Thousands of enthusiastic runners participated in 5K, 10K by Master Athletics Association of Federation of India.
ಬೆಂಗಳೂರು, ಸೆ, 22; ಮಾಸ್ಟರ್ ಅಥ್ಲಿಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ – ಎಂಎಎಫ್ಐ ಮತ್ತು ವರ್ಲ್ಡ್ ಮಾಸ್ಟರ್ಸ್ ಅಥ್ಲಿಟಿಕ್ಸ್ ನಿಂದ ಹಿರಿಯರು, ಕಿರಿಯರು ಒಳಗೊಂಡಂತೆ 35 ರಿಂದ 100 ವರ್ಷದವರಿಗಾಗಿ 5ಕೆ ಮತ್ತು 10ಕೆ ಮಾಸ್ಟರ್ಸ್ ಓಟ ಆಯೋಜಿಸಲಾಗಿತ್ತು.
ನಗರದ ಎಚ್.ಎಸ್.ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಿಂದ ಓಟಕ್ಕೆ ಶಾಸಕ ಸತೀಶ್ ರೆಡ್ಡಿ ಚಾಲನೆ ನೀಡಿದರು.
ಒಟ್ಟು 30ಕ್ಕೂ ಅಧಿಕ ರಾಜ್ಯಗಳಿಂದ ದೇಶದಲ್ಲಿ 1000ಕ್ಕೂ ಅಧಿಕ ಉತ್ಸಾಹಿ ಓಟಗಾರರು ಪಾಲ್ಗೊಂಡಿದ್ದರು. ಓಟದಲ್ಲಿ ಗೆದ್ದವರಿಗೆ 2 ಲಕ್ಷ ರೂಪಾಯಿ ಬಹುಮಾನ ವಿತರಿಸಲಾಯಿತು.