Breaking News

ಮಕ್ಕಳ ಮನಗೆದ್ದ ಸ್ವರ ಸಿಂಚನ ಸಂಗೀತ ಕಾರ್ಯಕ್ರಮ:ನಿಜಲಿಂಗಪ್ಪ ಮೆಣಸಗಿ

Children’s Managedda Swara Sinchan Music Program: Nijalingappa Menasagi

ಜಾಹೀರಾತು

ಗಂಗಾವತಿ: ಈ ದಿನಮಾನಗಳಲ್ಲಿ ಮಾನವರಲ್ಲಿ ತಾಳ್ಮೆ, ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಸಂಗೀತವು ಎಲ್ಲ ಬಗೆಯ ಮನಸ್ಸುಗಳಿಗೆ ನೆಮ್ಮದಿ ನೀಡುತ್ತದೆ. ಸಂಗೀತಾಭ್ಯಾಸಕ್ಕೆ ಮಕ್ಕಳು ಹೆಚ್ಚು ಮಹತ್ವ ಕೊಡಬೇಕಿದೆ. ಸಂಗೀತವು ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿ, ಮನಸ್ಸನ್ನು ನಿರ್ಮಲಗೊಳಿಸುವುದಲ್ಲದೇ ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಅದಕ್ಕೆ ಉದಾಹರಣೆಯೆಂಬAತೆ ಈ ಸ್ವರ ಸಿಂಚನ ಸಂಗೀತ ಕಾರ್ಯಕ್ರಮ ಮಕ್ಕಳ ಮನಸ್ಸನ್ನು ಗೆದ್ದಿದೆ. ಶಾಲೆಯಲ್ಲಿ ಈ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಂತೋಷದ ಸಂಗತಿ, ಹಲವಾರು ವರ್ಷಗಳಿಂದ ಈ ಸಂಸ್ಥೆಯು ಒಳ್ಳೆಯ ಕಾರ್ಯಕ್ರಮಗಳನ್ನು ಸಮಾಜದಲ್ಲಿ ನೀಡುತ್ತಾ, ಹಲವಾರು ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಿಜಲಿಂಗಪ್ಪ ಮೆಣಸಗಿ ಅಭಿಪ್ರಾಯಪಟ್ಟರು.
ಅವರು ಡಿಸೆಂಬರ್-೦೭ ಶನಿವಾರ ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಶ್ರೀಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆ (ರಿ) ಗಂಗಾವತಿ ಸಂಸ್ಥೆ ಏರ್ಪಡಿಸಿದ್ದ ಸ್ವರ ಸಿಂಚನ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಿಗ್ಗೆ ೧೦:೩೦ ಕ್ಕೆ ಪ್ರಾರಂಭಗೊAಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ ನರಗುಂದ, ಶಿಕ್ಷಕರಾದ ಬಿ.ಆರ್. ಜೋಷಿ, ಶ್ರೀನಿವಾಸ, ಶ್ರೀಮತಿ ರಜನಿ, ದೈಹಿಕ ಶಿಕ್ಷಕಿ ಗೀತಾಂಜಲಿ, ಹಿರಿಯ ಕಲಾವಿದರಾದ ರಾಜಾಸಾಬ್ ಮುದ್ದಾಬಳ್ಳಿ, ರಾಮಾಂಜನೇಯಲು ಇವರುಗಳು ಉಪಸ್ಥಿತರಿದ್ದರು.
ಈ ಸಂಗೀತ ಕಾರ್ಯಕ್ರಮದಲ್ಲಿ ಕ್ಲಾರಿಯೋನೆಟ್ ವಾದನವನ್ನು ರಾಮಾಂಜನೇಯಲು, ತಬಲಾ ಸೊಲೋ ರಾಜಾಸಾಬ್ ಮುದ್ದಾಬಳ್ಳಿ, ಹಾರ್ಮೋನಿಯಂ ಸೊಲೋ ರಾಮಚಂದ್ರಪ್ಪ ಉಪ್ಪಾರ ನುಡಿಸಿದರೆ, ವಚನ ಗಾಯನವನ್ನು ಪಂಚಾಕ್ಷರಕುಮಾರ, ಭಕ್ತಿ ಸಂಗೀತ ಶಿವಪ್ಪ ಹುಳ್ಳಿ, ದಾಸವಾಣಿಯನ್ನು ರವಿಕಾಶೆಟ್ಟಿ, ವಚನಸಂಗೀತವನ್ನು ದೊಡ್ಡಬಸವ ನಾಗಲೀಕರ ಹಾಗೂ ಸಮೂಹ ಗಾಯನವನ್ನು ಕುಮಾರಿ ಶಿವರಂಜನಿ ಪಟ್ಟಣಶೆಟ್ಟರು, ಕುಮಾರಿ ಸುಮೇಧಾ ಕುಲಕರ್ಣಿ, ಕುಮಾರಿ ಕಾವ್ಯ ಬಣಜಿಗ ನಡೆಸಿಕೊಟ್ಟರು.
ಸಹವಾದ್ಯದಲ್ಲಿ ತಬಲಾ ಸಾಥಿಯಾಗಿ ಮಹಮ್ಮದ್ ರಿಜ್ವಾನ್ ಮುದ್ದಾಬಳ್ಳಿ, ಹಾರ್ಮೋನಿಯಂ ಸಾಥಿಯಾಗಿ ಯುವರಾಜ ಕುರುಗೋಡು, ತಾಳ ಸಾಥಿಯಾಗಿ ಶಿವಕುಮಾರ ಗೆಜ್ಜಿ, ರಿಧಂ ಪ್ಯಾಡ್ ಕುಮಾರ್ ಸಂಜನ್ ಬೆಲ್ಲದ್ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವೃಂದ ಹಾಗೂ ಪೋಷಕರು ಭಾಗವಹಿಸಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.