Breaking News

ರೈತಪರಕಾಳಜಿಯುಳ್ಳವರಿಗೆ ಮತ ನೀಡಿ : ಸಿದ್ದಯ್ಯ ಕಳ್ಳಿಮಠ,,

Vote for those who care about farmers: Siddaiah Kakhimath

ಜಾಹೀರಾತು

ಪ್ರಾಥಮಿಕ ಕೃಷಿ ಪತ್ತಿನ 2025- 30 ರ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಪ್ರಚಾರ,,,

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ಕೃಷಿ ಪತ್ತಿನ ಸಹಕಾರಿ ಸಂಘಗಗಳು ಇರುವುದು ರೈತರ ಉನ್ನತಿಗಾಗಿಯೇ ವಿನಃ ಉಳ್ಳವರ ಉನ್ನತಿಗಾಗಿ ಅಲ್ಲಾ ಎಂದು ಸಿದ್ದಯ್ಯ ಕಳ್ಳಿಮಠ ಹೇಳಿದರು.

ಇದೇ ಡಿ.29ರಂದು 2025 ರಿಂದ 2030ರ ಅವಧಿಗೆ ನಡೆಯುವ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಾಲಗಾರರ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಆಡಳಿತ ಮಂಡಳಿಯ ಚುನಾವಣೆಯ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸ್ಥಳೀಯ ಮಹಾಮಾಯ ದೇವಸ್ಥಾನದಲ್ಲಿ ಮಹಾಮಾಯ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಹೋಗುವ ಮುನ್ನ ಮಾತನಾಡಿದರು.

ಇಂದು ಸಹಕಾರಿ ಸಂಘಗಳು ರೈತ ಪರ ಕಾಳಜಿಯನ್ನು ಹೊಂದದೇ ವ್ಯಾಪಾರಿಕರಣವಾಗುತ್ತಿವೆ. ಕೃಷಿ ಪತ್ತಿನ ಸಂಘಗಳು ಇರುವುದು ರೈತರಿಗೆ ಎನ್ನುವುದನ್ನು ಮರೆತು ನಡೆದಂತಿದೆ. ಯಾವಾಗಲೂ ಸಹಕಾರಿ ಸಂಘಗಳು ರೈತರ ನೆರವಿಗೆ ನಿಲ್ಲಬೇಕು ಹಾಗೂ ಅವರಿಗೆ ಇರುವ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಅಂದಾಗ ಮಾತ್ರ ಸಂಘಗಳು ಪರಿಪೂರ್ಣವಾಗುತ್ತವೆ ಎಂದರು.

ನಾವು ಶಾಸಕರ ಅಣತಿಯಂತೆ
ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿವುದರ ಜೊತೆಗೆ ಅವರ ಕಷ್ಟ ನಷ್ಟಗಳಿಗೆ ಆರ್ಥಿಕ ನೆರವು ನೀಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇವೆ ಎಂದರು.

ಈ ಮೊದಲು ಆಡಳಿತ ನಡೆಸಿದವರು 1700 ಮತಗಳಲ್ಲಿ ಕಾರಣಾಂತರದ ನೆಪ ಒಡ್ಡಿ ಪ್ರಸ್ತುತ ತಮಗೆ ಬೇಕಾದ 300 ಮತಗಳನ್ನು ಮಾತ್ರ ಉಳಿಸಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಇರವ ಕೈಗೆ ಅಧಿಕಾರ ನೀಡಿದಲ್ಲಿ 30ಕ್ಕೆ ತಂದು ನಿಲ್ಲಿಸುವದರಲ್ಲಿ ಯಾವುದೇ ಸಂದೇಹವೀಲ್ಲಾ, ಆದ್ದರಿಂದ 1700 ಷೇರುದಾರರನ್ನು ಮತ್ತೆ ನಾವು ವಿಶ್ವಾಸಕ್ಕೆ ಪಡೆದು ರೈತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಂತರದಲ್ಲಿ ಮುಖಂಡ ಗಗನ ನೋಟಗಾರ ಮಾತನಾಡಿ, ಕಾಂಗ್ರೆಸ್ ಬೆಂಬಲಿತ 12 ಜನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿದ್ದು ನಮ್ಮ ಅಭ್ಯರ್ಥಿಗಳಿಗೆ ರೈತರು ಮತ ನೀಡಿ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಆರ್ಥಿಕ ಸಹಾಯ ಪಡೆಯಲು ತುಂಬಾ ಪ್ರಯಾಸ ಪಡಬೇಕಾಗಿದ್ದು, ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಗಳು ಯಾವಾಗಲೂ ರೈತರ ಸಂಕಷ್ಟಗಳಿಗೆ ಇದ್ದು, ಅವುಗಳಲ್ಲಿನ ವಿವಿಧ ಯೋಜನೆಗಳಿದ್ದು ಅವುಗಳನ್ನು ನಮ್ಮ ಅಭ್ಯರ್ಥಿಗಳು ರೈತರಿಗೆ ಒದಗಿಸಲು ಹಗಲಿರುಳು ಶ್ರಮವಹಿಸುತ್ತಾರೆ. ರೈತರ ಮನೆ ಬಾಗಿಲಿಗೆ ಯೋಜನೆಗಳನ್ನು ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿ ಮಾತನಾಡಿದರು.

ದುರಂತವೆಂದರೇ ಇಲ್ಲಿಯ ವರೆಗೆ ಕೇವಲ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಲ್ಲಿ ಅಧಿಕಾರವಿದ್ದು, ಈಗ ನಡೆಯುವ ಚುನಾವಣೆಯಲ್ಲಿ ರೈತಪರ ಕಾಳಜಿಯುಳ್ಳ ನಮ್ಮ ಅಭ್ಯರ್ಥಿಗಳಿಗೆ ಬಹುಮತ ನೀಡಿ ಚುನಾಯಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಅಭಿವೃದ್ದಿ ಪಡಿಸಲು ತಾವೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಮಣ್ಣ ಬಜೇಂತ್ರಿ, ದೇವಪ್ಪ ಸೋಬಾನದ, ಬಸವರಾಜ ಬೆದವಟ್ಟಿ, ಕಳಕಪ್ಪ, ಸಿದ್ದು ದೊಡ್ಮನಿ, ಮಹಾಂತೇಶ ಮುಧೋಳ, ಬಸವರಾಜ ನೋಟಗಾರ, ದಸ್ತಗಿರ ರಾಜೂರ, ಮಲ್ಲು ಹಾದಿ, ಶ್ರೀಕಾಂತ ಬಿಳಗಿ, ಗುದ್ನೇಪ್ಪ ಚಲವಾದಿ, ಗವಿಸಿದ್ದಪ್ಪ ಹೂಗಾರ, ಮಲ್ಲಪ್ಪ ಹೂಗಾರ ಸೇರಿದಂತೆ ಇನ್ನಿತರರು ಪ್ರಚಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.