Breaking News

ಧಾರವಾಡ: ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ

Dharwad: Nakkitu Bhoomi poetry collection release program again

ಜಾಹೀರಾತು

ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ದಿನಾಂಕ 14.12.24 ರಂದು ದತ್ತಿ ಉಪನ್ಯಾಸ ಹಾಗೂ ಡಾ. ಶರಣಮ್ಮ ಗೊರೆಬಾಳ ಅವರ ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ನಡೆಯಿತು. ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್ ಧಾರವಾಡ ಇದರ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ದತ್ತಿ ಉಪನ್ಯಾಸ ಉದ್ಘಾಟನೆ ಮಾಡಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಕಾವ್ಯ ಜೀವನಾನುಭವಗಳ ಸುಂದರ ಅಭಿವ್ಯಕ್ತಿ, ಲೇಖಕಿ ತಮ್ಮ ಜೀವನದ ನೋವು ನಲಿವು, ಪ್ರೀತಿ, ಪ್ರೇಮಗಳನ್ನು ಕವನದಲ್ಲಿ ಹಿಡಿದಿಟ್ಟಿದ್ದಾರೆ. ಮುಖ್ಯವಾಗಿ ರೈತ ಕುಟುಂಬದಲ್ಲಿ ಜನಿಸಿದ ಶರಣಮ್ಮ ರೈತರ ಕಷ್ಟ ಸುಖ, ಆತಂಕಗಳನ್ನು ಕಣ್ಣಾರೆ ಕಂಡವರು, ರೈತನ ಮುಖದಲ್ಲಿ ನಗು ಬರಲು ಮಳೆ ಬೇಕು, ಬೆಳೆ ಬರಬೇಕು, ಅಂದಾಗ ಪ್ರತಿಯೊಬ್ಬನ ಮುಖದಲ್ಲಿ ಮಂದಹಾಸ ಕಾಣುತ್ತದೆ ಎಂಬ ಆಶಾ ಭಾವವನ್ನು ತಮ್ಮ ಕವನದಲ್ಲಿ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರಕಾರಕ್ಕೆ ಕಟ್ಟು ಬೀಳದೆ ಸರಳವಾ ಗಿ ಕವನ ಕಟ್ಟಿದ್ದಾರೆ ಎಂದು ತಿಳಿಸಿದರು. ಶಿಷ್ಯಳ ಪ್ರತಿಭೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಬಸವ ಅಂತರಾಷ್ಟ್ರೀಯ ತಿಳುವಳಿಕೆ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಕೃತಿ ಪರಿಚಯ ಮಾಡಿದರು. ತಮಗೆ ಇಷ್ಟವಾದ ಕವನಗಳನ್ನು ವಿಶ್ಲೇಷಿಸಿದರು. ಮಹಿಳೆಯ ಬದುಕೇ ಒಂದು ಕಾವ್ಯ, ಶರಣಮ್ಮ ಅವರು ತಮ್ಮೊಳಗಿರುವ ಆಂತರಿಕ ತಲ್ಲಣಗಳಿಗೆ , ನೋವು ನಲಿವುಗಳಿಗೆ, ಕವನದ ರೂಪ ಕೊಟ್ಟಿದ್ದಾರೆ. ಮಗಳ ಕುರಿತು, ತಂದೆಯ ಕುರಿತು ಬರೆದ ಕವನಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದರು. ಮಾತು ಮುಂದುವರಿಸಿ ಕನ್ನಡ ನಾಡು ನುಡಿ, ಹಬ್ಬ ಜಾತ್ರೆಗಳ ಕುರಿತಾಗಿಯೂ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಡಾ.ಶ್ರೀಧರ್ ಹೆಗಡೆ ಬದ್ರನ್ನ ಅವರು ದತ್ತಿ ಉಪನ್ಯಾಸ, ಅನ್ಯ ನಿರೂಪಣಾ ಆತ್ಮಕಥನಗಳು ತಾತ್ವಿಕ ಚಿಂತನೆ ಎಂಬ ವಿಷಯದ ಕುರಿತು ಮಾತನಾಡಿದರು. ಜೀವನದಲ್ಲಿ ಸಾಧನೆ ಮಾಡಿದ ಎಷ್ಟೋ ಮಹಾನ್ ವ್ಯಕ್ತಿಗಳು ಅನಕ್ಷರಸ್ಥರಾಗಿದ್ದು ಆತ್ಮಕಥೆಗಳನ್ನು ಬೇರೆಯವರ ಕಡೆ ಬರೆಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಆತ್ಮಕಥೆಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಅದರ ಹಕ್ಕು ಆತ್ಮಕಥೆಗಾರನದು ಅಥವಾ ನಿರೂಪಣ ಮಾಡಿದ ಲೇಖಕರದು ಎಂಬ ಗೊಂದಲ ಉಂಟಾಗುತ್ತದೆ ಅಂತಹ ಸಾಕಷ್ಟು ಆತ್ಮ ಕತೆಗಳು ಕನ್ನಡ ಸಾಹಿತ್ಯದಲ್ಲಿ ಸಿಗುತ್ತವೆ ಎಂದು ಅನ್ಯ ನಿರೂಪಣಾ ಆತ್ಮಕಥೆಗಳ ಹಲವಾರು ವಿಚಾರಗಳನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಡಾ. ಲಿಂಗರಾಜ್ ಅಂಗಡಿಯವರು ಲೇಖಕಿಯ ಕುರಿತು ಮಹಿಳೆಯರ ಜೀವನದ ಹೋರಾಟದ ಕುರಿತು ಅತ್ಯಂತ ಆತ್ಮೀಯವಾದ ನುಡಿಗಳನ್ನಾ ಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಶರಣಮ್ಮ ಗೊರೆಬಾಳ ಅವರ ಕವನ ಸಂಕಲನದ ಕೆಲವು ಕವನಗಳನ್ನು ಡಾ. ಜ್ಯೋತಿ ಲಕ್ಷ್ಮಿ ಡಿಪಿ ಅವರು ರಾಗ ಸಂಯೋಜನೆ ಮಾಡಿ ಹಾಡಿದರು. ಕುಮಾರಿ ಲಕ್ಷ್ಮಿ ಹಳ್ಳೂರ ಪ್ರಾರ್ಥಿಸಿದಳು. ಡಾ. ಜನದತ್ತ ಹಡಗಲಿ ಅವರು ಸ್ವಾಗತಿಸಿದರು. ಡಾ.ಶರಣಮ್ಮ ಗೋರೆಬಾಳ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಂತೇಶ್ ನರೇಗಲ್ ವಂದಿಸಿದರು. ಶ್ರೀಮತಿ ಮೇಘ ಹುಕ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಮಹದೇವ್ ಹೊರಟ್ಟಿ ಅವರು, ವೆಂಕಟೇಶ್ ಮಾಚಕನೂರ, ಮೃತ್ಯುಂಜಯ ಶೆಟ್ಟರ್, ಡಾಕ್ಟರ್ ಶಿವಾನಂದ ಶೆಟ್ಟರ್, ಎ ಎಲ್ ಗೊರೆಬಾಳ, ಸೋಮಶೇಖರ ದೇವಲಾಪುರ, ಮತ್ತಿತರರು ಉಪಸ್ಥಿತರಿದ್ದರು

About Mallikarjun

Check Also

ಪತ್ರಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ಧ ಪತ್ರಕರ್ತರ ಪ್ರತಿಭಟನೆ

Journalists protest against Nelamangala BJP President Jagdish Chaudhary who insulted and threatened journalists. ನೆಲಮಂಗಲ: ಬೆಂಗಳೂರು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.