Breaking News

ಪ್ರಾಧ್ಯಾಪಕಪಾಂಡುರಂಗಅಗ್ನಿಹೋತ್ರಿವಿದ್ಯಾರ್ಥಿಗಳಪ್ರೇಮವೃಕ್ಷ*ಪ್ರಾಧ್ಯಾಪಕ ಪಾಂಡುರಂಗ ಅಗ್ನಿಹೋತ್ರಿಗೆ ನುಡಿ ಶ್ರದ್ಧಾಂಜಲಿ

Professor Pandura is the love-tree of Agnihotri students * Tribute to Professor Pandurang Agnihotri

ಜಾಹೀರಾತು



ಗಂಗಾವತಿ: ಪಾಂಡುರಂಗ ಅಗ್ನಿಹೋತ್ರಿ ವಿದ್ಯಾರ್ಥಿಗಳಪಾಲಿಗೆಅಚ್ಚುಮೆಚ್ಚಿನವರಾಗಿದ್ದರು.ವಿದ್ಯಾರ್ಥಿಗಳ ಪಾಲಿಗೆ ಪ್ರೇಮವೃಕ್ಷವಾಗಿದ್ದರು.ಪ್ರೀತಿಯನ್ನೇ ಉಂಡುಟ್ಟು ಬೆಳೆದವರು.ತಾಯಿಯ ಅಗಲಿಕೆಯ ನೋವು ಬಾಧಿಸುತ್ತಿತ್ತು.ಇತಿಹಾಸದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುವುದರಲ್ಲಿ ಸದಾ ಮುಂದು.ಪಾAಡು ಇದ್ದಲ್ಲಿ ಉತ್ಸಾಹ,ಲವಲವಿಕೆ ವಾತಾವರಣವಿರುತ್ತಿತ್ತು. ಅವರಿಲ್ಲದ ಕಾಲೇಜನ್ನು ಊಹಿಸಿಕೊಳ್ಳುವುದು ಅಸಾಧ್ಯ.”ಎಂದು ಹಿರಿಯ ಪ್ರಾಧ್ಯಾಪಕ ಪ್ರೊ.ಕರಿಗೂಳಿ ಸುಂಕೇಶ್ವರ ಹೇಳಿದರು.
ಅವರು ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಪಾಂಡುರAಗ ಅಗ್ನಿಹೋತ್ರಿ ಅವರ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ನಿಸ್ವಾರ್ಥ, ಮುಗ್ಧ, ಪ್ರಾಮಾಣಿಕ ಹೃದಯವಂತ ಉಪನ್ಯಾಸಕ ಪಾಂಡುರAಗ ಅಗ್ನಿಹೋತ್ರಿ. ಎಲ್ಲರನ್ನು ಪ್ರೀತಿಸಿ ಮನಗೆದ್ದ ವಿದ್ಯಾರ್ಥಿಗಳ ಪಾಲಿಗೆ ತಂದೆತಾಯಿಯAತಿದ್ದವರು.ತಮ್ಮೊಳಗೆ ನೋವನ್ನು ತುಂಬಿಕೊAಡು ಅದನ್ನು ತೋರಗೊಡದೇ ನಗುನಗುತ್ತಾ ಎಲ್ಲರನ್ನೂ ಗೌರವಿಸುತ್ತಿದ್ದರು.ಅವರೊಬ್ಬ ಅಜಾತಶತ್ರು .ಅವರ ಅಗಲಿಕೆ ನಮ್ಮ ಕಾಲೇಜಿಗೆ ತುಂಬಲಾರದ ನಷ್ಟ. ವಿದ್ಯಾರ್ಥಿಗಳು ಒಬ್ಬ ಉತ್ತಮ ಮಾನವೀಯ ಕಳಕಳಿಯ ಉಪನ್ಯಾಸಕ ನನ್ನು ಕಳೆದುಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಮುಮ್ತಾಜ್ ಬೇಗಂ, ಹಿರಿಯ ಪ್ರಾಧ್ಯಾಪಕರಾದ ಡಾ.ಎಸ್.ಜಿ.ಗುರಿಕಾರ, ಮಹೇಶ್ ಕುಮಾರ್, ರಾಘವೇಂದ್ರ ಚೌಡಕಿ, ಪಂಚಾಕ್ಷರಯ್ಯ ಹಿರೇಮಠ, ಗುಂಡೂರು ಪವನ್ ಕುಮಾರ್, ಪ್ರಾಧ್ಯಾಪಕರಾದ ಅಣ್ಣೋಜಿರೆಡ್ಡಿ, ಅನಿತಾ, ಅನಿಲ್ ಎಡ್ವರ್ಡ್, ಖಾಜಾಸಾಬ ಗಡಾದ, ನಟರಾಜ್ ನಾಯಕ, ಮಂಜಣ್ಣ ಪೂಜಾರ, ಡಾ ಬಸವರಾಜ ಗೌಡನ ಬಾವಿ,ಸುರೇಶ್, ಶಿವಕುಮಾರ್ ಉಪಾಸಿ, ನೀಲಕಂಠ,ಪರ್ವಿನ್ ಸುಲ್ತಾನ್,ಎಸ್.ಎಸ್.ಖಾದ್ರಿ, ಪಾಗುಂಡಪ್ಪ, ಶಾಹೀನ್ ಕೌಸರ್, ತಾಯಪ್ಪ ಮರ್ಚೆಡ, ಮಲ್ಲಯ್ಯ,ಡಾ.ಸತೀಶ್ ಕೊಂತೆಮ್, ದೊಡ್ಡ ಬಸಮ್ಮ, ಮಮತಾ ಇದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.