Breaking News

ಪೌರ ಕಾರ್ಮಿಕರು ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಿ:ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ,,,

Civic workers avail government facilities: Chief Ravindra Bagalkoti

ಜಾಹೀರಾತು

ಕೊಪ್ಪಳ : ರಾಜ್ಯದ ಪೌರಕಾರ್ಮಿಕರಿಗೆ ಸರಕಾರ ವಿಷೇಶ ಸೌಲಭ್ಯಗಳನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಹೇಳಿದರು.

ಅವರು ಕುಕನೂರು ಪಟ್ಟಣ ಪಂಚಾಯತಿಯಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರ ಸೇವಾ ಸಂಘದಿಂದ ಹಮ್ಮಿಕೊಂಡ ಪೌರ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೌರ ಕಾರ್ಮಿಕರ ನಿವೇಶನ ಸೌಲಭ್ಯಕ್ಕಾಗಿ ಸರಕಾರದಿಂದ 8ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ಒದಗಿಸಲಾಗುವುದು ಹಾಗೂ ಪ್ರತಿ ವರ್ಷ ಪೌರ ಕಾರ್ಮಕರ ಕಲ್ಯಾಣ ನಿಧಿಗೆ ಶೇ.20 ಹಣ ಮೀಸಲಿರಿಸಲಾಗಿರುತ್ತದೆ. ಪೌರ ಮಕ್ಕಳ ಶಿಕ್ಷಣಕ್ಕೆ ನೇರ ನೇಮಕಾತಿ ಸೌಲಭ್ಯಗಳು ಹಾಗೂ ಇನ್ನೂ ಹತ್ತು ಹಲವಾರು ಸೌಲಭ್ಯಗಳಿದ್ದು ಅದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.

ನಂತರದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಮಹಾಂತೇಶ ಹೂಗಾರ ಮಾತನಾಡಿ ನಮ್ಮ ಗ್ರಾಮ ಇಷ್ಟೊಂದು ಆರೋಗ್ಯ ಪೂರ್ಣವಾಗಿರಲು ಪೌರ ಕಾರ್ಮಿಕರ ಪರಿಶ್ರಮದಿಂದ ಸಾಧ್ಯವಾಗಿದೆ.

ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಪೌರ ಕಾರ್ಮಿಕರು ಗ್ರಾಮದ ಸ್ವಚ್ಚತೆ ಕೈಗೊಂಡು ಗ್ರಾಮವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯವಾಗಿದೆ.

ಇಂದಿನ ದಿನಗಳಲ್ಲಿ ಏಷ್ಟೇ ಹಣ ನೀಡಿದರು ಕೆಲಸ ಮಾಡುವವರ ಸಂಖ್ಯೆ ವಿರಳ, ಅಂತಹ ಕಾಲ ಘಟ್ಟದಲ್ಲಿ ಪಾರಂಪರೆಯಿಂದ ಇದೇ ವೃತ್ತಿ ಅವಲಂಭಿಸಿದ ಇವರಿಗೆ ಸರಕಾರ ಹೆಚ್ಚು ಪ್ರೋತ್ಸಾಹ ನೀಡಲಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ನಂತರದಲ್ಲಿ ಸದಸ್ಯ ಸಿದ್ದು ಉಳ್ಳಾಗಡ್ಡಿ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಮನೋರಂಜನೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಈ ವೇಳೆ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಹಬ್ಬದ ಅಂಗವಾಗಿ ಮಹಿಳೆಯರಿಗೆ ಸೀರೆ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಉಪಾಧ್ಯಕ್ಷ ಪ್ರಶಾಂತ ಆರ್ ಬೆರಳಿನ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ರಾಮಣ್ಣ ಬಂಕದಮನಿ, ನೂರುದ್ದಿನ್ ಗುಡಿಹಿಂದಲ್, ಬಾಲರಾಜ ಗಾಳಿ, ಗುದ್ನೇಪ್ಪ ನೋಟಗಾರ, ಜಗನ್ನಾಥ ಭೋವಿ, ಮಲ್ಲಿಕಾರ್ಜುನ ಚೌದರಿ, ಸಾಧಿಕ್ ಖಾಜಿ, ರಾಧಾ ಸಿದ್ದಪ್ಪ ದೊಡ್ಮನಿ, ಸಿರಾಜ ಕರಮುಡಿ, ಯಲ್ಲಪ್ಪ ಕಲ್ಮನಿ, ಶಿವರಾಜ ಯಲ್ಲಪ್ಪಗೌಡ್ರ, ಲಕ್ಷ್ಮೀ ಸಬರದ, ಆರೋಗ್ಯ ಸಹಾಯಕಿ ರಾಜೇಶ್ವರಿ ಪೌರ ಕಾರ್ಮಿಕ ಅಧ್ಯಕ್ಷೆ ಈರಮ್ಮ ಘಾಟಿ ಹಾಗೂ ಇನ್ನೀತರ ಪೌರ ಕಾರ್ಮಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೆಕ್ಕ ಪರಿಶೋದಕ ಶರಣಪ್ಪ ನಿರ್ವಹಿಸಿದರು.

About Mallikarjun

Check Also

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ

Important decision taken at the District Level Guarantee Scheme Implementation Authority Committee meeting ಬ್ಯಾಂಕಿನ ಸಾಲಕ್ಕೆ …

Leave a Reply

Your email address will not be published. Required fields are marked *