Breaking News

ಪ್ರಕರಣ ತನಿಖಾ ಹಂತದಲ್ಲಿದೆ ಚಲನಚಿತ್ರ ಅ. 25 ರಂದು ಪ್ರದರ್ಶನ

The case is under investigation. Performance on the 25th

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ:ಪ್ರಭುರಾಜ ಕೊಡ್ಲಿ

ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ತಮ್ಮಪುರು ಗ್ರಾಮದ ಯುವ ನಟ ಮಹಿನ್ ಕುಬೇರ್ ಅಭಿನಯಿಸಿದ ಪ್ರಕರಣ ತನಿಖಾ ಹಂತದಲ್ಲಿದೆ ಚಲನಚಿತ್ರದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಸಿದ್ದರಾಮಯ್ಯ ಸ್ವಾಮಿ ಮಾತನಾಡಿ ಪಟ್ಟಣದ ಅಪರ್ಣ ಚಿತ್ರಮಂದಿರದಲ್ಲಿ ಅ. 25 ರಂದು ಯುವ ನಟ ಮಹಿನ್ ಕುಬೇರ್ ಅಭಿನಯಿಸಿದ ಪ್ರಕರಣ ತನಿಖಾ ಹಂತದಲ್ಲಿದೆ ಚಲನಚಿತ್ರ ಪ್ರದರ್ಶನ ನಡೆಯಲಿದ್ದು ತಾಲೂಕಿನ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಕ್ಕಾಗಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಲನ ಚಿತ್ರವನ್ನು ವಿಕ್ಷೀಸುವ ಮೂಲಕ ಕನ್ನಡ ಭಾಷೆಯ ಚಲನಚಿತ್ರಗಳಿಗೆ ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ತಿಳಿಸಿದರು.
ಜನಶಕ್ತಿ ಕೇಂದ್ರದ ರಾಜ್ಯಧ್ಯಾಕ್ಷರಾದ ಪ್ರಭುರಾಜ ಕೊಡ್ಲಿ ಮಾತನಾಡಿ ತಾಲೂಕಿನ ಗಡಿಭಾಗದ ಅತ್ಯಂತ ಚಿಕ್ಕ ಗ್ರಾಮದಲ್ಲಿನ ಮಹಿನ್ ಕುಬೇರ್ ಕಳೆದ ಆರು ವರ್ಷಗಳಿಂದ ರಂಗಭೂಮಿ,ಧಾರವಾಹಿ,ಚಲನಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದು ಅವರಿಗೆ ನಾವೇಲ್ಲರು ಪ್ರೋತ್ಸಾಹವನ್ನು ನೀಡುವುದಕ್ಕಾಗಿ ತಾಲೂಕಿನ ಚಿತ್ರ ಪ್ರೇಮಿಗಳು ಚಲನಚಿತ್ರವನ್ನು ವಿಕ್ಷೇಣೆ ಮಾಡಿದಲ್ಲಿ ಅವರಿಗೆ ಇನ್ನೂ ಹೆಚ್ಚಿನ ಉತ್ತಮ ಅವಕಾಶಗಳು ದೊರೆಯಲಿವೇ “ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ” ಹೆಡ್ ಬುಷ್ ಚಿತ್ರದ ಧನಂಜಯ್ ಡೈಲಾಗ್ ಹೇಳುವ ಮೂಲಕ ಈ ಚಿತ್ರ ನಾಯಕ ಮಹಿನ್ ಕುಬೇರ್ ಗೆ ಸಾಥ್ ನೀಡಬೇಕು ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಕುಮಾರ್ ನಾಯಕ್ ತಮ್ಮಪುರು,ಬುಡ್ಡಪ್ಪ ನಾಯಕ ಮಲ್ಲಿನ ಮಡಗು, ಪ್ರಭುರಾಜ್‌ಕೊಡ್ಲಿ, ಹನುಮೇಶ ನಾಯಕ ಸಾದಾಪುರ, ಹನುಮಂತ್ರಾಯ, ಸ್ವಾಮಿ ಗೋವಿನದೊಡ್ಡಿ,ಮೌನೇಶ ಮ್ಯಾಕಲ್, ಚಿದಾನಂದಸ್ವಾಮಿ, ಶಂಕರ ನಾಯಕ ತಮ್ಮಪುರು ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *