕಲು ಎಂದು ಕರೆಯಲ್ಪಡುತ್ತದೆ ಎಂದರು.
ವೇಮನ ಅವರು ತಮ್ಮ ವಚನಗಳ ಮೂಲಕ ಮಾನವ ಕುಲದ ಒಳತಿಗಾಗಿ ಕೊಡುಗೆ ನೀಡಿದ್ದಾರೆ. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಮಾಜಿಕ ಜೀವನ ಸುಧಾರಣೆ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕಾಧ್ಯಕ್ಷರಾದ ರಾಮಚಂದ್ರ ರೆಡ್ಡಿ, ಡಾ.ಶ್ರೀಧರ ರೆಡ್ಡಿ, ಕೇಶವ ರೆಡ್ಡಿ, ಗೋಪಾಲ ರೆಡ್ಡಿ, ಶಿವನಗೌಡ ಪಾಟೀಲ್ ಮಟಮಾರಿ, ವೀರಶೈವ ಸಮಾಜದ ಅಧ್ಯಕ್ಷರಾದ ಶರಣ ಬೂಪಾಲ ನಾಡಗೌಡ, ಅಚ್ಯುತ ರೆಡ್ಡಿ, ರಾಮನಗೌಡ ಏಗನೂರು, ಇಸ್ಮಾಯಿಲ್ ಸೇರಿದಂತೆ ಸಮಾಜದ ಮುಖಂಡರು ಮಹಿಳೆಯರು, ಯುವಕರು ಭಾಗವಹಿಸಿದ್ದರು.